“ಕರಂದ್ಲಾಜೆ ಸಾಧನೆ ಬಗ್ಗೆ ಮಾತನಾಡುವ ನೈತಿಕತೆ ಪ್ರಮೋದ್‌ಗಿಲ್ಲ’
Team Udayavani, Mar 30, 2019, 6:30 AM IST
ಉಡುಪಿ: ಸಂಸದೆ ಶೋಭಾ ಕರಂದ್ಲಾಜೆಯವರು ಇಡೀ ರಾಜ್ಯ ಹೆಮ್ಮೆ ಪಡುವಂತಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ತಂದಿ¨ªಾರೆ. ಅವರು ತಂದ ಅನುದಾನಗಳಿಗೆ ದಾಖಲೆಗಳಿವೆ. ಮಾಜಿ ಜಿÇÉಾ ಉಸ್ತುವಾರಿ ಸಚಿವರಂತೆ 2 ಸಾವಿರ ಚಿಲ್ಲರೆ ಕೋ.ರೂ.
ಅನುದಾನಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂದು ಸುಳ್ಳು ಹೇಳಿಲ್ಲ. ಬ್ಯಾನರ್, ಫ್ಲೆಕÕ… ಹಾಕಿಕೊಂಡು ಪ್ರಚಾರ ಮಾಡಿಕೊಂಡಿಲ್ಲ. ಭ್ರಷ್ಟಾಚಾರ ನಡೆಸಿಲ್ಲ, ಭ್ರಷ್ಟಾಚಾರಿಗಳನ್ನೂ ಪೋಷಿಸಿಲ್ಲ ಎಂದು ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ ಲೇವಡಿ ಮಾಡಿದರು.
ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕರಂದ್ಲಾಜೆಯವರು ಒಂದು ಸಂಸದೀಯ ಅವಧಿಯಲ್ಲಿ ಕ್ಷೇತ್ರಕ್ಕೆ
ಹಲವಾರು ಪ್ರಥಮಗಳ ಯೋಜನೆ ಗಳನ್ನು ಪರಿಚಯಿಸಿದ್ದು, ರಾಜ್ಯ ವಲಯ
ದಲ್ಲಿಯೇ ವಿಶೇಷವಾಗಿ ಶ್ಲಾಘನೆಗೆ ಒಳಪಟ್ಟಿದೆ. ಸಂಸತ್‌ನಲ್ಲಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ವಿಶ್ಲೇಷಣೆಯೊಂದರಲ್ಲಿ 53 ಮಹಿಳಾ ಸಂಸದರ ಪೈಕಿ ಪ್ರಪ್ರಥಮ ಸಾಧಕರಾಗಿ ಅವರು ನಿಲ್ಲುತ್ತಾರೆ. ಅವರು
ಇದನ್ನು ಎಲ್ಲೂ ಪ್ರಚಾರ ಮಾಡಿಲ್ಲ.
ಅವರ ಸಾಧನೆ ಬಗ್ಗೆ ಮಾತನಾಡುವ ನೈತಿಕ ಹಕ್ಕು ಪ್ರಮೋದ್ ಅವರಿ ಗಿಲ್ಲ ಎಂದು ಹೇಳಿದರು.
ಕಾರ್ಯಕರ್ತರ ಮೇಲೆ ಉಕ್ಕಿದ ಪ್ರೇಮ
ಪ್ರಮೋದ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಬಳಿಕ ಕಾರ್ಯಕರ್ತರನ್ನು ಕಡೆಗಣಿಸಿ ಸೋತೆನೆಂದು ಮತ್ತೆ ಕಾರ್ಯಕರ್ತರನ್ನು ಓಲೈಸಲು ಆರಂಭಿಸಿ¨ªಾರೆ. ಅಂದು ಸೋತಾಗ ಉÇÉೇಖವಾಗದ ಕಾರ್ಯಕರ್ತರ ಮೇಲಿನ ಪ್ರೇಮ ಇದ್ದಕ್ಕಿದ್ದಂತೆ ಅವರಿಗೆ ಈಗ ಏಕೆ ಉಕ್ಕಿ ಹರಿಯುತ್ತಿದೆ ಎಂದು ಪ್ರಭಾಕರ ಪೂಜಾರಿ ಪ್ರಶ್ನಿಸಿದರು.
ಬಿಜೆಪಿ ಬಾಗಿಲಲ್ಲಿ ನಿಂತವರು
ಅಧಿಕಾರದಾಹದಿಂದ ಯಾವುದೇ ಪಕ್ಷವಾದರೂ ಸರಿಯೇ ಎನ್ನುವ ಮನೋಭಾವ ಹೊಂದಿರುವ ಪ್ರಮೋದ್ ಅಂತಿಮ ಕ್ಷಣದವರೆಗೂ ಬಿಜೆಪಿ ಬಾಗಿಲಲ್ಲಿ ನಿಂತು, ಅಲ್ಲಿ ಪ್ರವೇಶ ದೊರಕದಿ¨ªಾಗ ಕೊನೆಯ ಕ್ಷಣದಲ್ಲಿ ಜೆಡಿಎಸ್‌ಗೆ ಸೇರಿ ಈಗ ಎರಡೂ ಪಕ್ಷವನ್ನು ನಿರ್ನಾಮಗೊಳಿಸಲು ಪೀಠಿಕೆ ಹಾಕಿ¨ªಾರೆ ಎಂದರು.
ಪಂ.ಗಳಿಗೆ ಹೇರಳ ಅನುದಾನ
ಶೋಭಾ ಕರಂದ್ಲಾಜೆಯವರು ಸಂಸದೆಯಾಗಿ ಜಿ.ಪಂ., ತಾ.ಪಂ., ಗ್ರಾ.ಪಂ.ಗಳಿಗೆ ಹೇರಳ ಅನುದಾನಗಳನ್ನು ತಂದಿದ್ದು, ಈ ಅವಧಿಯಲ್ಲಿ ದಾಖಲೆ ಪ್ರಮಾಣದಲ್ಲಿ ಸಂಸದರ ನಿಧಿ ಬಳಕೆಯಾಗಿದೆ. ಯಾವುದೇ ಪಂ. ಸದಸ್ಯನ ಅರ್ಜಿ ತಿರಸ್ಕೃತಗೊಂಡ ದಾಖಲೆಗಳಿಲ್ಲ. ಇದು ಸಂಸದೆಯವರ ಕಾರ್ಯತತ್ಪರತೆ, ಜನಪರ ಕಾಳಜಿಯನ್ನು ಸೂಚಿಸುತ್ತದೆ ಎಂದು ಜಿ.ಪಂ. ಅಧ್ಯಕ್ಷ ದಿನಕರ ಬಾಬು ಹೇಳಿದರು. ನಗರ ಬಿಜೆಪಿ ಮಾಜಿ ಅಧ್ಯಕ್ಷ ರಾಘವೇಂದ್ರ ಕಿಣಿ, ಉಪಾಧ್ಯಕ್ಷ ಟಿ.ಜಿ. ಹೆಗ್ಡೆ, ಸತೀಶ್ ಶೆಟ್ಟಿ, ನಗರಸಭಾ ಸದಸ್ಯ ಗಿರಿಧರ ಆಚಾರ್ಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangavathi; ಸಿಲಿಂಡರ್ ಸ್ಪೋ*ಟಗೊಂಡು ಅಗ್ನಿ ಅವಘಡ: ವೈದ್ಯೆ ಸೇರಿ ಇಬ್ಬರಿಗೆ ತೀವ್ರ ಗಾಯ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Vitla; ನಿವೃತ್ತ ಶಿಕ್ಷಕ, ಅರ್ಥಧಾರಿ ಪಕಳಕುಂಜ ಶ್ಯಾಮ ಭಟ್ ವಿಧಿವಶ
Trump warns; ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ ನರಕ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.