ಕಾಪು: ಸುಗ್ಗಿ ಮಾರಿಪೂಜೆಗೆ ವೈಭವದ ಚಾಲನೆ
Team Udayavani, Mar 27, 2019, 6:30 AM IST
ಕಾಪು: ತುಳುನಾಡಿನ ಪ್ರಸಿದ್ಧ ಏಳು ಜಾತ್ರೆಗಳಲ್ಲಿ ಒಂದಾಗಿರುವ ಕಾಪು ವಿನ ಸುಗ್ಗಿ ಮಾರಿಪೂಜೆಗೆ ಮಂಗಳವಾರ ಸಂಜೆ ವೈಭವದ ಚಾಲನೆ ದೊರಕಿದ್ದು, ಬುಧವಾರ ಸಂಜೆಯವರೆಗೆ ಮುಂದು ವರಿಯಲಿದೆ.
ಮಾರಿಪೂಜೆಗೆ ಪೂರ್ವಭಾವಿಯಾಗಿ ಮಂಗಳವಾರ ರಾತ್ರಿ ಕಾಪು ಹಳೇ ಮಾರಿ ಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನ, ಕಾಪು ಹೊಸ ಮಾರಿಗುಡಿ ಮತ್ತು ಕಾಪು ಮೂರನೇ (ಕಲ್ಯ) ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸಾಂಕೇತಿಕ ಮೂರ್ತಿ ಮತ್ತು ಆಭರಣ ಸಹಿತವಾದ ಬಿಂಬವನ್ನು ಮೆರವಣಿಗೆಯ ಮೂಲಕ ತರಲಾಯಿತು. ಆಬಳಿಕ ಮಾರಿಯಮ್ಮ ದೇವಿಯ ಸಾಂಕೇತಿಕ ಮೂರ್ತಿ ಮತ್ತು ಹೊಂಗಾರಕನ ಮರದಲ್ಲಿ ಕೆತ್ತಿದ ಮೂರ್ತಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಿ, ಮಾರಿಪೂಜೆಯ ವಿವಿಧ
ಪೂಜಾ ವಿಧಿ ವಿಧಾನಗಳನ್ನು ನೆರವೇ ರಿಸಿ ಸುಗ್ಗಿ ಮಾರಿಪೂಜೆಗೆ ಚಾಲನೆ ನೀಡಲಾಯಿತು.
ಬುಧವಾರ ಸಂಜೆ ತೆರೆ
ಬುಧವಾರ ಮಧ್ಯಾಹ್ನದವರೆಗೂ ದೇವಿಯ ವೀಕ್ಷಣೆಗೆ ಅವಕಾಶವಿದೆ. ಮಧ್ಯಾಹ್ನ ಪೂಜೆ ಬಳಿಕ ಮತ್ತೆ ನಡೆ ಯುವ ದರ್ಶನ ಸೇವೆಯಲ್ಲಿ ಭಕ್ತರ ಸಂಕಷ್ಟಕ್ಕೆ ಪರಿಹಾರ, ಅಭಯ ಪ್ರಸಾದ ನೀಡಲಾಗುತ್ತದೆ. ನಂತರ ದೇವಿಯ ಮೂರ್ತಿಯನ್ನು ಮೆರವಣಿಗೆ ಯಲ್ಲಿ ಕರೆದೊಯ್ದು, ಮಲ್ಲಾರಿನಲ್ಲಿರುವ ನಿರ್ದಿಷ್ಟ ಸ್ಥಳದಲ್ಲಿ ವಿಸರ್ಜಿಸುವುದ ರೊಂದಿಗೆ ಮಾರಿಪೂಜಾ ಪೂಜಾ ವಿಧಿಗಳಿಗೆ ತೆರೆ ಎಳೆಯಲಾಗುತ್ತದೆ.
ಗದ್ದಿಗೆ ಪೂಜೆ ವಿಶೇಷ
ಗದ್ದುಗೆಯೇ ಪ್ರಧಾನವಾಗಿರುವ ಕಾಪುವಿನ ಮಾರಿಯಮ್ಮನ ಸನ್ನಿಧಿಯಲ್ಲಿ ಗದ್ದಿಗೆಪೂಜೆ ವಿಶೇಷ ಸೇವೆಯಾಗಿದೆ. ಕಾಲಾವಧಿ ಸುಗ್ಗಿ ಮಾರಿಪೂಜೆ ಸಂದರ್ಭ ಭಕ್ತಾಧಿಗಳಿಂದ 50 ಸಾವಿರಕ್ಕೂ ಅಧಿಕ ಗದ್ದಿಗೆಪೂಜೆ ಹಾಗೂ ಹೂವಿನ ಪೂಜೆ, ಕುಂಕುಮಾರ್ಚನೆ ಸೇವೆ ಹಾಗೂ ರಕ್ತಾಹಾರ ರೂಪದಲ್ಲಿ ನೂರಾರು ಕುರಿ, ಆಡು, ಲಕ್ಷಾಂತರ ಸಂಖ್ಯೆಯ ಕೋಳಿಗಳನ್ನು ಸಮರ್ಪಿಸಲ್ಪಡುತ್ತದೆ.
ಸುಗ್ಗಿ ಮಾರಿಪೂಜೆಯ ಪ್ರಯುಕ್ತ ಮೂರು ಮಾರಿಗುಡಿಗಳನ್ನೂ ವಿಶೇಷ
ವಿದ್ಯುತ್ ದೀಪಾಲಂಕಾರ ಮತ್ತು ಪುಷ್ಪಾ ಲಂಕಾರದೊಂದಿಗೆ ಅಲಂಕಾರ ಗೊಳಿಸಲಾಗಿದೆ. ಕಾಪು ಮಾರಿಯಮ್ಮ ದೇವಿಯ ಸನ್ನಿಧಾನದಲ್ಲಿ ಸುಗ್ಗಿ ಮಾರಿಪೂಜೆ ಅತ್ಯಂತ ವಿಶೇಷವಾಗಿ ಆಚರಿಸಲಾಗುತ್ತಿದ್ದು ಲಕ್ಷಾಂತರ ಮಂದಿ ದೇವಿಯ ದರ್ಶನ ಪಡೆದರು.
ಬಿಗು ಪೊಲೀಸ್ ಬಂದೋಬಸ್ತ್
ಮೂರು ಮಾರಿಗುಡಿಗಳ ಪರಿಸರ ದಲ್ಲೂ ಕಾಪು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ. ಹಿರಿಯ ಅಧಿಕಾರಿಗಳ ಸಹಿತವಾಗಿ ಸುಮಾರು 100ಕ್ಕೂ ಅಧಿಕ ಮಂದಿ ಪೊಲೀಸರನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದ್ದು, ಆಯ್ದ ಕಡೆ 18 ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದೆ.
ಗಮನ ಸೆಳೆದ ರಜತ ರಥ
ಕಾಪು ಪೇಟೆ ಗೌಡ ಸಾರಸ್ವತ ಸಮಾಜಕ್ಕೆ ಒಳಪಟ್ಟಿರುವ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ದೇವಿಯ ಭಕ್ತವೃಂದದ ತನು, ಮನ, ಧನದ ಸಹಕಾರದಿಂದ 1 ಕೋ. ರೂ. ರೂ. ವೆಚ್ಚದ ರಜತ ರಥ ನಿರ್ಮಾಣಗೊಂಡಿದ್ದು, ವೆಂಕಟರಮಣ ದೇವಸ್ಥಾನದಿಂದ ಮಾರಿಗುಡಿಗೆ ದೇವಿಯ ಬಿಂಬವನ್ನು ಕುಳ್ಳಿರಿಸಿಕೊಂಡು ಬಂದು ರಥವನ್ನು ಸಮರ್ಪಿಸಿದ್ದು ಈ ಬಾರಿಯ ವಿಶೇಷತೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್; ಕುಟುಂಬದ 4 ಫೌಂಡೇಶನ್ ಆಸ್ತಿ ಹಂಚಿಕೆ
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
Supreme Court: ಕ್ರೆಡಿಟ್ ಕಾರ್ಡ್ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!
Tribute Dr.Singh: ಆರ್ಥಿಕ ಭಾಗ್ಯ ವಿಧಾತ…ಡಾ.ಮನಮೋಹನ್ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.