ಮುಗಿಯಿತು ರಾಹುಕಾಲ, ಗುಳಿಗಕಾಲ!
Team Udayavani, Mar 28, 2019, 1:37 PM IST
ಈ ಹಿಂದೆ ತೆರೆ ಕಂಡು ಸುದ್ದಿ ಮಾಡಿದ್ದ ಪತ್ತೀಸ್ ಗ್ಯಾಂಗ್ ಸಿನೆಮಾ ತಂಡದ ಮತ್ತೊಂದು ಸಿನೆಮಾ ‘ರಾಹುಕಾಲ ಗುಳಿಗಕಾಲ’ ಚಿತ್ರೀಕರಣ ಮುಗಿಸಿ ಈಗ ಡಬ್ಬಿಂಗ್ ಕೂಡ ಮುಗಿಸಿದೆ. ಸೂರಜ್ ಬೋಳಾರ್ ನಿರ್ದೇಶನವಿರುವ ಈ ಸಿನೆಮಾವನ್ನು ಪ್ರೀತಂ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮನೋಜ್ ಕುಮಾರ್ ಪ್ರಸ್ತುತಿಯಲ್ಲಿ ಸಿನೆಮಾ
ಮೂಡಿ ಬರಲಿದ್ದು, ನಾಯಕನಾಗಿ ಅರ್ಜುನ್ ಕಾಪಿಕಾಡ್ ಮತ್ತು ನಾಯಕಿಯಾಗಿ ನವ್ಯತಾ ರೈ ಅವರು ನಟಿಸಲಿದ್ದಾರೆ.
ಇದೊಂದು ನಿಜ ಜೀವನಕ್ಕೆ ಹತ್ತಿರವಿರುವ ಸಿನೆಮಾ. ನಿಜ ಜೀವನದಲ್ಲಿ ನಡೆಯಬಹುದಾದ ಘಟನೆಗಳನ್ನು ಕೇಂದ್ರೀಕರಿಸಿಕೊಂಡೇ ಈ ಸಿನೆಮಾದ ಕಥೆ ಬರೆಯಲಾಗಿದೆ. ಅದ್ದರಿಂದ ಇದು ನೈಜತೆಯನ್ನು ಉಳಿಸಿಕೊಂಡಿರುವ ಸಿನೆಮಾ ಎಂದೇ ಗುರುತಿಸಿಕೊಳ್ಳುವ ಸಾಧ್ಯತೆಯಿದೆ. ಮಣಿಕಾಂತ್ ಕದ್ರಿ ಅವರ ಸಂಗೀತ, ಮಾಸ್ ಮಾದ ಅವರ ಸಾಹಸ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಸಿನೆಮಾದಲ್ಲಿ ಅರವಿಂದ ಬೋಳಾರ್,
ಚಂದ್ರಹಾಸ ಉಳ್ಳಾಲ, ವಿಸ್ಮಯ ವಿನಾಯಕ್ ನಟಿಸುತ್ತಿದ್ದು, ಪ್ರತಿಭಾನ್ವಿತ ಹೊಸ ಕಲಾವಿದರು ಕೂಡ ತಮ್ಮ ಅಭಿನಯ ಕೌಶಲವನ್ನು ತೋರಿಸಿದ್ದಾರೆ. ಕೆಮರಾದಲ್ಲಿ ಸಿದ್ದು ಜಿ.ಎಸ್., ಸುರೇಶ್ ಅವರ ಸಂಕಲನದಲ್ಲಿ ಚಿತ್ರವು ತೆರೆ ಗೇರಲು ಸಿದ್ಧತೆ ನಡೆಸುತ್ತಿದೆ.