![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Mar 29, 2019, 6:31 AM IST
ಮಡಿಕೇರಿ:ಮನೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿರಿಸಿದ್ದ ಆರೋಪದಲ್ಲಿ ಐವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಕುಶಾಲನಗರ ಸಮೀಪದ ಸುಂದರನಗರದ ನಿವಾಸಿಗಳಾದ ಆರ್.ಮಂಜು (37), ಕುಬೇರ(45), ಮಣಿ (33) ಬೈಚನಹಳ್ಳಿಯ ಕೆ.ಆರ್.ರವಿ (31), ಬೆಟ್ಟದಪುರ ಹಲಗನಹಳ್ಳಿಯ ರಿಜ್ವಾನ್ ಅಹಮದ್ (54) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಕುಶಾಲ ನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್ ಅವರು ಮಂಜು ಮನೆಗೆ ದಾಳಿ ನಡೆಸಿ ಪರಿಶೀಲಿಸಿದಾಗ 21 ಎಲೆಕ್ಟ್ರಿಕಲ್ ಡಿಟೊನೇಟರ್, 200 ನಾನ್ ಎಲೆಕ್ಟ್ರಿಕಲ್ ಡಿಟೊನೇಟರ್, 239 ಅಮೋನಿಯಂ ನೈಟ್ರೇಟ್ ಜೆಲ್ ಟ್ಯೂಬ್‌ಗಳು, ತಲಾ 5 ಕೆಜಿಯ 5 ಪ್ಯಾಕೆಟ್ ಕ್ಯಾಲ್ಸಿಯಂ ಹೈಡ್ರಾಕ್ಸೆ„ಡ್ ಹಾಗೂ 14 ರೋಲ್ ಸೇಫ್ಟಿ ಫ್ಯೂಸ್‌ಗಳು ಪತ್ತೆಯಾಯಿತು.
ಈ ಸಂಬಂಧ ಸ್ಫೋಟಕ ವಸ್ತುಗಳ ಅಧಿನಿಯಮ-1908ರ ಕಲಂ 5ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆರೋಪಿಗ ಳನ್ನು ಬಂಧಿಸಲಾಯಿತು. ಬಂಧಿತರಲ್ಲಿ ಮಂಜು, ಮಣಿ ಹಾಗೂ ರವಿ ಕೂಲಿ ಕಾರ್ಮಿಕರಾಗಿದ್ದು, ಕುಬೇರ ಆಟೋ ಚಾಲಕ ಮತ್ತು ರಿಜ್ವಾನ್ ಕೃಷಿಕ ಎಂದು ಹೇಳಲಾಗಿದೆ. ಇವರು ಇಷ್ಟೊಂದು ಪ್ರಮಾಣದ ಸ್ಫೋಟಕಗಳನ್ನು ಯಾಕಾಗಿ ದಾಸ್ತಾನಿರಿಸಿದ್ದರು ಎಂಬುದು ಸ್ಪಷ್ಟವಾಗಿಲ್ಲ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.