![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Mar 28, 2019, 6:06 AM IST
ಮಂಗಳೂರು: ಲಿಫ್ಟ್ ಬಾಗಿಲಿನ ಎಡೆಯಲ್ಲಿ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟ ಘಟನೆ ನಗರದ ಉರ್ವ ಚಿಲಿಂಬಿಯಲ್ಲಿ ಬುಧವಾರ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಹೂವಿನಹಡಗಲಿಯ ನೀಲಪ್ಪ-ಪಾರ್ವತಿ ದಂಪತಿಯ ಪುತ್ರ ಮಂಜುನಾಥ ಮೃತ ಬಾಲಕ. ನೀಲಪ್ಪ ಅವರು ಅಪಾರ್ಟ್‌ಮೆಂಟ್‌ನ ವಾಚ್‌ಮನ್ ಆಗಿದ್ದರೆ, ಪಾರ್ವತಿ ಅಲ್ಲಿ ಶುಚಿತ್ವ ಕೆಲಸ ಮಾಡುತ್ತಿದ್ದಾರೆ.
ಅಪಾರ್ಟ್‌ಮೆಂಟ್‌ನ ತಳ ಅಂತಸ್ತಿ ನಲ್ಲಿ ನೀಲಪ್ಪ ಅವರ ಮನೆ ಇದ್ದು, ಬುಧವಾರ ಮಧ್ಯಾಹ್ನ ಪಾರ್ವತಿ ಮೇಲಿನ ಮಹಡಿಗಳಲ್ಲಿ ಶುಚಿತ್ವ ನಿರತರಾಗಿದ್ದರು. ಈ ವೇಳೆ ಬಾಲಕ ತಾಯಿಯ ಬಳಿಗೆ ತೆರಳಲು ಲಿಫ್ಟ್ ಹತ್ತಿದ್ದು ಬಾಗಿಲಿನೆಡೆಗೆ ಸಿಲುಕಿ ಕೊಂಡ. ಸನಿಹದಲ್ಲೇ ಸಹೋದರಿ ಭಾಗ್ಯಾ ತತ್‌ಕ್ಷಣ ತಾಯಿ ಮತ್ತಿತರರಿಗೆ ವಿಷಯ ತಿಳಿಸಿದಳು. ಆದರೆ ಈ ಸಂದರ್ಭ ನೀಲಪ್ಪ ಅವರು ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ಹೋಗಿದ್ದರು.
ಸ್ಪಷ್ಟ ಮಾಹಿತಿ ಇಲ್ಲ
ಘಟನೆ ಹೇಗಾಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಬಾಲಕ ಲಿಫ್ಟ್‌ನಲ್ಲಿ ಆಟ ಆಡುತ್ತಾ ಇದ್ದು, ಈ ಸಂದರ್ಭ ಅದು ಏಕಾಏಕಿ ಮೇಲ್ಗಡೆ ಹೋಗಿರಬಹು ದೆಂದು ಶಂಕಿಸಲಾಗಿದೆ. ಇದುಡಬಲ್ ಡೋರ್‌ಗಳ ಸ್ವಯಂ ಚಾಲಿತ ಲಿಫ್ಟ್ ಆಗಿದೆ.2ನೇ ತರಗತಿ ವಿದ್ಯಾರ್ಥಿಬಾಲಕ ಮಂಜುನಾಥ್ ಉರ್ವ ಕೆನರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದನು. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
You seem to have an Ad Blocker on.
To continue reading, please turn it off or whitelist Udayavani.