ನಿಯಂತ್ರಣ ಕೊಠಡಿ ನಿಯಂತ್ರಿಸಲು ಮಹಿಳೆಯರು


Team Udayavani, Mar 28, 2019, 6:30 AM IST

niyantrana-kotadi

ಕಾಸರಗೋಡು: ಲೋಕಸಭೆ ಚುನಾವಣೆ ಸಿದ್ಧತೆ ಅಂಗವಾಗಿ ಆರಂಭಿಸಲಾದ ಜಿಲ್ಲೆಯ ನಿಯಂತ್ರಣ ಕೊಠಡಿಯನ್ನು ನಿಯಂತ್ರಿಸುತ್ತಿರುವುದು ಮಹಿಳೆಯರು.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಹಿತ ದೂರುಗಳನ್ನು, ಮತದಾರರ ಸಹಾಯ ವಾಣಿ ಇತ್ಯಾದಿಗಳನ್ನು ನಿಯಂತ್ರಿಸುವ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಈ ನಿಯಂತ್ರಣ ಕೊಠಡಿ ಕಿರಿಯ ವರಿಷ್ಠಾಧಿಕಾರಿಗಳಾದ ಇಬ್ಬರು ಮಹಿಳೆಯರ ನೇತೃತ್ವದಲ್ಲಿ ಚಟುವಟಿಕೆ ನಡೆಸುತ್ತಿದೆ. ರಾಜ್ಯದಲ್ಲಿ ಮಹಿಳೆಯರೇ ನೇತೃತ್ವ ನೀಡುತ್ತಿರುವ ಏಕೈಕ ನಿಯಂತ್ರಣ ಕೊಠಡಿ ಇದಾಗಿದೆ.

ಕಿರಿಯ ವರಿಷ್ಠಾಧಿಕಾರಿಗಳಾದ ಸಿ.ಜಿ. ಶ್ಯಾಮಲಾ, ಇಂದೂ ಎಂ. ದಾಸ್‌ ಅವರನ್ನು ನೋಡಲ್‌ ಅಧಿಕಾರಿಗಳಾಗಿ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ನೇಮಕಗೊಳಿಸಿದ್ದಾರೆ. ಗುಮಾಸ್ತರಾದ ಷೀಜಾ ಎ., ನಮಿತಾ ಎ., ಸಜೀತಾ ಪಿ.ಎ. ಈ ಕೊಠಡಿಯಲ್ಲಿ ಸಕ್ರಿಯ ರಾಗಿದ್ದಾರೆ.

ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿದ ಸಂಬಂಧ ದೂರು ಸ್ವೀಕರಿಸುವ ಸಿ-ವಿಜಿಲ್‌(ಸಿಟಿಝನ್‌ ವಿಜಿಲ್‌) ಆಪ್ಲಿಕೇಷನ್‌, 04994-255825, 04994-255676 ದೂರವಾಣಿಗಳಿಗೆ ಲಭಿಸುವ ದೂರುಗಳು, ಮತದಾರರ ಸಹಾಯ ವಾಣಿಯಾಗಿರುವ “1950′ ಎಂಬ ನಂಬ್ರಕ್ಕೆ ಬರುವ ಸಾರ್ವಜನಿಕ ಸಂಶಯಗಳು ಇತ್ಯಾದಿಗಳ ಪರಿಹಾರ ಉದ್ದೇಶದಿಂದ ಈ ನಿಯಂತ್ರಣ ಕೊಠಡಿ ಚಟುವಟಿಕೆ ನಡೆಸುತ್ತಿದೆ.

ಸಿ-ವಿಜಿಲ್‌ ಆ್ಯಪ್‌ನಲ್ಲಿ ಈ ವರೆಗೆ 32 ದೂರುಗಳು ಲಭಿಸಿವೆ. ಅವುಗಳಿಗೆ ಪರಿಹಾರ ಲಭಿಸಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಸ್ಥಾಪಿಸಲಾದ ಭಿತ್ತಪತ್ರ, ಬ್ಯಾನರ್‌, ಪತಾಕೆಗಳು ಇತ್ಯಾದಿ ಸಂಬಂಧ ದೂರುಗಳು ಸಿ-ವಿಜಿಲ್‌ನಲ್ಲಿ ಅಧಿಕವಾಗಿ ಲಭಿಸಿವೆ. ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಮೊಬೈಲ್‌ ಫೋನ್‌ ಕೆಮರಾ‌ದಲ್ಲಿ ಫೋಟೋ ಯಾ ವೀಡಿಯೋ ಚಿತ್ರೀಕರಿಸಿ ಸಿ-ವಿಜಿಲ್‌ಗೆ ಕಳುಹಿಸಿದರೆ, ಆ ಮೂಲಕ ಜಿಲ್ಲಾ ಚುನಾವಣೆ ಕೇಂದ್ರಕ್ಕೆ ರವಾನಿಸಲಾಗುತ್ತದೆ. ತತ್‌ಕ್ಷಣ ಸ್ಕಾÌಡ್‌ ಪ್ರದೇಶಕ್ಕೆ ತಲಪಿ ಕ್ರಮ ಕೈಗೊಳ್ಳುತ್ತದೆ.

ದೂರು ಆ್ಯಪ್‌ ಲೋಡ್‌ ನಡೆಸಿದ ತತ್‌ಕ್ಷಣ ಯೂನಿಕ್‌ ಐಡಿ ಯೊಂದು ಲಭಿಸುತ್ತದೆ. ಈ ಮೂಲಕ ದೂರಿನ ಫೋಲೋ ಅಪ್‌ ಮೊಬೈಲ್‌ನಲ್ಲೇ ಟ್ರಾಕ್‌ ನಡೆಸಬಹುದಾಗಿದೆ. ಒಬ್ಬರಿಗೆ ಒಂದಕ್ಕಿಂತ ಅಧಿಕ ದೂರುಗಳನ್ನು ದಾಖಲಿಸಬಹುದು ಎಂಬುದು ಈ ಸೌಲಭ್ಯದ ವಿಶೇಷತೆಯಾಗಿದೆ. ದೂರುದಾತನ ಮಾಹಿತಿಗಳನ್ನು ಗುಪ್ತವಾಗಿರಿಸಲಾಗುವುದು.

ಮೊಬೈಲ್‌ ಫೋನ್‌ನಲ್ಲಿ ಬಹಳ ಸುಲಭ ವಾಗಿ ಬಳಸಬಹುದಾದ ರೀತಿ ಆ್ಯಪ್‌ ರಚಿಸ ಲಾಗಿದೆ. ನೀತಿಸಂಹಿತೆ ಉಲ್ಲಂಘನೆ ನಡೆದಿ ರುವ ಪ್ರದೇಶಗಳಲ್ಲಿ ನೇರವಾಗಿ ತೆರಳಿ ಚಿತ್ರ ಪಡೆದರೆ ಮಾತ್ರ ಆ್ಯಪ್‌ ಮೂಲಕ ರವಾನಿಸ ಬಹುದಾಗಿದೆ. ಇತರರು ಪಡೆದ ಚಿತ್ರ ಪಡೆದು ಅಪ್‌ ಲೋಡ್‌ ಸಾಧ್ಯವಿಲ್ಲ. ಈ ಮೂಲಕ ಹುಸಿದೂರುಗಳನ್ನು ದಾಖಲಿಸಲು ಸಾಧ್ಯವಿಲ್ಲ. ನಿರಂತರ 5 ನಿಮಿಷಗಳ ಕಾಲ ಮಾತ್ರ ಈ ಆ್ಯಪ್‌ ಚಟುವಟಿಕೆ ನಡೆಸುತ್ತದೆ. ಮತ್ತೆ ಆ್ಯಪ್‌ ತೆರೆದು ದೂರು 5 ನಿಮಿಷಗಳ ಅವಧಿಯಲ್ಲಿ ಸೀಮಿತಗೊಳಿಸಿ ರವಾನಿಸಬೇಕಾಗುತ್ತದೆ. ಸಿ-ವಿಜಿಲ್‌ ಆ್ಯಪ್‌ ಪ್ಲೇಸೋrರ್‌ನಲ್ಲಿ ಲಭ್ಯವಿದೆ.

ದೂರುಗಳಿಗೆ ತತ್‌ಕ್ಷಣ ಪರಿಹಾರ
ಚುನಾವಣೆ ಸಂಬಂಧ ದೂರುಗಳಿದ್ದಲ್ಲಿ 04994-255825, 04994- 255676 ನಂಬ್ರಗಳಿಗೆ ನೀಡಬಹುದು. ಈ ದೂರುಗಳಿಗೂ ತತ್‌ಕ್ಷಣ ಪರಿಹಾರ ಲಭಿಸಲಿದೆ. ಮತದಾರರ ಸಹಾಯವಾಣಿ 1950 ನಂಬ್ರಕ್ಕೆ ಈಗಾಗಲೇ 175 ದೂರುಗಳು ಲಭಿಸಿವೆ. ಅನಿವಾಸಿ ಭಾರತೀಯರ ಮತದಾನ, ಗುರುತು ಚೀಟಿ ಪಡೆಯುವಿಕೆ ಇತ್ಯಾದಿಗಳ ಮಾಹಿತಿ ನೀಡುವಲ್ಲಿ ಈ ನಿಯಂತ್ರಣ ಕೊಠಡಿಯ ಸದಸ್ಯೆಯರು ತಾಳ್ಮೆಯಿಂದ ವ್ಯವಹರಿಸುತ್ತಾರೆ.

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.