ಅಪಘಾತವಲ್ಲ;ಕೊಲೆ:ಮೂವರ ಬಂಧನ
ಬಿಜೆಪಿ ನಾಯಕ ಬಾಲಚಂದ್ರ ಕಳಗಿ ಸಾವಿನ ಪ್ರಕರಣಕ್ಕೆ ಹೊಸ ತಿರುವು
Team Udayavani, Mar 30, 2019, 6:13 AM IST
ಮಡಿಕೇರಿ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕೊಡಗು ಜಿಲ್ಲಾ ಬಿಜೆಪಿ ಪ್ರ.ಕಾರ್ಯ ದರ್ಶಿ ಬಾಲಚಂದ್ರ ಕಳಗಿ ಅವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಸಂಪಾಜೆ ನಿವಾಸಿ ಸಂಪತ್ ಕುಮಾರ್ (34), ಮಡಿಕೇರಿಯ ಗೌಳಿ ಬೀದಿ ನಿವಾಸಿ ಜಯನ್ ಅಲಿಯಾಸ್ ಜಗ್ಗು (34) ಹಾಗೂ ಸಂಪಾಜೆ ನಿವಾಸಿ ಹರಿಪ್ರಸಾದ್ (36) ಬಂಧಿತ ರು.ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದ ಎಸ್‌ಪಿ ಡಾ| ಸುಮನ್ ಡಿ.ಪನ್ನೇಕರ್ ಅವರು,ವೈನ್ ಶಾಪ್ ಹಾಗೂ ಕ್ಲಬ್‌ಗ ಸಂಬಂಧಿಸಿದ ವಿವಾದ ಕೊಲೆಗೆ ಕಾರಣ ಎಂದು ತಿಳಿಸಿದ್ದಾರೆ.
ಮಾ. 29ರಂದು ಶಂಕಿತ ಮೂವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸಂಪತ್ ಕುಮಾರ್ ಹಾಗೂ ಹರಿಪ್ರಸಾದ್ ಅವರು ಸುಮಾರು ಒಂದು ತಿಂಗಳಿನಿಂದ ಬಾಲಚಂದ್ರರನ್ನು ಕೊಲ್ಲಲು ಸಂಚು ರೂಪಿಸಿದ್ದುದು ತಿಳಿಯಿತು. ಸಂಪತ್ ಕುಮಾರ್ ತನ್ನ ಸ್ನೇಹಿತ ಜಯನ್ ಎಂಬಾತನಿಗೆ ಸುಪಾರಿ ನೀಡಿದ್ದ ಹಾಗೂ ಲಾರಿಯ 1.50 ಲ.ರೂ.ಗಳನ್ನು ತೀರಿಸುವ ಆಮಿಷ ಒಡ್ಡಿ ಈ ಕೃತ್ಯ ಮಾಡಿ ಸಿದ್ದ ಎನ್ನಲಾಗಿದೆ.
ಸುಪಾರಿ ಸ್ವೀಕರಿಸಿದ್ದ ಜಯನ್ ಮಾ. 19ರಂದು ಸಂಜೆ 6.30ರ ಸುಮಾರಿಗೆ ಬಾಲಚಂದ್ರ ಕಳಗಿಯವರು ಮೇಕೇರಿ ಕಡೆಯಿಂದ ಸಂಪಾಜೆ ಕಡೆಗೆ ತಮ್ಮ ಆಮ್ನಿ ಕಾರಿನಲ್ಲಿ ತೆರಳುತ್ತಿದ್ದಾಗ ಲಾರಿ ಢಿಕ್ಕಿ ಹೊಡೆ ಸಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ.
ಹಲವು ವಿವಾದಗಳಲ್ಲಿ ದ್ವೇಷ
ಸಂಪತ್ ಕುಮಾರ್ ಹಾಗೂ ಹರಿ ಪ್ರಸಾದ್ ಅವರು ಎರಡು ವರ್ಷಗಳ ಹಿಂದೆ ಸಂಪಾಜೆಯಲ್ಲಿ ರಿಕ್ರಿಯೇಷನ್ ಕ್ಲಬ್ ತೆರೆಯಲು ಪ್ರಯತ್ನಿಸಿದ್ದು, ಇದಕ್ಕೆ ಗ್ರಾ. ಪಂ.ಅಧ್ಯಕ್ಷರಾಗಿದ್ದ ಬಾಲಚಂದ್ರ ಅನುಮತಿ ನಿರಾಕರಿಸಿದ್ದರು. 2018ರ ಮಾರ್ಚ್‌ನಲ್ಲಿ ಸಂಪಾಜೆಯಲ್ಲಿ ಬಾರ್ ತೆರೆಯಲು ಪ್ರಯತ್ನಿಸಿದಾಗಲೂ ಅಡ್ಡಿಪಡಿಸಿದ್ದರು. 2018ರ ಎಪ್ರಿಲ್‌ನಲ್ಲಿ ಸಂಪತ್‌ನ ಜೆಸಿಬಿ ಕಳೆದು ಹೋಗಿರುವ ಬಗ್ಗೆ ಸುಳ್ಯ ಠಾಣೆೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗ ತಮ್ಮ ಪ್ರಭಾವ ಬಳಸಿದ ಬಾಲಚಂದ್ರ ಅವರು ಜೆಸಿಬಿ ಪತ್ತೆಗೆ ಅಡ್ಡಿಯುಂಟುಮಾಡಿದ್ದಾರೆ ಎನ್ನುವ ಅಸಮಾಧಾನವೂ ಆರೋ ಪಿಗಳಲ್ಲಿತ್ತು ಎಂದು ಎಸ್‌ಪಿ ವಿವರಿಸಿದರು.ಕೃತ್ಯಕ್ಕೆ ಬಳಸಿದ್ದ ಲಾರಿ ಹಾಗೂ ಕಾರನ್ನು ಪೊಲೀಸರು ವಶಪಡಿಸಿದ್ದಾರೆ.
ಡಿವೈಎಸ್‌ಪಿ ಕೆ.ಎಸ್.ಸುಂದರರಾಜ್ ಮಾರ್ಗದರ್ಶನದಲ್ಲಿ ಮಡಿಕೆೇರಿ ಗ್ರಾಮಾಂತರ ಸಿಐ ಸಿದ್ದಯ್ಯ,ಉಪ ನಿರೀಕ್ಷಕ ಚೇತನ್, ಪಿಎಸ್‌ಐ ಶ್ರವಣ್, ಸಿಬಂದಿ ವರ್ಗದ ದಿನೇಶ್, ಶಿವರಾಜು,ರವಿ,ಅನಿಲ್,ಮಂಜುನಾಥ್,ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಹಾಗೂ ಚಾಲಕರಾದ ಸುನಿಲ್ ಮತ್ತು ಅರುಣ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ತಂಡಕ್ಕೆ ಎಸ್ ಪಿ ಬಹುಮಾನ ಘೋಷಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Tennis: ಏಷ್ಯಾಡ್ ಕಂಚಿನ ಪದಕ ವಿಜೇತ ಟೆನಿಸಿಗ ಪ್ರಜ್ಞೇಶ್ ಗುಣೇಶ್ವರನ್ ನಿವೃತ್ತಿ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.