ತುಳುನಾಡ ಸೇವಾ ಸಮಾಜ ಮೀರಾ-ಭಾಯಂದರ್ ಜಾನಪದ ನೃತ್ಯ ಸ್ಪರ್ಧೆ-ಸಮ್ಮಾನ
Team Udayavani, Mar 28, 2019, 5:57 PM IST
ಮುಂಬಯಿ: ಜಾತಿ, ಮತ, ಪಂಗಡಗಳನ್ನು ಮೀರಿ ನಿಂತ ತುಳು ಭಾಷೆಗೆ ಜನರನ್ನು ಸಂಘಟಿಸುವ ವಿಶೇಷ ಶಕ್ತಿ ಇದೆ. ಭಾರತೀಯ ಸಂಸ್ಕೃತಿಯೊಂದಿಗೆ ಸಮ್ಮಿಲಿತಗೊಂಡಿರುವ ಮನುಷ್ಯನ ವಿಕಾಸಕ್ಕೆ ಸಹಾಯವಾಗುವಂತಹ ಗುಣವನ್ನು ತುಳು ಸಂಸ್ಕೃತಿ ಹೊಂದಿದೆ.. ತುಳುವರು ಪ್ರಕೃತಿ ಮತ್ತು ಇತರ ಜೀವಿಗಳ ಸಂಬಂಧಗಳನ್ನು ನಂಬಿಕೆ, ನಡವಳಿಕೆ, ಆಚರಣೆಗಳ ಮೂಲಕ ಇಂದಿನ ಬದಲಾವಣೆಯ ಸಮಯದಲ್ಲೂ ಉಳಿಸಿಕೊಂಡಿ¨ªಾರೆ ಎಂದು ಜನಪ್ರಿಯ ಸಂಘಟಕ, ಬಂಟ್ಸ್ ಫೋರಂನ ಮೀರಾ ಭಾಯಂದರ್ ಇದರ ಸ್ಥಾಪಕ ಅಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ತಿಳಿಸಿದರು.
ಮಾ. 23ರಂದು ಸಂಜೆ ಮೀರಾರೋಡು ಪೂರ್ವದ ಜಹಗೀಡ್ ವೃತ್ತದ ಸಮೀಪದ ನಾರಾಯಣ ಗುರು ಸಭಾಗೃಹದಲ್ಲಿ ತುಳುನಾಡ ಸೇವಾ ಸಮಾಜ ಮೀರಾ ಭಾಯಂದರ್ ಇದರ ಸಂಸ್ಥಾಪಕ ದಿನಾಚರಣೆ, ವಿಶ್ವ
ಮಹಿಳಾ ದಿನಾಚರಣೆ, ಅರಸಿನ ಕುಂಕುಮ, ಸಮ್ಮಾನ ಮತ್ತು ಜಾನಪದ ನೃತ್ಯ ಸ್ಪರ್ಧೆಯ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಆರಾಧನೆಗಳ ಬೀಡಾಗಿರುವ ತುಳುನಾಡು ಮಾನವೀಯ ಸಂಬಂಧಗಳ ಕೊಂಡಿಯಾಗಿದೆ. ಶ್ರೀಮಂತ ಬದುಕಿನ ತುಳು ಸಂಸ್ಕೃತಿಯನ್ನು ಶಾಶ್ವತಗೊಳಿಸುವ ತುಳುನಾಡ ಸೇವಾ
ಸಮಾಜದ ದುಡಿಮೆಗೆ ನಾವೆಲ್ಲ ಕೈ
ಜೋಡಿಸೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜರಗಿದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮೀರಾ ಭಾಯಂದರ್ ಶಾಖೆ ಪ್ರಥಮ ಸ್ಥಾನ ಪಡೆದುಕೊಂಡಿತು. ಬಿಲ್ಲವರ ಅಸೋಸಿಯೋಶನ್ ಮಂಬಯಿ ಇದರ ಮೀರಾರೋಡ್ ಸ್ಥಳೀಯ ಸಮಿತಿಯು ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು. ಬಂಟ್ಸ್ ಪೋರಂ ಮೀರಾ ಭಾಯಂದರ್ ಮೂರನೇ ಸ್ಥಾನವನ್ನು ತನ್ನದಾಗಿಸಿಕೋಡಿತು. ಚಿಣ್ಣರ ಬಿಂಬ ಮಕ್ಕಳ ಪಾಲಕರ ಭಾಯಂದರ್ ಶಿಬಿರ, ವಿಶ್ವ ಡಾನ್ಸ್ ಆಕಾಡೆಮಿ ಭಾಯಂದರ್ ಮತ್ತು ಕರ್ನಾಟಕ ಮಹಾಮಂಡಳ ಮೀರಾ ಭಾಯಂದರ್ ತಂಡಕ್ಕೆ ಸಮಾಧಾನಕರ ಬಹುಮಾನದೊಂದಿಗೆ ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಮಾನವ ಹಕ್ಕುಗಳ ಅಧ್ಯಕ್ಷ, ಸಮಾಜ ರತ್ನ, ಲಯನ್ ಡಾ| ಶಂಕರ್ ಕೆ. ಟಿ. ವಹಿಸಿದ್ದರು, ಮುಖ್ಯ ಅತಿಥಿಯಾಗಿ ಕರ್ನಾಟದ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ವಸಾಯಿ ಇದರ ಕಾರ್ಯಾಧ್ಯಕ್ಷ ಭಾಸ್ಕರ ಕೆ. ಶೆಟ್ಟಿ, ಗೌರವ ಅತಿಥಿಯಾಗಿ ಮುಂಬಯಿ ಬಿಲ್ಲವರ ಅಸೋಸಿಯೇಶನಿನ ಮಾಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಕುಂತಲಾ ಕೋಟ್ಯಾನ್, ಮುಂಬಯಿ ಬಿಲ್ಲವರ ಅಸೋಸಿಯೇಶನಿನ ಮಾಹಿಳಾ ವಿಭಾಗದ ಮಾಜಿ ಉಪ ಕಾರ್ಯಾಧ್ಯಕ್ಷೆ ವಿಲಾಸಿನಿ ಸಾಲ್ಯಾನ್, ಉದ್ಯಮಿ ಶಂಕರ ಪೂಜಾರಿ, ಸಮ್ಮಾನಿತರಾದ ರಂಗ ಭೂಮಿ ಕಲಾವಿದೆಯರಾದ ಪ್ರತಿಮಾ ಬಂಗೇರ ಮತ್ತು ಸುನೀತಾ ಎ. ಸುವರ್ಣ, ಸಮಾಜ ಸೇವಕಿ ವಾಣಿ ಡಿ. ಶೆಟ್ಟಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭಜನ ತರಬೇತಿ ನೀಡಿದ ಭಾರತಿ ಉಡುಪ ಅವರನ್ನು ಗುರು ಕಾಣಿಕೆಯೊಂದಿಗೆ ಸತ್ಕರಿಸಲಾಯಿತು.
ಸಮ್ಮಾನ ಪತ್ರವನ್ನು ಕುಶಲಾ ಎಸ್ ಶೆಟ್ಟಿ, ರೋಹಿಣಿ ರೈ, ಶಾಲಿನಿ ಶೆಟ್ಟಿ ವಾಚಿಸಿದರು. ತುಳುನಾಡ ಸೇವಾ ಸಮಾಜದ ಅಧ್ಯಕ್ಷ ಡಾ|ರವಿರಾಜ ಸುವರ್ಣ ಸ್ವಾಗತಿಸಿ ಪರಿಚಯಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅಮಿತಾ ಎಸ್. ಶೆಟ್ಟಿ ಅವರು ಸಿದ್ದಿ ಸಾಧನೆಗಳ ಬಗ್ಗೆ ವಿವರಿಸಿದರು. ಗೌರವಾಧ್ಯಕ್ಷ ಶಂಭು ಕೆ. ಶೆಟ್ಟಿ, ಕಾರ್ಯದರ್ಶಿ ಶೋಭಾ ಉಡುಪ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡ, ಪದಾಧಿಕಾರಿಗಳಾದ ಲೀಲಾ ಡಿ. ಪೂಜಾರಿ, ರವಿ ಶೆಟ್ಟಿ ಶೃಂಗೇರಿ, ಬಿ. ಕೆ. ಶೆಟ್ಟಿ, ದಾûಾಯಿಣಿ , ರಾಮಚಂದ್ರ ಉಚ್ಚಿಲ್, ಶೈಲೇಶ್ ಉದ್ಯಾವರ ಅವರು ಅತಿಥಿಗಳನ್ನು ಗೌರವಿಸಿದರು.
ಸತ್ಯಪಾಲ್ ರೈ ಕಾರ್ಯಕ್ರಮ ನಿರ್ವಹಿಸಿ ದರು. ತೀರ್ಪುಗಾರರಾಗಿ ವಿನಯಾ ಭಟ್ ಮತ್ತು ಅನಿಲ್ ಸಸಿಹಿತ್ಲು ಸಹಕರಿಸಿದರು. ಪದಾಧಿಕಾರಿಗಳಾದ ವಸಂತ ಶೆಟ್ಟಿ, ನಾರಾಯಾಣ ಮೂಡಬಿದಿರೆ, ಜಯಪ್ರಕಾಶ್ ಪೂಜಾರಿ, ಜಯಾಲಕ್ಷ್ಮೀ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ಭಜನೆ, ಅರಸಿನ ಕುಂಕುಮ, ವಿಜಯ ಶೆಟ್ಟಿ ಮೂಡುಬೆಳ್ಳೆ ಅವರಿಂದ ಸುಗಮ ಸಂಗೀತ, ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.