ಗೋವಾದಲ್ಲಿ ಮಧ್ಯರಾತ್ರಿ “ಆಪರೇಷನ್ ಕಮಲ’!
ಸರಕಾರಕ್ಕೆ ಬೆಂಬಲ ನೀಡಿದ್ದ ಎಂಜಿಪಿ ಪಕ್ಷದ ಇಬ್ಬರು ಬಿಜೆಪಿಗೆ ಸೇರ್ಪಡೆ
Team Udayavani, Mar 28, 2019, 6:00 AM IST
ಪಣಜಿ: ಗೋವಾ ರಾಜ್ಯ ರಾಜಕೀಯ ಮಹತ್ವದ ತಿರುವು ಪಡೆದಿದ್ದು, ಎಂಜಿಪಿ ಪಕ್ಷದ ಸುಧೀನ್ ಧವಳೀಕರ್ ಅವರನ್ನು ಬುಧವಾರ ಉಪ ಮುಖ್ಯಮಂತ್ರಿ ಸ್ಥಾನದಿಂದ ಕೈಬಿಡಲಾಗಿದೆ. ಎಂಜಿಪಿ ಪಕ್ಷದ ಮೂವರು ಶಾಸಕರ ಪೈಕಿ ಮನೋಹರ್ ಆಜಗಾಂವಕರ್ ಮತ್ತು ದೀಪಕ್ ಪಾವುಸ್ಕರ್ ಬಿಜೆಪಿಗೆ ಸೇರ್ಪಡೆಯಾದ ಅನಂತರ ಈ ಬೆಳವಣಿಗೆ ನಡೆದಿದೆ.
ಮುಖ್ಯಮಂತ್ರಿ ಮನೋಹರ್ ಪಾರೀಕರ್ ನಿಧನದ ಬಳಿಕ ಪ್ರಮೋದ್ ಸಾವಂತ್ ನೂತನ ಸಿಎಂ ಆಗಿ, ಇಬ್ಬರು ಡಿಸಿಎಂಗಳು ಮಧ್ಯರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಪೈಕಿ ಎಂಜಿಪಿ ಪಕ್ಷದ ಸುಧೀನ್ ಧವಳೀಕರ್ ಕೂಡ ಇದ್ದರು. ಗೋವಾದ ಶಿರೋಡ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಎಂಜಿಪಿ ಪಕ್ಷದ ದೀಪಕ್ ಪಾವುಸ್ಕರ್ ಬಿಜೆಪಿ ವಿರುದ್ಧ ಕಣಕ್ಕಿಳಿ ದಿದ್ದರು. ಇದು ಕೂಡ ಕೊಂಚ ಅಸಮಾಧಾನಕ್ಕೆ ಕಾರಣವಾಗಿತ್ತು. ಇಷ್ಟೇ ಅಲ್ಲದೆ ಎಂಜಿಪಿ ಪಕ್ಷದ ಆಜಗಾಂವಕರ್ ಮತ್ತು ಪಾವುಸ್ಕರ್ ಕೂಡ ಪಕ್ಷದ ಮೇಲೆ ಬೇಸರ ವ್ಯಕ್ತಪಡಿಸಿದ್ದರು. ಈ ಎಲ್ಲ ಕಾರಣಗಳಿಂದ ಇಬ್ಬರು ಶಾಸಕರು ಬಿಜೆಪಿಗೆ ಸೇರ್ಪಡೆ ಯಾಗಿದ್ದಾರೆ. ಇದರಿಂದಾಗಿ ಬಿಜೆಪಿಯ ಸಂಖ್ಯಾಬಲ ಹೆಚ್ಚಳವಾಗಿದ್ದರಿಂದ ಎಂಜಿಪಿ ಪಕ್ಷದ ಸುಧೀನ್ ಧವಳೀಕರ್ ಅವರನ್ನು ಉಪಮುಖ್ಯಮಂತ್ರಿ ಸ್ಥಾನದಿಂದ ಬಿಜೆಪಿ ಕೈಬಿಟ್ಟಿದೆ.
ಎಂಜಿಪಿ ಪಕ್ಷವು ಬಿಜೆಪಿ ಮೈತ್ರಿ ಸರಕಾರವನ್ನು ಅಸ್ಥಿರ ಗೊಳಿಸುವ ಪ್ರಯತ್ನ ನಡೆಸಿತ್ತು. ಈ ಹಿನ್ನೆಲೆಯಲ್ಲಿ ನಾವು ಎಂಜಿಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಬೇಕಾಯಿತು ಎಂದು ಸಚಿವ ಬಾಬು ಆಜಗಾಂವಕರ್ ಸಮರ್ಥಿಸಿಕೊಂಡಿದ್ದಾರೆ. ಪ್ರಸ್ತುತ ಸುಧೀನ್ ಧವಳೀಕರ್ ಓರ್ವರೇ ಉಳಿದಿದ್ದಾರೆ.
ಮಧ್ಯರಾತ್ರಿ ಸೇರ್ಪಡೆ
ಎಂಜಿಪಿಯ ಆಜಗಾಂವಕರ್ ಮತ್ತು ದೀಪಕ್ ಮಂಗಳವಾರ ರಾತ್ರಿ 2ರ ವೇಳೆ ಗೋವಾ ಉಪಸಭಾಪತಿ ಮೈಕಲ್ ಅವರಿಗೆ ಎಂಜಿಪಿ ಬಿಜೆಪಿಯೊಂದಿಗೆ ವಿಲೀನಗೊಳ್ಳುವ ಪತ್ರ ನೀಡಿದರು.
ಪಕ್ಷಾಂತರ ಕಾಯ್ದೆ ಅನ್ವಯವಾಗುವುದಿಲ್ಲ
ಪಕ್ಷಾಂತರ ಕಾಯ್ದೆ ಅನುಸಾರ ಎರಡನೇ ಮೂರಂಶಕ್ಕಿಂತ ಹೆಚ್ಚು ಸದಸ್ಯರು ಪಕ್ಷಾಂತರ ಮಾಡಿದರೆ ಅವರ ಸದಸ್ಯತ್ವ ರದ್ದಾಗುವುದಿಲ್ಲ. ಪಕ್ಷ ಮೂವರು ಸದಸ್ಯರನ್ನು ಮಾತ್ರ ಹೊಂದಿತ್ತು. ಇಬ್ಬರು ಶಾಸಕರ ಸೇರ್ಪಡೆಯಿಂದಾಗಿ ಬಿಜೆಪಿಯ ಬಲ 12ರಿಂದ 14ಕ್ಕೆ ಏರಿದಂತಾಗಿದೆ.
ಡಿಸಿಎಂ ಸ್ಥಾನದಿಂದ ಸುದೀನ್ ಧವಳೀಕರ್‌ಗೆ ಕೊಕ್
ಗೋವಾ ರಾಜ್ಯ ರಾಜಕೀಯದಲ್ಲಿ ಕ್ಷಣಕ್ಕೊಂದು ತಿರುವು
ಬಿಜೆಪಿ ಬಲ 12ರಿಂದ 14ಕ್ಕೆ ಏರಿಕೆ,
ಸರಕಾರ ಸುಭದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.