ಬಿಎಸ್‌ವೈ ಬಲ ಇದ್ದೂ ಕತ್ತಿಗೆ ಸಿಗಲಿಲ್ಲ ಟಿಕೆಟ್
Team Udayavani, Mar 30, 2019, 7:55 AM IST
ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿಯ ಟಿಕೆಟ್ ಕದನ ಸದ್ಯಕ್ಕಂತೂ ಅಂತ್ಯ ಕಂಡಿದ್ದು, ಜೊಲ್ಲೆ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಇಲ್ಲಿ ಚುನಾವಣೆಗಿಂತ ಟಿಕೆಟ್ ಸೆಣ ಸಾಟದಲ್ಲಿ ಗೆಲ್ಲುವವರು ಯಾರು ಎನ್ನುವುದೇ ಕುತೂಹಲ ಕೆರಳಿಸಿತ್ತು.
ಆರ್ಥಿಕವಾಗಿ ಸದೃಢರಾಗಿರುವ ಶಿಕ್ಷಣ ಹಾಗೂ ಹಣಕಾಸು ಸಂಸ್ಥೆಗಳನ್ನು ಹೊಂದಿ
ರುವ ಯಕ್ಸಂಬಾ ಗ್ರಾಮದ ಅಣ್ಣಾಸಾಹೇಬ ಜೊಲ್ಲೆ ಈಗ ಬಿಜೆಪಿ ಅಭ್ಯರ್ಥಿ.
ಟಿಕೆಟ್ ಪ್ರಯತ್ನದ ವಿಚಾರದಲ್ಲಿ ಅಣ್ಣಾಸಾಹೇಬ ಜೊಲ್ಲೆಗೆ ಆರ್ ಎಸ್‌ಎಸ್ ಬೆಂಬಲವಿದ್ದರೆ, ರಮೇಶ ಕತ್ತಿ ಬೆನ್ನಿಗೆ ಬಿ.ಎಸ್.ಯಡಿಯೂರಪ್ಪ ಗುಂಪು ನಿಂತಿತ್ತು.
ಅಣ್ಣಾಸಾಹೇಬ ಜೊಲ್ಲೆಗೆ ಇದು ಪ್ರಕಾಶ ಹುಕ್ಕೇರಿ ಕುಟುಂಬದ ವಿರುದಟಛಿ ನಾಲ್ಕನೇ ರಾಜಕೀಯ ಯುದಟಛಿ. ಇದುವರೆಗೆ ಎರಡು ಬಾರಿ ಪ್ರಕಾಶ ಹುಕ್ಕೇರಿ ಹಾಗೂ ಒಮ್ಮೆ ಹುಕ್ಕೇರಿ ಪುತ್ರ ಗಣೇಶ ಜೊತೆ ಪೈಪೋಟಿ ನಡೆಸಿರುವ ಅಣ್ಣಾಸಾಹೇಬ, ಒಮ್ಮೆಯೂ ಗೆಲುವಿನ ಸಿಹಿ ಉಂಡಿಲ್ಲ.
ಖಚಿತ ಮೂಲಗಳ ಪ್ರಕಾರ ಸಾಧು-ಸಂತರು ಈ ಟಿಕೆಟ್‌ನ ಹಿಂದಿದ್ದಾರೆ. ಜೊತೆಗೆ ಆರ್‌ಎಸ್ ಎಸ್, ಈ ಭಾಗದ ಹಾಲಿ ಹಾಗೂ ಮಾಜಿ ಶಾಸಕರ ಜೊತೆಗೆ ರಮೇಶ ಜಾರಕಿಹೊಳಿ ಬೆಂಬಲ ಜೊಲ್ಲೆ ಪರ ಕೆಲಸ ಮಾಡಿದೆ. ಮಹಾರಾಷ್ಟ್ರದ ಕನೇರಿ ಮಠದ ಸ್ವಾಮೀಜಿ, ಬಾಬಾ ರಾಮದೇವ ಹಾಗೂ ಉತ್ತರ ಪ್ರದೇಶದಯೋಗಿ ಆದಿತ್ಯನಾಥ ಅವರ ಶಿಫಾರಸಿನಿಂದ ಜೊಲ್ಲೆ ಟಿಕೆಟ್ ಪಡೆದುಕೊಂಡಿದ್ದಾರೆ ಎಂಬ ಮಾತುಗಳಿವೆ. ಟಿಕೆಟ್‌ಗಾಗಿ ಆರ್‌ಎಸ್‌ಎಸ್ ಸಮೀಕ್ಷೆ ನಡೆಸಿ ಜೊಲ್ಲೆ ಹೆಸರನ್ನು ವರಿಷ್ಠರಿಗೆ ಶಿಫಾರಸು ಮಾಡಿತ್ತು ಎನ್ನಲಾಗಿದೆ. ಇದರಲ್ಲಿ ಆರ್‌ಎಸ್‌ಎಸ್‌ನ ಪ್ರಮುಖ ಸಂತೋಷ ಅವರ ಪಾತ್ರ ಮಹತ್ವದ್ದಾಗಿತ್ತು. ಆರ್ ಎಸ್‌ಎಸ್ ಪಟ್ಟಿಯಲ್ಲಿ ರಮೇಶ ಕತ್ತಿ ಅವರ ಹೆಸರು ಇರಲೇ ಇಲ್ಲ ಎಂಬುದು ಬಿಜೆಪಿ ಮೂಲಗಳ ಹೇಳಿಕೆ.
ಯಡಿಯೂರಪ್ಪಗೆ ಹಿನ್ನಡೆ: ಮೊದಲಿಂದಲೂ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಗುರುತಿಸಿಕೊಂಡಿದ್ದ ಕತ್ತಿ ಸಹೋದರರು ಅವರ ಮೂಲಕವೇ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಆದರೆ, ಈಗ ಬಿಎಸ್‌ವೈ ಗುಂಪಿಗೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ರಮೇಶ ಕತ್ತಿಗೆ ಟಿಕೆಟ್ ಕೊಡಲೇಬಾರದು ಎಂಬ
ಉದ್ದೇಶದಿಂದಲೇ ಆರ್‌ಎಸ್‌ಎಸ್, ಬಿಜೆಪಿವರಿಷ್ಠ ರ ಮೇಲೆ ಒತ್ತಡ ತಂದಿತ್ತು. ಇದೇ
ಕಾರಣಕ್ಕೆ ಚಿಕ್ಕೋಡಿ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ವಿಳಂಬ ಮಾಡಲಾಗಿತ್ತು. ಇದರ ಮಧ್ಯೆ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಅವರ ಹೆಸರು ಪ್ರಸ್ತಾಪವಾಗಿತ್ತಾದರೂ ಜೊಲ್ಲೆ ಹಾಗೂ ಕತ್ತಿ ಅವರ ನಡುವಿನ ಪೈಪೋಟಿಯಿಂದಾಗಿ ಕೋರೆ ಹಿಂದೆ ಸರಿದರು.
ಕತ್ತಿಗೆ ಕೈಕೊಟ್ಟಿದ್ದು ಯಾರು?
ಕತ್ತಿ ಸೋದರರು ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದರೂ ರಮೇಶ ಕತ್ತಿಗೆ ಟಿಕೆಟ್ ತಪ್ಪಲು ಕಾರಣ ಯಾರು ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಇದಕ್ಕೆ
ಬಿಜೆಪಿಯ ಹಾಲಿ ಹಾಗೂ ಮಾಜಿ ಶಾಸಕರ ನಿರಂತರ ತಂತ್ರಗಾರಿಕೆಯೇ ಕಾರಣ ಎನ್ನಲಾಗಿದೆ. ಡಿಸಿಸಿ ಬ್ಯಾಂಕ್ ರಾಜಕಾರಣದ ಸೇಡನ್ನು ಮಾಜಿ ಶಾಸಕರು ಈ ಮೂಲಕ
ತೀರಿಸಿಕೊಂಡಿದ್ದಾರೆ ಎಂಬ ಮಾತುಗಳು ಅವರ ಬೆಂಬಲಿಗರಿಂದ ಕೇಳಿ ಬರುತ್ತಿವೆ. ಚಿಕ್ಕೋಡಿ ಕ್ಷೇತ್ರಕ್ಕೆ ಈ ಬಾರಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಿಕೆಟ್ ನೀಡಬೇಕು. ಇವರು ಅಲ್ಲದಿದ್ದರೆ ಬೇರೆ ಯಾರಿಗಾದರೂ ಕೊಡಿ. ಆದರೆ, ಯಾವುದೇ ಕಾರಣಕ್ಕೂ ರಮೇಶ ಕತ್ತಿಗೆ ಬೇಡ ಎಂದು ಬಿಜೆಪಿಯ ಹಲವಾರು ಸಭೆಗಳಲ್ಲಿ ಹೇಳುತ್ತಲೇ ಬಂದಿದ್ದ
ಚಿಕ್ಕೋಡಿ ಭಾಗದ ಶಾಸಕರು ಹಾಗೂ ಮಾಜಿ ಶಾಸಕರು ಕೊನೆಯವರೆಗೂ ತಮ್ಮ ನಿಲುವಿಗೆ ಅಂಟಿಕೊಂಡಿದ್ದು ರಮೇಶ ಕತ್ತಿಗೆ ಮುಳುವಾಯಿತು. ಡಿಸಿಸಿ ಬ್ಯಾಂಕ್ ರಾಜಕಾರಣದಲ್ಲಿ ತಮಗೆ ಅನ್ಯಾಯವಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪರ ಪ್ರಚಾರಕ್ಕೆ ಕತ್ತಿ ಸಹೋದರರು ಬರಲಿಲ್ಲ ಎಂಬ ಕಾರಣಕ್ಕೆ ಮಾಜಿ ಸಚಿವ ಲಕ್ಷ್ಮಣ ಸವದಿ ಮುನಿಸಿಕೊಂಡು ರಮೇಶ ಕತ್ತಿಗೆ ಟಿಕೆಟ್ ಸಿಗದಂತೆ ನೋಡಿಕೊಂಡರು ಎಂಬ
ಮಾತುಗಳು ಕ್ಷೇತ್ರದಲ್ಲಿ ದಟ್ಟವಾಗಿ ಕೇಳಿ ಬರುತ್ತಿವೆ.
ಉಮೇಶ ಕತ್ತಿ ನಡೆ ಮೇಲೆ ಕಣ್ಣು
ಈ ಮಧ್ಯೆ, ಬೆಲ್ಲದಬಾಗೇವಾಡಿಯಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿರುವ ಉಮೇಶ ಕತ್ತಿ, “ಟಿಕೆಟ್ ಮರು ಪರಿಶೀಲನೆಗೆ ಮನವಿ ಮಾಡಿದ್ದೇವೆ. ಹೀಗಾಗಿ ಏ.4ರವರೆಗೆ ಕಾದು ನೋಡಿ. ಈಗ ಜೊಲ್ಲೆ ಅವರ ಉತ್ಸಾಹ ನೋಡಿ ಟಿಕೆಟ್ ಕೊಟ್ಟಿರಬಹುದು. ಇನ್ನು ಕೆಲ ದಿನಗಳ ಕಾಲ ಕಾದು ನೋಡೋಣ’ ಎಂದು ಹೇಳಿ ಜನರನ್ನು ಕುತೂಹಲದಲ್ಲಿಟ್ಟಿದ್ದಾ ರೆ. ಟಿಕೆಟ್ ವಂಚಿತ ರಮೇಶ ಕತ್ತಿ ಹಾಗೂ ಅವರ ಸಹೋದರ ಉಮೇಶ ಕತ್ತಿ ಅವರ
ಮುಂದಿನ ನಿರ್ಧಾರ ಈಗ ತೀವ್ರ ಕುತೂಹಲ ಹುಟ್ಟಿಸಿದೆ. ನಾವು ಪಕ್ಷದ ಆದೇಶ ಪಾಲನೆ ಮಾಡುತ್ತೇವೆ ಎಂದು ಕತ್ತಿ ಸಹೋದರರು ಮೇಲ್ನೋಟಕ್ಕೆ ಹೇಳಿದರೂ ಅವರ ಆಂತರಿಕ ಕಾರ್ಯಾಚರಣೆ ಬಗ್ಗೆ ಬಿಜೆಪಿ ವಲಯದಲ್ಲಿ ಆತಂಕ ಇದ್ದೇ ಇದೆ. ಇನ್ನೊಂದೆಡೆ, ಬಿಜೆಪಿಯಲ್ಲಿ ಟಿಕೆಟ್ ವಿಷಯದಲ್ಲಿ ಅಸಮಾಧಾನ ಉಂಟಾಗಿದೆ ಎಂಬ ಸಂಗತಿಯಿಂದ ಕಾಂಗ್ರೆಸ್ ಪಾಳೆಯದಲ್ಲಿ ಹೊಸ ಹುರುಪು ಕಾಣಿಸಿಕೊಂಡಿದೆ. ಇದು ಹೊಂದಾಣಿಕೆಯ ರಾಜಕಾರಣದ ಸುಳಿವು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.