ಟೆಸ್ಟ್ ಡ್ರೈವ್ ತಂದ ಆಪತ್ತು: ಉದ್ಯಮಿ ಸಾವು
Team Udayavani, Mar 27, 2019, 11:43 AM IST
ಬೆಂಗಳೂರು: ಟೆಸ್ಟ್ ಡ್ರೈವ್‌ಗೆ ಕೊಂಡೊಯ್ದಿದ್ದ ದುಬಾರಿ ಮೌಲ್ಯದ ರೇಂಜ್ ರೋವರ್ ಕಾರು ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವ ಉದ್ಯಮಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಗಿರಿನಗರ ನಿವಾಸಿ ಸಾಗರ್(31) ಮೃತಪಟ್ಟ ಉದ್ಯಮಿ. ಸಾಗರ್ ಪತ್ನಿ ಸಂಧ್ಯಾ(28), ಪುತ್ರ ಸಮರ್ಥ(6), ಸ್ನೇಹಿತ ಗೌತಮ್ ಹಾಗೂ ಶೋರೂಂನ ಸಿಬ್ಬಂದಿ ಶಿವಕುಮಾರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಗರ್ ಸ್ವಂತ ಉದ್ಯಮ ಹೊಂದಿದ್ದು, ಕುಟುಂಬದ ಜತೆ ಗಿರಿನಗರದಲ್ಲಿ ವಾಸವಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಗೌತಮ್, ಸಾಗರ್ ಅವರ ವ್ಯವಹಾರದ ಪಾಲುದಾರಿಕೆ ಹೊಂದಿದ್ದಾರೆ ಎಂದು ಪೊಲೀಸರು ಹೇಳಿದರು.
ಮಂಗಳವಾರ ಬೆಳಗ್ಗೆ ಸಾಗರ್, ಪತ್ನಿ, ಪುತ್ರ ಹಾಗೂ ಸ್ನೇಹಿತನ ಜತೆ ಹೊಸೂರು ಮುಖ್ಯರಸ್ತೆಯ ರೂಪೇನಾ ಅಗ್ರಹಾರದಲ್ಲಿರುವ ಶೋರೂಂವೊಂದರಲ್ಲಿ ದುಬಾರಿ ಮೌಲ್ಯದ ರೇಂಜ್ ರೋವರ್ ಕಾರು ಖರೀದಿಗೆ ಹೋಗಿದ್ದರು.
ಟೆಸ್ಟ್ ಡ್ರೈವ್ ಮಾಡಲು ಶೋ ರೂಂ ಸಿಬ್ಬಂದಿ ಜತೆ ಮಧ್ಯಾಹ್ನ 2.30ರ ಸುಮಾರಿಗೆ ನೈಸ್ ರಸ್ತೆಗೆ ಬಂದಿದ್ದಾರೆ. ಈ ವೇಳೆ ಸಾಗರ್ ಕಾರು ಚಾಲನೆ ಮಾಡುತ್ತಿದ್ದು, ಪಕ್ಕದ ಸೀಟಿನಲ್ಲಿ ಶೋ ರೂಂ ಸಿಬ್ಬಂದಿ ಕುಳಿತಿದ್ದರು. ಸ್ನೇಹಿತ, ಪತ್ನಿ ಹಾಗೂ ಪುತ್ರ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.
ಹೊಸಕೆರೆ ಹಳ್ಳಿ ಟೋಲ್ ಗೇಟ್ ಬಳಿ ಗೌತಮ್ ವೇಗವಾಗಿ ಕಾರು ಚಾಲನೆ ಮಾಡಿದ್ದು, ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಸುಮಾರು 30 ಅಡಿ ಆಳಕ್ಕೆ ಕಾರು ಬಿದ್ದಿದ್ದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾಗರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪತ್ನಿ ಸಂಧ್ಯಾ, ಪುತ್ರ ಸಮರ್ಥ, ಸ್ನೇಹಿತ ಗೌತಮ್ ಹಾಗೂ ಶೋ ರೂಂ ಸಿಬ್ಬಂದಿ ಶಿವಕುಮಾರ್‌ಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ನಾಲ್ವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು. ಪ್ರಕರಣ ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.