ಪುತ್ತಿಗೆ,ಶಿರಿಯ ಹೊಳೆಗಳಿಂದ ಮರಳು ಲೂಟಿ ವ್ಯಾಪಕ
ನೀರಿನ ಪ್ರಮಾಣ ಕುಸಿಯುತ್ತಿದ್ದಂತೆ ತಂಡಗಳು ಸಕ್ರಿಯ
Team Udayavani, Mar 29, 2019, 6:10 AM IST
ಹೊಳೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದಂತೆ ತೋರಿಬರುವ ಮರಳು.
ಕಾಸರಗೋಡು: ಬಿರುಬಿಸಿಲ ಬೇಗೆ ತೀವ್ರಗೊಳ್ಳುತ್ತಿರುವಂತೆ ಹೊಳೆಗಳಲ್ಲಿ ದಿನೇ ದಿನೆ ನೀರಿನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವಂತೆಯೇ ಮರಳು ಲೂಟಿಯೂ ವ್ಯಾಪಕಗೊಳ್ಳಲಾರಂಭಿಸಿದೆ. ಪುತ್ತಿಗೆ, ಶಿರಿಯ ಹೊಳೆಗಳಿಂದ ವ್ಯಾಪಕವಾಗಿ ಮರಳು ಲೂಟಿ ನಡೆಯುತ್ತಿದೆ.
ಮರಳು ದಂಧೆಯ ತಂಡಗಳು ರಾತ್ರಿ ಹಗಲೆನ್ನದೆ ಬತ್ತುತ್ತಿರುವ ಹೊಳೆಗಳಿಂದ ಕಾನೂನು ನಿಬಂಧನೆಗಳನ್ನೆಲ್ಲ ಗಾಳಿಗೆ ತೂರಿ ಮರಳು ಲೂಟಿ ನಡೆಸುತ್ತಿರುವುದಾಗಿ ಪರಿಸರ ನಿವಾಸಿಗಳು ಹೇಳುತ್ತಿದ್ದಾರೆ.
ಬದಿಯಡ್ಕ, ಆದೂರು, ಮಂಜೇಶ್ವರ, ಕುಂಬಳೆ ಠಾಣೆ ವ್ಯಾಪ್ತಿಯ ಪತ್ವಾಡಿ, ಪುತ್ತಿಗೆ, ಶಿರಿಯ, ಅಡ್ಕಸ್ಥಳ, ಪಳ್ಳತ್ತಡ್ಕ ಹೊಳೆಯ ಕುಡುಪಂಗುಯಿ, ಏತಡ್ಕ, ನೇರಪ್ಪಾಡಿ, ಏಳಾRನ, ಪಯಸ್ವಿನಿ, ಅತ್ತನಾಡಿ, ಅಡೂರು, ಆಲೂರು ಮತ್ತಿತರ ಹೊಳೆಗಳ ವಿವಿಧ ಸ್ಥಳಗಳಲ್ಲಿ ಮರಳು ಲೂಟಿ ತಂಡ ಸಕ್ರಿಯವಾಗಿದೆ. ಪೊಲೀಸರು ಹಾಗೂ ಸಂಬಂಧಪಟ್ಟ ಅ ಧಿಕಾರಿಗಳು ಮುಂಬರುವ ಲೋಕಸಭಾ ಚುನಾವಣೆಯ ಪ್ರಕ್ರಿಯೆಯಲ್ಲಿ ವ್ಯಸ್ಥರಾಗಿರುವುದರಿಂದ ಮರಳು ಲೂಟಿ ತಂಡಕ್ಕೆ ವರದಾನವಾಗಿ ಮಾರ್ಪಟ್ಟಿದೆ.
ಕನಿಷ್ಠ ವೇತನ ನೀಡಿ ಹೊಳೆಗಳಿಂದ ತೆಗೆಯುವ ಮರಳಿಗೆ 150 ಅಡಿಗೆ 15,000 ರೂ. ನಿಂದ 18,000 ರೂ.ವರೆಗೆ ಸಾಗಾಟ ತಂಡ ದರ ವಸೂಲಿ ಮಾಡುತ್ತಿದೆ. ಮುಂಜಾನೆಯಾಗುವಾಗ ಹತ್ತು ಲೋಡ್‌ನಷ್ಟು ಮರಳನ್ನು ಒಂದು ತಂಡ ಉದ್ದೇಶಿತ ಸ್ಥಳಗಳಿಗೆ ತಲುಪಿಸುತ್ತದೆ.
ಪೊಲೀಸರು ಹಾಗೂ ಇತರ ಅಧಿಕಾರಿಗಳ ನಡೆಗಳನ್ನು ತಿಳಿದುಕೊಂಡು ಮರಳು ಸಾಗಾಟ ತಂಡಕ್ಕೆ ಮಾಹಿತಿ ನೀಡುವುದಕ್ಕಾಗಿ ಒಳದಾರಿಗಳಲ್ಲಿ ವಾಹನ ನಿಲ್ಲಿಸಿ ಮೇಲುಸ್ತುವಾರಿ (ಸೂಪರ್‌ವಿಶನ್) ನಡೆಸುವ ತಂಡವೇ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುತ್ತದೆ. ಇವರಿಗೆ ಮರಳು ಸಾಗಾಟ ತಂಡ ವೇತನ ನೀಡುತ್ತದೆ. ಇಂತಹ ವ್ಯೂಹ ರಚಿಸಿಕೊಳ್ಳುವ ಮರಳು ದಂಧೆ ಅ ಧಿಕಾರಿಗಳ ಕಣ್ತಪ್ಪಿಸಿ ನಿರಂತರವಾಗಿ ನಡೆಯುತ್ತಿದ್ದು,ಸಾಗಾಟ ತಂಡ ಉದ್ದೇಶಿತ ಸ್ಥಳಕ್ಕೆ ಮರಳು ತಲುಪಿಸುತ್ತದೆ.
ಲಕ್ಷಾಂತರ ರೂ. ಆದಾಯದ ಮೂಲ
ಈ ಹಿಂದೆ ಪೊಲೀಸ್, ಭೂಗರ್ಭ ವಿಭಾಗ ಹಾಗೂ ಕಂದಾಯ ಇಲಾಖೆ ಅಧಿ ಕಾರಿಗಳು ಮರಳು ಸಾಗಾಟ ತಂಡಗಳ ವಿರುದ್ಧ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿತ್ತು. ಸರಕಾರದ ಖಜಾನೆಗೆ ಲಕ್ಷಾಂತರ ರೂ. ಆದಾಯ ಈ ಸಂದರ್ಭ ದಕ್ಕಿತ್ತು.
ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಅಂಗಡಿಮೊಗರಿ ನಿಂದ ಪಾಂಬಾಟಿಯವರೆಗಿನ ಪ್ರದೇಶಗಳಲ್ಲಿ ಹೊರ ರಾಜ್ಯದ ಕಾರ್ಮಿಕರಾದ ಬಂಗಾಳಿಗಳ ಮೂಲಕ ಮರಳು ಲೂಟಿ ನಡೆಸುತ್ತಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಂಗಡಿಮೊಗರಿನ ಮಟ್ಟಂಪಾಡಿಯಿಂದ ಪಾಂಬಾಟಿಯವರೆಗೆ ಮರಳುಗಾರಿಕೆ ನಡೆಯುತ್ತಿದೆ.
ಶಿರಿಯ ಹೊಳೆ ಭಾಗಗಳಾದ ಇವು ಪಾಂಬಾಟಿಯಲ್ಲಿ ಪುತ್ತಿಗೆ ಹೊಳೆಗೆ ಸೇರಿಕೊಳ್ಳುತ್ತವೆ. ಇದಲ್ಲದೆ ಪುತ್ತಿಗೆ ಸೇತುವೆಯ ಸಮೀಪದಲ್ಲೂ ಮರಳುಗಾರಿಕೆ ಭಾರಿ ವೇಗದಲ್ಲಿ ನಡೆಯುತ್ತಿದೆ. ಮಳೆಗಾಲ ನಿಂತ ಕೂಡಲೇ ಇಲ್ಲಿ ಮರಳುಗಾರಿಕೆ ಬಲಗೊಳ್ಳುತ್ತದೆ ಎಂದು ನಾಗರಿಕರು ಹೇಳುತ್ತಿದ್ದಾರೆ. ಅಕ್ಟೋಬರ್‌ನಿಂದ ಜೂನ್ ಮೊದಲ ವಾರದವರೆಗೆ ಇಲ್ಲಿ ಮರಳುಗಾರಿಕೆ ಸರ್ವೇಸಾಮಾನ್ಯವಾಗಿದೆ. ಹಲವು ಬಾರಿ ಕುಂಬಳೆ ಪೊಲೀಸ್ ಠಾಣೆ, ಮಂಜೇಶ್ವರ ತಾಲೂಕು ಕಚೇರಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ. ಇದಕ್ಕೆ ಉನ್ನತ ಅ ಧಿಕಾರಿಗಳ ಸಹಾಯ ಇದೆ ಎಂಬ ಸಂಶಯ ನಾಗರಿಕರಲ್ಲಿ ಬಲವಾಗಿದೆ.
ಪ್ರತಿ ವರ್ಷವೂ ಪುತ್ತಿಗೆ, ಅಂಗಡಿಮೊಗರು ಭಾಗಗಳಲ್ಲಿ ಮರಳು ಗಾರಿಕೆ ನಡೆಯುತ್ತದೆ. ಟನ್‌ಗಟ್ಟಲೆ ಮರಳು ಲೂಟಿಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಳೆ ನಿಂತೊಡನೆ ಈ ಹೊಳೆಗಳಿಗೆ ವಾಹನಗಳು ಇಳಿಯುತ್ತವೆ. ಹೊಳೆಗಳಲ್ಲಿ ವಾಹನಗಳ ಚಕ್ರಗಳ ಗುರುತು ಕಾಣಿಸಿಕೊಳ್ಳುತ್ತಿದ್ದು, ರಸ್ತೆಗಳೇ ರೂಪುಗೊಂಡಂತಿದೆ.
ವಿದ್ಯಾರ್ಥಿಗಳ ಬಳಕೆ
ಹೊಳೆಯಿಂದ ತೆಗೆಯುವ ಮರ ಳನ್ನು ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿಸಿಡ ಲಾಗುತ್ತದೆ. ಬಳಿಕ ಟಿಪ್ಪರ್ ಲಾರಿ ಮತ್ತಿತರ ವಾಹನಗಳಲ್ಲಿ ಸಾಗಿಸುತ್ತಿರುವುದಾಗಿ ದೂರು ಕೇಳಿ ಬರುತ್ತಿದೆ. ಮರಳುಗಾರಿಕೆ ನಡೆಸಲು ಶಾಲಾ ವಿದ್ಯಾರ್ಥಿಗಳನ್ನು ಕೂಡ ಬಳಸು ತ್ತಿರುವ ಆರೋಪವಿದೆ. ಈ ರೀತಿ ಮರಳು ಗಾರಿಕೆ ಸಂದರ್ಭ ವರ್ಷಗಳ ಹಿಂದೆ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆ ಯೊಂದರ ನೀರಿನಲ್ಲಿ ಬಾಲಕನೋರ್ವ ಮುಳುಗಿ ಸಾವಿಗೀಡಾದ ಘಟನೆಯೂ ನಡೆದಿತ್ತು. ಈ ಮಧ್ಯೆ ಅಂಗಡಿಮೊಗರು, ಏಳಾನ ಮೊದಲಾದ ಕಡೆಗಳ ಹೊಳೆಗಳಿಂದ ಶಾಲಾ ವಿದ್ಯಾರ್ಥಿ ಗಳನ್ನು ಬಳಸಿಕೊಂಡು ಮರಳುಗಾರಿಕೆ ನಡೆಸುತ್ತಿರುವುದನ್ನು ಸ್ಥಳೀಯರು ತಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಗಾಂಜಾ ಸೇವನೆ; ಯುವಕನ ಬಂಧನ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.