ಮೈಟ್‌ನಲ್ಲಿ “ಸೆನ್ಶಿಯಾ-2019’ಕ್ಕೆ ಚಾಲನೆ

Team Udayavani, Mar 28, 2019, 6:10 AM IST

2703md1Sentia-Mite

ಮೂಡುಬಿದಿರೆ:”ಬಲೂನ್‌ ನೆಲ ಬಿಟ್ಟು ಮೇಲ ಕ್ಕೇರಲು ಸಾಧ್ಯವಾಗುವುದು ಅದು ತುಂಬಿಕೊಂಡ ಹೀಲಿಯಂ ಅನಿಲದಿಂದಲೇ ಹೊರತು ಬಾಹ್ಯ ಬಣ್ಣದಿಂದಲ್ಲ. ಅಂತೆಯೇ ನಮ್ಮೊಳಗೆ ತುಂಬಿಸಿಕೊಂಡಿರುವ ಸಾಮರ್ಥ್ಯ, ಮೌಲ್ಯಗಳಿಂದಾಗಿ ಯಶಸ್ಸಿನ ಪಥದಲ್ಲಿ ಸಾಗಲು ಸಾಧ್ಯವೇ ಹೊರತು ಬಾಹ್ಯ ಅಲಂಕಾರ, ಬಣ್ಣಗಳಿಂದಲ್ಲ’ ಎಂದು ಟೊರ್ರಿಹ್ಯಾರಿಸ್‌ ಬಿಸಿನೆಸ್‌ ಸೊಲ್ಯುಷನ್ಸ್‌ನ ಚೀಫ್‌ ಪೀಪಲ್‌ ಆಫೀಸರ್‌ ಬೃಜೇಶ್‌ ಎಸ್‌.ಹೇಳಿದರು.

ಬಡಗಮಿಜಾರಿನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಎಂಜಿನಿಯರಿಂಗ್‌ನಲ್ಲಿ ಬುಧವಾರ ಪ್ರಾರಂಭವಾದ 12ನೇ ವರ್ಷದ “ಸೆನ್ಶಿಯಾ-2019′ ರಾಜ್ಯ ಮಟ್ಟದ ಅಂತರ್‌ ಕಾಲೇಜು ಸಾಂಸ್ಕೃತಿಕ, ತಾಂತ್ರಿಕ ಹಾಗೂ ಮ್ಯಾನೇಜೆ¾ಂಟ್‌ ಹಬ್ಬ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿ ಅಥವಾ ಕಂಪೆನಿಗಳು ತಮ್ಮೊಳಗಿನ ಪ್ರತಿಭೆ, ಸಂಪನ್ಮೂಲಗಳಿಂದ ಏರಬಹುದಾದ ಎತ್ತರಕ್ಕೆ ಏರಲು ಸಾಧ್ಯವಾಗುತ್ತದೆ’ ಎಂದರು.

“ಮೈಟ್‌’ನ ಗೌರವ ಸಲಹೆಗಾರ ಪ್ರೊ| ಜಿ.ಆರ್‌. ರೈ ಮಾತನಾಡಿ, 12 ವರ್ಷಗಳ ಹಿಂದೆ ಹುಟ್ಟಿಕೊಂಡ ಮೈಟ್‌ ಶಿಕ್ಷಣದೊಂದಿಗೆ ಬೌದ್ಧಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಅರಳುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿ, ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವ ಸ್ಪರ್ಧಾಳುಗಳು ಅವಿಭಜಿತ ದ.ಕ. ಜಿಲ್ಲೆಯ ಸುತ್ತ ಪುಟ್ಟ ಪ್ರವಾಸ ಕೈಗೊಂಡು ಈ ಭಾಗದ ವಿಶೇಷತೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜಲಕ್ಷ್ಮೀ ಎಜುಕೇಶನ್‌ ಟ್ರಸ್ಟ್‌ ಅಧ್ಯಕ್ಷ ರಾಜೇಶ್‌ ಚೌಟ ಅವರು, “ಸೆನ್ಶಿಯಾ ತನ್ನ ಚಿರನೂತನತೆಯೊಂದಿಗೆ 12ನೇ ಅಧ್ಯಾಯ ತೆರೆದಿದೆ; ಈ ಹಬ್ಬದ ಉತ್ತಮಾಂಶಗಳನ್ನು ಸ್ಪರ್ಧಿಗಳು ತಮ್ಮೊಂದಿಗೆ ಒಯ್ಯಬೇಕು’ ಎಂಬ ಆಶಯ ವ್ಯಕ್ತಪಡಿಸಿದರು.

9 ವೇದಿಕೆ; 63 ಸ್ಪರ್ಧೆ
ಪ್ರಾಚಾರ್ಯ ಡಾ| ಜಿ. ಎಲ್‌. ಈಶ್ವರ ಪ್ರಸಾದ್‌ ಸ್ವಾಗತಿಸಿ ಪ್ರಸ್ತಾವನೆಗೈದು, ರಾಜ್ಯದ 45 ಎಂಜಿನಿಯರಿಂಗ್‌, ಮ್ಯಾನೇಜ್ಮೆಂಟ್ ಸಂಸ್ಥೆಗಳು ಸಹಿತ 1,700ರಷ್ಟು ಸ್ಪರ್ಧಾಳುಗಳು ಆಗಮಿಸಿದ್ದು 9 ವೇದಿಕೆಗಳಲ್ಲಿ 63 ವಿಷಯಗಳಲ್ಲಿ ಸ್ಪರ್ಧೆಗಳನ್ನು ಸಂಯೋಜಿಸಲಾಗಿದೆ.

ಮಾ. 28ರಂದು “ಸೆನ್ಶಿಯಾ ಪ್ರಶಸ್ತಿ ಪ್ರದಾನ, ಮಿಖಾ ಸಿಂಗ್‌ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಅಚಲ್‌ ಪೂಂಜಾ, ಅಪೂವಾ‌ì ನಿರೂಪಿಸಿದರು. ಸೆನ್ಶಿಯಾ ಮುಖ್ಯ ಸಂಯೋಜಕಿ ಡಾ| ಆಶಾ ಕ್ರಾಸ್ತ ವಂದಿಸಿದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.