ಬಸ್ರೂರು: ರೈತನಲ್ಲಿ ಲಾಭದ ನಿರೀಕ್ಷೆ
ಸುಗ್ಗಿ ಬೆಳೆ ರೈತನ ಕೈಗೆ
Team Udayavani, Mar 29, 2019, 6:00 AM IST
ಬಸ್ರೂರು: ಬಸ್ರೂರು, ಬಳ್ಕೂರು, ಜಪ್ತಿ, ಕಂದಾವರ, ಕಂಡ್ಲೂರು ಮಂತಾದೆಡೆಗಳಲ್ಲಿ ಕಾತಿ ಬೆಳೆಯ ಅನಂತರದ ಸುಗ್ಗಿ ಬೆಳೆಯೀಗ ರೈತನ ಕೈಗೆ ಬಂದಿದೆ.
ಮುಂಗಾರು ಮಳೆಯನ್ನೆ ನಂಬಿ ಗದ್ದೆಗಿಳಿಯುವ ರೈತ ಕಾತಿ ಬೆಳೆಯನ್ನು ಮೂರೂವರೆ ತಿಂಗಳಿನಲ್ಲಿ ಮುಗಿಸಿದರೆ ಅನಂತರದ ಮೂರೂವರೆ ತಿಂಗಳಿನ ಸುಗ್ಗಿ ಬೆಳೆಯೀಗ ಗದ್ದೆಗಳಲ್ಲಿ ಕಟಾವಾಗುತ್ತಿದೆ.
ಸುಗ್ಗಿ ಬೆಳೆಗೆ ಗದ್ದೆ ಹದಮಾಡಿ ಭತ್ತದ ಬೀಜವನ್ನು ಬಿತ್ತಿದ ಮೇಲೆ ಬೆಳೆದ ಸಸಿಗಳನ್ನು ನಾಟಿಮಾಡುವ ಕ್ರಮವಿಲ್ಲ.. ಕೃತಕ ನೀರಾವರಿಯನ್ನೇ ಅವಲಂಬಿಸಿ ಸುಗ್ಗಿ ಬೆಳೆಯನ್ನು ಮಾಡಲಾಗುತ್ತದೆ. ಈ ಭಾಗದಲ್ಲಿ ಜಯ, ಜ್ಯೋತಿ, ಮುಕ್ತಿ ಮುಂತಾದ ತಳಿಗಳನ್ನು ಹೆಚ್ಚಾಗಿ ಬಿತ್ತಲಾಗುತ್ತದೆ.
ಬಳ್ಕೂರಿನಲ್ಲಿ 30 ಎಕರೆ , ಕಂದಾವರದಲ್ಲಿ 50 ಎಕರೆ, ಬಸ್ರೂರಿನಲ್ಲಿ 20 ಎಕರೆ ಮತ್ತು ಜಪ್ತಿ-ಕಂಡ್ಲೂರಿನಲ್ಲಿ ತಲಾ 20 ಎಕರೆ ಜಾಗದಲ್ಲಿ ಸುಗ್ಗಿ ಬೆಳೆಯನ್ನು ಬೆಳೆಯಲಾಗಿದೆ.
ಒಂದು ಎಕರೆ ಜಮೀನಿನಲ್ಲಿ ಹದಿನೈದರಿಂದ ಇಪ್ಪತ್ತು ಕ್ವಿಂಟಾಲ್ ಭತ್ತವನ್ನು ಮಿಲ್‌ಗೆ ಮಾರಾಟ ಮಾಡಿದರೆ ಒಂದು ಕ್ವಿಂಟಾಲ್‌ಗೆ 1,700 ರೂ. ಹಣ ದೊರೆಯುತ್ತದೆ. ಅದೇ ಬೆಳೆದ ಭತ್ತವನ್ನು ಅಕ್ಕಿ ಮಾಡುವುದಾದರೆ ಕ್ವಿಂಟಾಲ್‌ಗೆ 400 ರೂ. ಹಣ ಕೇಳುತ್ತಾರೆ. ಬೆಳೆದ ಭತ್ತವನ್ನು ಮಿಲ್‌ಗೆ ಹಾಕಿ ಬೇರೆ ಅಕ್ಕಿಯನ್ನು ಕೊಳ್ಳುವುದಾದರೆ 3,300 ರೂ. ರಿಂದ 3,400 ರೂ. ಹಣ ಕೇಳುತ್ತಾರೆ.
ಕೆಲವೆಡೆ ಸುಗ್ಗಿ ಬೆಳೆಯ ಕಟಾವನ್ನು ರೈತ ಮುಗಿಸಿದ್ದರೆ ಮತ್ತೆ ಕೆಲವರು ಕೆಲವೇ ದಿನಗಳಲ್ಲಿ ಮುಗಿಸಲಿದ್ದಾರೆ. ಇವೆಲ್ಲವನ್ನೂ ರೈತರು ಯಂತ್ರದ ಮೂಲಕವೇ ಮಾಡುತ್ತಿದ್ದು, ಮೆಷಿನ್‌ನವರು ಒಂದು ಗಂಟೆಗೆ ರೂ.2,000 ಬಾಡಿಗೆ ತೆಗೆದುಕೊಳ್ಳುತ್ತಾರೆ. ಎಲ್ಲ ಪ್ರಕ್ರಿಯೆ ಮುಗಿದ ಅನಂತರವಷ್ಟೆ ರೈತ ನಿಟ್ಟುಸಿರು ಬಿಟ್ಟು ಲಾಭದ ನಷ್ಟದ ಲೆಕ್ಕಾಚಾರ ಹಾಕುತ್ತಾನೆ. ಸುಗ್ಗಿ ಬೇಸಾಯ ಮಾಡದ ರೈತರು ಉದ್ದು, ಅವರೆ ಮತ್ತು ಗೆಣಸು ಮುಂತಾದ ಬೆಳೆಯನ್ನು ಬೆಳೆಯುತ್ತಾರೆ.
ಕಾದು ನೋಡಬೇಕಿದೆ
ನಾನು ಬಸ್ರೂರು ಸಹಕಾರಿ ಬ್ಯಾಂಕ್‌ನಲ್ಲಿ ರೂ.50,000 ಸಾಲ ಪಡೆದು ಸುಗ್ಗಿ ಬೆಳೆಗೆ ಕೈಹಾಕಿದ್ದೇನೆ. ಆರಂಭದಲ್ಲಿ ಬಾಡಿಗೆ ಟ್ರಾಕ್ಟರ್‌ನಿಂದ ಉಳುಮೆ ಮಾಡುವುದರಿಂದ ಹಿಡಿದು ಬಾಡಿಗೆ ಮೆಷಿನ್‌ನಿಂದ ಕಟಾವು ಮಾಡುವವರೆಗಿನ ಲೆಕ್ಕವನ್ನು ಪುಸ್ತಕದಲ್ಲಿ ಬರೆದಿಟ್ಟಿದ್ದೇನೆ. ಬೆಳೆದ ಬೆಳೆ ಯಾವ ಬೆಲೆಗೆ ಮಾರಾಟವಾಗುತ್ತದೆ ಎಂಬುದರ ಮೇಲೆ ಬ್ಯಾಂಕ್‌ನ ಸಾಲ ತೀರಿಸುವ ಜವಾಬ್ದಾರಿಯೂ ಒಳಗೊಂಡಿದೆ. ಲಾಭವೋ-ನಷ್ಟವೋ ಕಾದು ನೋಡಬೇಕಾಗಿದೆ.
-ರಾಮ ಪೂಜಾರಿ,
ಕೃಷಿಕ, ಬಳ್ಕೂರು ನಿವಾಸಿ
- ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.