ಪಂಚವಟಿಯಲ್ಲಿ ಅವ್ವ ಕಂಡ ಕನಕನ ಕನ

Team Udayavani, Mar 29, 2019, 6:00 AM IST

9

ಸುಮನಸಾ ರಂಗಹಬ್ಬದ ಸಂದರ್ಭ ದಲ್ಲಿ ಸುಮನಸಾ ಕೊಡವೂರು ಪ್ರದರ್ಶಿಸಿದ ಮೂರು ಕಲಾ ಕುಸುಮಗಳು ಮೆಚ್ಚುಗೆ ಗಳಿಸಿತು. ಯಕ್ಷಗಾನ ಪ್ರಸಂಗ “ಪಂಚವಟಿ’ಯನ್ನು ಸುಮನಸಾ ಕೊಡವೂರು ಕಲಾವಿದರು ಯಕ್ಷನಾಟಕವಾಗಿ ಪ್ರದರ್ಶಿಸಿ ದರು. ಪಿತೃವಾಕ್ಯ ಪರಿಪಾಲನೆಗಾಗಿ ಶ್ರೀರಾಮ,ಲಕ್ಷ್ಮಣ, ಸೀತೆ ವನವಾಸ ಕ್ಕಾಗಿ ತೆರಳಿ ಪಂಚವಟಿಯಲ್ಲಿರುವ ಸಂದರ್ಭದಲ್ಲಿ ರಾವಣನ ಸಹೋದರಿ ಶೂರ್ಪಣಖಾಳ ಕಪಟವನ್ನರಿತು ಆಕೆಯ ನಾಸಾಚ್ಛೇದನ ಮಾಡಿದ್ದರಿಂದ ಕೋಪೋದ್ರಿಕ್ತಳಾದ ಆಕೆ ಮಾವ ಮಾರೀಚನನ್ನು ಮಾಯಾ ಜಿಂಕೆಯಾಗಿಸಿ ರಾವಣನಿಂದ ಸೀತಾಪಹರಣವಾಗುತ್ತದೆ. ಮಾರ್ಗಮಧ್ಯದಲ್ಲಿ ಪ್ರತಿರೋಧ ತೋರಿದ ಜಟಾಯು ರಾವಣನಿಂದ ರೆಕ್ಕೆಗಳು ಕತ್ತರಿಸಲ್ಪಟ್ಟು ಶ್ರೀರಾಮ, ಲಕ್ಷ್ಮಣರ ಆಗಮನದವರೆಗೂ ಜೀವಂತವಿದ್ದು ಸೀತಾ ಪಹರ‌ಣದ ವಿಷಯವನ್ನು ಅವರಿಗೆ ತಿಳಿಸಿ ಪ್ರಾಣತ್ಯಾಗ ಮಾಡುವ ಕಥಾವಸ್ತುವುಳ್ಳ ಈ ಯಕ್ಷನಾಟಕ ಸಂಪ್ರದಾಯ ಬದ್ಧವಾಗಿ ಕಾಲಮಿತಿಯೊಳಗೆ ಮೂಡಿಬಂತು. ಯಕ್ಷ‌ನಾಟಕವಾಗಿದ್ದರಿಂದ ಸಹಜವಾಗಿಯೇ ಅರ್ಥಗಾರಿಕೆ ಕಡಿಮೆಯಿದ್ದು ನೃತ್ಯ ಭಾಗಕ್ಕೆ ಆದ್ಯತೆ ನೀಡಲಾಗಿತ್ತು. ಬಾಲಕಲಾವಿದರ ಪ್ರೌಢ ಅಭಿನಯ ಯಕ್ಷಗಾನಕ್ಕೆ ಉತ್ತಮ ಭವಿಷ್ಯವಿದೆ ಎನ್ನುವುದನ್ನು ನಿರೂಪಿಸಿತು. ಸ್ವರ್ಣಜಿಂಕೆಯ ನರ್ತನ, ಜಟಾಯುವಿನ ಕ್ಷಿಪ್ರಗತಿಯ ಆವರ್ತನ ಇತ್ಯಾದಿ ಅಂಶಗಳು ನಾಟಕಕ್ಕೆ ಪೂರಕವಾಗಿ ಸಂಪ್ರದಾಯದ ಚೌಕಟ್ಟಿನಲ್ಲೇ ಯಕ್ಷಗಾನವನ್ನು ಹೇಗೆ ಹೆಚ್ಚು ರಂಜನೀಯವಾಗಿಸಬಹುದು ಎನ್ನುವ ಪ್ರಾತ್ಯಕ್ಷಿಕೆಯಂತೆ ಕಂಡುಬಂತು. ಪ್ರಸಾದ್‌ ಮುದ್ರಾಡಿಯವರ ಕರ್ಣಾನಂದಕರ ಭಾಗವತಿಕೆ, ಸುಸ್ಪಷ್ಟ ಪದೋಚ್ಚಾರಣೆ ಅರ್ಥಗಾರಿಕೆ ಅವಲಂಬನವನ್ನು ಕಡಿಮೆ ಮಾಡಿತು. ಸೀಮಿತ ಅವಧಿಯ ಯಕ್ಷಗಾನ ಪರಿಧಿಯಲ್ಲಿಯೇ ಪ್ರಸ್ತುತಗೊಂಡ ಪಂಚವಟಿ ಡಾ| ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯನ್ನು ನೆನಪಿಸಿತು.

ಮುಂದಿನ ಕಲಾಕುಸುಮ ಕೃಷ್ಣಮೂರ್ತಿ ಕವತ್ತಾರ್‌ ನಿರ್ದೇಶನದ ಡಾ|ಪದ್ಮಿನಿ ನಾಗಾರಾಜು ರಚನೆ “ಅವ್ವ’ ನಾಟಕವನ್ನು ಪ್ರಸ್ತುತ ಪಡಿಸಿದವರು ಸುಮನಸಾ ಕೊಡವೂರು ಕಲಾವಿದರು. ಲಂಕೇಶರ ಕವನ “ಅವ್ವ’ ಆಧಾರಿತ ಈ ನಾಟಕದ ಅವ್ವ ಬದುಕಿದ್ದು ಕಾಳುಕಡ್ಡಿಗೆ ಯಾರಿಗೂ ತಲೆಬಾಗಿಸದ ಆತ್ಮಾಭಿಮಾನಕ್ಕೆ, ಒಂದು ಸೂರು, ಒಂದಷ್ಟು ಅನ್ನ, ಹೊದ್ದುಕೊಳ್ಳಲು ಹಚ್ಚಡಕ್ಕೆ ಹಾಗೂ ತನ್ನ ಸರೀಕರ ಎದುರು ಗೌರವಕ್ಕೆ ಚ್ಯುತಿಬಾರದಂತೆ ಬಾಳುವುದಕ್ಕೆ. ಕೊನೆಯಲ್ಲಿ ಹೊಲಕ್ಕೆ ಹೋದ‌ಷ್ಟೇ ಸಲೀಸಾಗಿ ಈ ಪ್ರಪಂಚವನ್ನು ಬಿಟ್ಟು ತೆರಳುವ ಅವ್ವ ಪಾತ್ರಧಾರಿ ವಿದ್ಯಾದಾಯಿನಿಯ ಅಭಿನಯ ಹಾಗೂ ಮಾತುಗಾರಿಕೆ ಬಹುಕಾಲ ನೆನಪಿನಲ್ಲುಳಿಯುತ್ತದೆ. ಉಳಿದ ಪಾತ್ರಧಾರಿಗಳಲ್ಲಿ ಶಾಲಾವಿದ್ಯಾರ್ಥಿ ಅಕ್ಷತ್‌ ಹಾಗೂ ಅವ್ವ ದೇವೇರಿಯ ಗಂಡ ಯೋಗೀಶ್‌ ಕೊಳಲಗಿರಿ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದರು.

ಅನಂತರ ಸುಮನಸಾ ಕೊಡವೂರು ತಂಡದಿಂದ “ಕನಕನ ಕನ’ ಎನ್ನುವ ತುಳು ನಾಟಕ ಪ್ರದರ್ಶಿಸಲ್ಪಟ್ಟಿತು. ರವಿಕುಮಾರ್‌ ಕಡೆಕಾರ್‌ ರಚಿತ ಈ ನಾಟಕದ ನಿರ್ದೇಶಕರು ಚಂದ್ರಕಾಂತ್‌ ಕುಂದರ್‌. ಜೀವನದಲ್ಲಿನ ದಿನನಿತ್ಯದ ಆಗುಹೋಗುಗಳೇ ನಾಟಕದ ಕಥಾವಸ್ತುವಾದರೂ ಅವುಗಳನ್ನು ಪರಿಣಾಮಕಾರಿಯಾಗಿ ನಾಟಕದಲ್ಲಿ ಬಳಸಿಕೊಂಡ ನಿರ್ದೇಶಕರ ಜಾಣ್ಮೆ ಮೆಚ್ಚುವಂಥಾದ್ದು. ಪತ್ರಕರ್ತ ಕನಕನು ಸಂದರ್ಭಗಳೊಂದಿಗೆ ರಾಜಿ ಮಾಡಿಕೊಳ್ಳದೆ ಬಂಡವಾಳ ಶಾಹಿಗಳ ಧೂರ್ತತೆ, ವಿವಿಧ ಮಾಫಿಯಾಗಳ ಧಾರ್ಷ್ಟ್ಯತೆ ಹಾಗೂ ಸಮಾಜದಲ್ಲಿ ವ್ಯಾಪಕವಾಗಿರುವ ಕಪಟ ಮತ್ತು ಕುಟಿಲತೆಯನ್ನು ಪ್ರಾಣವನ್ನು ಪಣಕ್ಕಿಟ್ಟು ಬಯಲುಗೊಳಿಸುವ ಆದರ್ಶ ಎಲ್ಲರಲ್ಲೂ ಮನೆಮಾಡಿದರೆ ಬಾಳು ಸೊಗಸು ಎನ್ನುವ ಸಂದೇಶ ಈ ನಾಟಕದಲ್ಲಿÉದೆ. ಮನೆಯಲ್ಲಿನ ಹಿರಿಯರನ್ನು ತಮ್ಮ ಅಗತ್ಯತೆಗಳಿಗೆ ಬಳಸಿಕೊಂಡು ನಂತರ ವೃದ್ಧಾಪ್ಯದಲ್ಲಿ ನಿರ್ಲಕ್ಷಿಸುವ ಕ್ರೂರ ಸತ್ಯ, ಹಾಗೆಯೇ ಉಳ್ಳವರಿಗೊಂದು ಇಲ್ಲದವರಿಗೊಂದು ಎನ್ನವ ದ್ವಿಮುಖ ನೀತಿಯನ್ನು ನಿರ್ಭಿಡೆಯಿಂದ ಜೀವನದಲ್ಲಿ ಅಳವಡಿಸಿಕೊಳ್ಳುವ ಆಧುನಿಕ ಸಮಾಜದ ಇಂದಿನ ಪರಿಸ್ಥಿತಿಯ ಕರಾಳ ಮುಖವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ತಿಳಿ ಹಾಸ್ಯವನ್ನು ಸಿಹಿಲೇಪನದಂತೆ ನಾಟಕದಲ್ಲಿ ಅಲ್ಲಲ್ಲಿ ಉಪಯೋಗಿಸಿ ಪ್ರೇಕ್ಷಕರನ್ನು ಗಂಭೀರತೆಯಿಂದ ವಿಮುಖ ಮಾಡುವ ಪ್ರಯತ್ನ ಮಾಡಲಾಗಿದೆ.ತಮಿಳು ಮಿಶ್ರಿತ ಕನ್ನಡ-ತುಳು ಭಾಷೆ ಮಾತನಾಡುವ ಹೆಂಗಸಿನ ಪಾತ್ರವನ್ನು ಪುರುಷನು ನಿರ್ವಹಿಸಿದ್ದು ಪ್ರಾಯಶಃ ಆ ಪಾತ್ರದ ಅಗತ್ಯ ಇರಬಹುದು. ಬೆಳಕು ಹಾಗೂ ಉತ್ತಮ ಹಿನ್ನಲೆ ಸಂಗೀತ ನಾಟಕಕ್ಕೆ ಪೂರಕವಾಗಿ ಸಹಕರಿಸಿ ರಂಜಿಸಿತು.

ಜನನಿ ಭಾಸ್ಕರ್‌ಕೊಡವೂರು

ಟಾಪ್ ನ್ಯೂಸ್

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.