ದಲಿತ ಯುವಕನ ಮೇಲೆ ಹಲ್ಲೆಗೆ ಖಂಡನೆ
Team Udayavani, Mar 29, 2019, 5:12 PM IST
ಮಾನ್ವಿ: ತಾಲೂಕಿನ ಸಂಗಾಪುರು ಗ್ರಾಮದಲ್ಲಿ ಅಸ್ಪೃಶ್ಯತೆ ವಿರೋಧಿಸಿದ ದಲಿತ ಯುವಕನ ಮೇಲೆ ಸವರ್ಣೀಯರು ನಡೆಸಿದ ದೌರ್ಜನ್ಯ ಖಂಡಿಸಿ ಮತ್ತು ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ತಾಲೂಕಿನ ಸಂಗಾಪುರು ಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ನಿರಾಕರಿಸಿರುವುದು ಸಂವಿಧಾನ ಬಾಹೀರವಾಗಿದೆ. ದಲಿತರ ಕಾಲೋನಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಗ್ರಾಮಕ್ಕೆ ಹೋಗಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಗ್ರಾಮದ 200-300 ಜನ ಸವರ್ಣೀಯರ ಗುಂಪು ಸೇರಿ ದಲಿತರ ಕೇರಿಗೆ ನೀರು ಒದಗಿಸಬೇಡಿ ಇದರಿಂದ ನಮಗೆ ತೊಂದರೆಯಾಗುತ್ತದೆ ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.
ಈ ವೇಳೆಯಲ್ಲಿ ದಲಿತ ಯುವಕರು ನಮಗೆ ಕುಡಿಯಲು ನೀರಿಲ್ಲ. ಇದಕ್ಕೆ ಯಾಕೆ ಅಡ್ಡಿಪಡಿಸುತ್ತಿದ್ದಿರಿ ಎಂದು ಪ್ರಶ್ನಿಸಿದ್ದಕ್ಕೆ ದಲಿತ ಯುವಕರನ್ನು ಸವರ್ಣೀಯರು ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಕೂಡಲೇ ಜಿಲ್ಲಾಡಳಿತ ಸಂಗಾಪುರು ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಗ್ರಾಮದಲ್ಲಿ ಶಾಂತಿ ಕಾಪಾಡಬೇಕು. ಜೀವ ಭಯದಲ್ಲಿರುವ ಅಸ್ಪೃಶ್ಯ ದಲಿತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ದಲಿತ ಮುಖಂಡರಾದ ರವೀಂದ್ರ ಜಾನೇಕಲ್, ಪ್ರಭುರಾಜ ಕೊಡ್ಲಿ, ಬಸವರಾಜ ನಕ್ಕುಂದಿ, ಅಬ್ರಾಹಂ ಹೊನ್ನಟಿಗಿ, ಯಲ್ಲಪ್ಪ ಬಾದರದಿನ್ನಿ ವಕೀಲರು, ಶಿವಗೇನಿ ಕಪಗಲ್, ಸದಾನಂದ ಪನ್ನೂರು, ಆಕಾಶ ಮ್ಯಾತ್ರಿ, ಲಾರೆನ್ಸ್ ಮಾನ್ವಿ, ವೀರೇಶ ಹರವಿ, ಮರಿಸ್ವಾಮಿ ಅಮರಾವತಿ, ವಸಂತ ಕೊಟೆಕಲ್, ನರಸಿಂಹ ಈಟೇಕಾರ್, ಹನುಮಂತರಾಯ ಸುಂಕೇಶ್ವರ, ಮುತ್ತಣ್ಣ ಚಾಗಭಾವಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.