ಕಾಡ ಹಾದಿಯ ದಿನಗಳು

ಕರಡಿ ಗುಹೆಯೊಳಗೆ ಥ್ರಿಲ್ಲರ್‌

Team Udayavani, Mar 29, 2019, 6:00 AM IST

34

ಅದು ಕತ್ತಲ ರಾತ್ರಿ. ದಟ್ಟ ಕಾಡಿನ ಹಾದಿಯೂ ಹೌದು. ಆ ಹಾದಿಯಲ್ಲಿ ಸಾಗುವ ಒಂದು ಕಾರು. ಅದರೊಳಗಿರುವ ಐವರು ಗೆಳೆಯರ ಮಾತುಕತೆ. ಅವರೆಲ್ಲರೂ ಹುಡುಕಿ ಹೊರಟಿರೋದು ಒಂದು ಕರಡಿ ಗುಹೆ! ಆ ರಾತ್ರಿಯಲ್ಲಿ ಕಾಡಿನ ಸದ್ದು ಬಿಟ್ಟರೆ, ಆ ಐವರು ಗೆಳೆಯರ ಮಾತುಕತೆ ಹೊರತು ಬೇರೇನೂ ಇಲ್ಲ. ಆದರೂ, ಅಲ್ಲೆಲ್ಲೋ ಒಂದು ಧ್ವನಿ ಕೇಳಿಬರುತ್ತೆ, ಇನ್ನೆಲ್ಲೋ ಕಾರು ಇದ್ದಕ್ಕಿದ್ದಂತೆ ನಿಂತುಬಿಡುತ್ತೆ…! ಅಷ್ಟಕ್ಕೂ ಅಲ್ಲಿ ನಡೆಯುವುದೇನು, ಕೊನೆಗೆ ಅವರೆಲ್ಲರೂ “ಕರಡಿ ಗುಹೆ’ ತಲುಪುತ್ತಾರಾ…? ಇದು “ಮನರೂಪ’ ಚಿತ್ರದ ಮೋಷನ್‌ ಪೋಸ್ಟರ್‌ನಲ್ಲಿ ಕಾಣಸಿಗುವ ಅಂಶ. ಇಷ್ಟು ಅಂಶಗಳಿವೆ ಅಂದರೆ ಇದೊಂದು ಹಾರರ್‌ ಚಿತ್ರ ಇರಬೇಕು ಎಂಬ ಅನುಮಾನ ಮೂಡಬಹುದು. ಆದರೆ, ಇದೊಂದು ಸೈಕಲಾಜಿಕಲ್‌ ಕ್ರೈಂ ಥ್ರಿಲ್ಲರ್‌ ಚಿತ್ರ. ಹೀಗಂತ “ಮನರೂಪ’ ಕುರಿತು ಹೇಳಿಕೊಂಡರು ನಿರ್ದೇಶಕ ಕಿರಣ್‌ ಹೆಗಡೆ.

ಕಿರಣ್‌ ಹೆಗಡೆ ಅವರಿಗೆ ಇದು ಮೊದಲ ಚಿತ್ರ. ಸಿನಿಮಾ ಮುಗಿಸಿರುವ ಅವರು ಬಿಡುಗಡೆ ತಯಾರಿಯಲ್ಲಿದ್ದಾರೆ. “ಇದು ಮನುಷ್ಯನ ಮನಸ್ಸಿನ ಮೇಲೆ ವಿವಿಧ ಛಾಯೆ ಮೂಡಿಸುವ ಚಿತ್ರಣ ಹೊಂದಿದೆ. ದಶಕದ ನಂತರ ಭೇಟಿಯಾಗುವ ಐವರು ಗೆಳೆಯರು ಒಂದು ರಾತ್ರಿ ನಿಗೂಢವಾಗಿರುವ ಕರಡಿಗುಹೆಯ ಅನ್ವೇಷಣೆಗೆ ಹೊರಡುತ್ತಾರೆ. ಕಾಡಿನ ಮಧ್ಯೆ ಹೋಗುವಾಗ, ಹಲವು ಅಡೆತಡೆ ಎದುರಾಗುತ್ತವೆ. ಇಡೀ ಚಿತ್ರ ಕಾಡಲ್ಲೇ ನಡೆಯುತ್ತದೆ. ಆ ಐವರು ಗೆಳೆಯರ ಹೊರತಾಗಿ ಬೇರೆ ಯಾರಾದರೂ ಇದ್ದಾರಾ? ಈ ಪ್ರಶ್ನೆ ಎಲ್ಲರನ್ನೂ ಕಾಡುವ ರೀತಿ ಅಲ್ಲಿ ಅಚ್ಚರಿಯ ಸಂಗತಿಗಳು ನಡೆಯುತ್ತವೆ. ಅದಕ್ಕೆ ಉತ್ತರ ಸಿನಿಮಾ ನೋಡಬೇಕು’ ಎಂಬುದು ನಿರ್ದೇಶಕರ ಮಾತು.

ಐದು ಬೆರಳುಗಳು ಹೇಗೆ ಸಮ ಇಲ್ಲವೋ, ಹಾಗೆ ಐವರು ಗೆಳೆಯರ ಮನಸ್ಥಿತಿ ಕೂಡ ಒಂದೊಂದು ರೀತಿಯಲ್ಲಿರುತ್ತೆ. ಚಿತ್ರದಲ್ಲಿ ಹೊಸ ಜನರೇಷನ್‌ನ ಎದುರಿಸುವ ಸಮಸ್ಯೆ ಏನೆಂಬುದನ್ನು ಹೇಳಲಾಗಿದೆ. ಇಡೀ ಕಾಡು ಒಂದು ಕನ್ನಡಿಯಂತೆ ಬಿಂಬಿತಗೊಂಡಿದೆ. 1980 ರಿಂದ 2000 ರ ಅವಧಿಯಲ್ಲಿ ಹುಟ್ಟಿದವರ ಕಥೆ ಇದು. ಚಾರಣಕ್ಕೆ ಹೋಗುವ ಗೆಳೆಯರ ಮನಸ್ಥಿತಿಯ ಚಿತ್ರಣವಿದು. ಕನ್ನಡಕ್ಕೆ ಹೊಸತಾಗಿರಲಿದೆ. ಹಾಗಾದರೆ, ಇದು ಹಾರರ್‌ ಚಿತ್ರವಾ? ಗೊತ್ತಿಲ್ಲ. ಆದರೆ, ಗುಮ್ಮ ಎಂಬ ಪಾತ್ರ ಇಲ್ಲೂ ಇದೆ. ಅದೇ ಚಿತ್ರದ ಜೀವಾಳ’ ಎಂಬುದು ನಿರ್ದೇಶಕರ ಮಾತು.

ಚಿತ್ರದ ಪ್ರಮುಖ ಪಾತ್ರ ನಿರ್ವಹಿಸಿರುವ ನಿಶಾ ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಈ ಹಿಂದೆ ಮೂರು ಚಿತ್ರಗಳಲ್ಲಿ ನಟಿಸಿದ್ದು, ಇಲ್ಲಿ ಹೊಸ ಪಾತ್ರ, ಹೊಸ ಅನುಭವ ಆಗಿದೆ ಅಂತ ಹೇಳಿಕೊಂಡರು.

ಆರ್ಯನ್‌ ಇಲ್ಲಿ ಗೊಂದಲ ಸೃಷ್ಟಿಸುವ ಪಾತ್ರ ಮಾಡಿದ್ದಾರಂತೆ. ಸದಾ ಅವರ ಬಳಿಯೊಂದು ಛತ್ರಿ ಇದ್ದು, ಅದೊಂದು ಸಾಂಕೇತಿಕ ಎಂಬಂತೆ ಇಲ್ಲಿ ಬಿಂಬಿಸಲಾಗಿದೆಯಂತೆ. ಇನ್ನು, ಅನೂಷಾರಾವ್‌, “ಒಂದು ಗೆಳೆಯರ ತಂಡ ಚಾರಣಕ್ಕೆ ಹೋದಾಗ, ಏನೆಲ್ಲಾ ಅವಘಡ ಸಂಭವಿಸುತ್ತವೆ ಎಂಬುದರ ಬಗ್ಗೆ ಚಿತ್ರವಿದ್ದದರೂ, ಇಲ್ಲಿ ಸಾಕಷ್ಟು ವಿಶೇಷ ಸಂಗತಿಗಳಿವೆ. ಅದನ್ನು ಸಿನಿಮಾದಲ್ಲೇ ನೋಡಬೇಕು ಅಂದರು.

ಪ್ರಜ್ವಲ್‌ಗೌಡ ಇಲ್ಲಿ “ಗುಮ್ಮ’ ಯಾಕೆ ಆದೆ ಅನ್ನುವ ಕುತೂಹಲ ಕೆರಳಿಸುತ್ತಾರಂತೆ. ಶಿವ ಇಲ್ಲಿ ಶರವಣ ಪಾತ್ರ ಮಾಡಿದ್ದು, ಇವರೂ ರಂಗಭೂಮಿಯಿಂದ ಬಂದಿದ್ದಾರೆ. ಹಿಂದೆ “ಶುದ್ಧಿ’, “ಕರಿಯ 2′ ಚಿತ್ರದಲ್ಲಿ ನಟಿ­ಸಿದ್ದು, ಇಲ್ಲೊಂದು ವಿಶೇಷ ಪಾತ್ರ ಸಿಕ್ಕಿದೆಯಂತೆ. ದಿಲೀಪ್‌ಕುಮಾರ್‌ ಅವರಿಗೂ ರಂಗಭೂಮಿಯ ನಂಟು ಇದೆ. ಪಾತ್ರದ ಬಗ್ಗೆ ಹೇಳಿ ಖುಷಿಗೊಂಡರು ಅವರು.
ಪತ್ರಕರ್ತ ಮಹಾಬಲ ಸೀತಾಳಭಾವಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, “ನಿರ್ದೇಶಕ ಕಿರಣ್‌ ಹೆಗಡೆ ನನ್ನ ಗೆಳೆಯ. ಅವರೊಂದಿಗೆ ಸೇರಿ ಮಾತುಗಳನ್ನು ಪೋಣಿಸಿದ್ದೇನೆ. ಇದು ನನಗೆ ಹೊಸ ಕ್ಷೇತ್ರ ಎಂದರು’ ಮಹಾಬಲ. ಛಾಯಾಗ್ರಾಹಕ ಗೋವಿಂದರಾಜು, ಸಂಗೀತ ನಿರ್ದೇಶಕ ಸರವಣ “ಮನರೂಪ’ ಕುರಿತು ಮಾತನಾಡಿದರು.

ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

Sandalwood: ಸ್ಟಾರ್‌ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್‌. ನರಸಿಂಹಲು

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್‌ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್‌ ಏನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ

2-shirva

Shirva ಹ‌ಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾವು, 20 ಮಂದಿ ರಕ್ಷಣೆ

Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.