ನೀತಿ ಸಂಹಿತೆ ಜಾರಿ ಬಳಿಕ 552 ಅಬಕಾರಿ ದಾಳಿ
Team Udayavani, Mar 29, 2019, 1:07 PM IST
ಕೋಲಾರ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ ನಂತರ ಜಿಲ್ಲೆಯಲ್ಲಿ 552 ಅಬಕಾರಿ ದಾಳಿಗಳನ್ನು ನಡೆಸಿ 230 ಕೇಸುಗಳನ್ನು ದಾಖಲಿಸಿ 18.05 ಲಕ್ಷ ರೂ ಮೌಲ್ಯದ ಮದ್ಯ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಸುಮಿತ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣಾ ಬಂದೋಬಸ್ತ್ಗಾಗಿ 18 ಚೆಕ್‌ಪೋಸ್ಟ್‌ಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 13 ಚೆಕ್‌ಪೋಸ್ಟ್‌ಗಳಲ್ಲಿ ಅಬಕಾರಿ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆಂದು ವಿವರಿಸಿದರು.
ಕೇಸು, ದಂಡ ವಸೂಲಿ: ಈವರೆವಿಗೂ ಒಟ್ಟು 230 ಕೇಸುಗಳನ್ನು ದಾಖಲು ಮಾಡಿಕೊಂಡಿದ್ದು, ಈ ಪೈಕಿ 33 ಕೇಸುಗಳು ಘೋರ ಅಪರಾಧ, 172 ಕೇಸುಗಳು 15ಎ ಸೆಕ್ಷನ್ ಅಡಿ ದಾಖಲಾಗಿದೆ. ಉಳಿದ 25 ಕೇಸುಗಳು ಬಿಎಲ್‌ಸಿ ಅಡಿ ದಾಖಲಾಗಿದೆ, 22 ಮಂದಿಯನ್ನು ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 1.73 ಲಕ್ಷ ರೂ.ಗಳ ದಂಡ ವಿಧಿಸುವಂತೆ ಮಾಡಲಾಗಿದೆಯೆಂದು ಹೇಳಿದರು.
ಈ ಪ್ರಕರಣಗಳಡಿಯಲ್ಲಿ 22 ಬೈಕ್, 1 ಆಟೋ, 2 ಸಾವಿರ ಲೀಟರ್ ಮದ್ಯ ಮತ್ತು 2 ಸಾವಿರ ಲೀಟರ್ ಬೀರ್ ವಶಪಡಿಸಿಕೊಳ್ಳಲಾಗಿದೆ. ಹಗಲು ರಾತ್ರಿ ಕಾರ್ಯಾಚರಣೆ ನಡೆಸಲು ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದರು.
500 ಲೀ. ಕಳ್ಳಭಟ್ಟಿ ನಾಶ: ಅಬಕಾರಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ನೆರೆ ರಾಜ್ಯದ ಅಬಕಾರಿ ಅಧಿಕಾರಿಗಳೊಂದಿಗೆ ತಮಿಳುನಾಡಿನ ಹೊಸೂರು ಮತ್ತು ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಂಟಿ ಕಾರ್ಯಾಚರಣೆಯ ಭಾಗವಾಗಿಯೇ ಬುಧವಾರ ಆಂಧ್ರಪ್ರದೇಶದ ಪುಂಗನೂರು ಬಳಿ 500 ಲೀಟರ್ ಕಳ್ಳಭಟ್ಟಿ ಕೊಳೆಯನ್ನು ನಾಶಪಡಿಸಲಾಗಿದೆ ಎಂದು ಹೇಳಿದರು.
ಅಬಕಾರಿ ಅಪರಾಧಗಳ ದೂರುಗಳನ್ನು ಸ್ಪೀಕರಿಸಲು ಕಂಟ್ರೋಲ್ ರೂಂ ಡೀಸಿ ಕಚೇರಿಯಲ್ಲಿ ಪ್ರಾರಂಭಿಸಲಾಗಿದ್ದು, ದೂರು ಬಂದ 24 ಗಂಟೆಯೊಳಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಅಬಕಾರಿ ನಿಗಾ: ಆಯೋಗವು ಚುನಾವಣೆಯ ಸಂದರ್ಭದಲ್ಲಿ ಸರಾಸರಿಗಿಂತಲೂ ಶೇ.30 ರಷ್ಟು ಹೆಚ್ಚಿನ ಮದ್ಯ ಮಾರಾಟವಾದರೆ ನಿಗಾ ಇಡುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ಹಿಂದಿನ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಕಡಿಮೆ ಮದ್ಯ ಮಾರಾಟವಾಗಿದೆ ಎಂದು ತಿಳಿಸಿದರು.
2018 ಮಾರ್ಚ್‌ನಲ್ಲಿ 1.36 ಲಕ್ಷ ಲೀಟರ್ ಬೀರ್ ಮಾರಾಟವಾಗಿದ್ದರೆ, ಈ ವರ್ಷ ಕೇವಲ 95 ಸಾವಿರ ಲೀಟರ್ ಬೀರ್ ಮಾರಾಟವಾಗಿದೆ. ಈ ವರ್ಷದ ಮಾರ್ಚ್‌ನ ಮಾರಾಟ ಗುರಿಯೇ 1.10 ಲಕ್ಷ ಲೀಟರ್ ಇದ್ದು ಇದನ್ನು ತಲುಪುವುದು ಕಷ್ಟವಾಗಿದೆಯೆಂದರು.
ಕೋಲಾರ ಜಿಲ್ಲೆಯಲ್ಲಿ ಈಗ ಕಳ್ಳಭಟ್ಟಿ ಇಳಿಸುವ ಪ್ರಕರಣಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದ್ದು, ನೆರೆ ರಾಜ್ಯಗಳ ಗಡಿಯಿಂದ ಬರುವ ಕುರಿತು ನಿಗಾವಹಿಸಲಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.