ಅಂತಿಮ ಅಖಾಡದಲ್ಲಿ 241ಅಭ್ಯರ್ಥಿಗಳು
Team Udayavani, Mar 30, 2019, 8:05 AM IST
ಬೆಂಗಳೂರು: ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ದಕ್ಷಿಣ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಚಿತ್ರಣ ನಿಚ್ಚಳ ವಾಗಿದ್ದು, ಅಂತಿಮವಾಗಿ 241ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಾಮಪತ್ರ ವಾಪಸ್ ಪಡೆದುಕೊಳ್ಳಲು ಶುಕ್ರವಾರ (ಮಾ.29) ಕೊನೆ ದಿನವಾಗಿತ್ತು. 274 ಕ್ರಮಬದ್ಧ ನಾಮಪತ್ರಗಳ ಪೈಕಿ 36 ನಾಮ ಪತ್ರಗಳನ್ನು ವಾಪಸ್ ಪಡೆದು ಕೊಳ್ಳಲಾಗಿದ್ದು ಅಖಾಡದಲ್ಲಿ 241 ಅಭ್ಯರ್ಥಿ ಗಳು ಉಳಿದುಕೊಂಡಂತಾಗಿದೆ.
ಈ ಪೈಕಿ ಬಿಜೆಪಿಯಿಂದ 13 ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಪಕ್ಷದ 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸದ ಬಿಜೆಪಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದೆ. ಮೈತ್ರಿ ಪಕ್ಷದ 14 ಅಭ್ಯರ್ಥಿಗಳ ಪೈಕಿ ಹಾಸನ, ಮಂಡ್ಯ, ತುಮಕೂರು, ಉಡುಪಿ- ಚಿಕ್ಕಮಗಳೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಗಳಿದ್ದರೆ, ದ. ಕನ್ನಡ, ಚಿತ್ರದುರ್ಗ, ಮೈಸೂರು, ಚಾಮರಾಜನಗರ, ಬೆಂ.ಗ್ರಾಮಾಂ ತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇದ್ದಾರೆ. ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.
ಚಿಕ್ಕಬಳ್ಳಾಪುರ ಕ್ಷೇತ್ರ ಕಣದಲ್ಲಿ ಉಳಿದವರು: 15
ಪ್ರಮುಖರು
ವೀರಪ್ಪ ಮೊಯ್ಲಿ (ಕಾಂಗ್ರೆಸ್),
ಬಚ್ಚೇಗೌಡ (ಬಿಜೆಪಿ)
ಚಾಮರಾಜನಗರ
ಕಣದಲ್ಲಿ ಉಳಿದವರು: 10
ಪ್ರಮುಖರು
ಧ್ರುವನಾರಾಯಣ(ಕಾಂಗ್ರೆಸ್),
ವಿ.ಶ್ರೀನಿವಾಸ ಪ್ರಸಾದ್(ಬಿಜೆಪಿ)
ಹಾಸನ
ಕಣದಲ್ಲಿ ಉಳಿದವರು: 6
ಪ್ರಮುಖರು
ಪ್ರಜ್ವಲ್ ರೇವಣ್ಣ (ಜೆಡಿಎಸ್),
ಎ.ಮಂಜು (ಬಿಜೆಪಿ)
ಕೋಲಾರ
ಕಣದಲ್ಲಿ ಉಳಿದವರು: 14
ಪ್ರಮುಖರು
ಕೆ.ಎಚ್.ಮುನಿಯಪ್ಪ (ಕಾಂಗ್ರೆಸ್),
ಎಸ್.ಮುನಿಸ್ವಾಮಿ(ಬಿಜೆಪಿ)
ಮಂಡ್ಯ
ಕಣದಲ್ಲಿ ಉಳಿದವರು: 22
ಪ್ರಮುಖರು
ನಿಖೀಲ್ ಕುಮಾರಸ್ವಾಮಿ
(ಜೆಡಿಎಸ್), ಸುಮಲತಾ(ಪಕ್ಷೇತರ)
ಮೈಸೂರು
ಕಣದಲ್ಲಿ ಉಳಿದವರು: 22
ಪ್ರಮುಖರು
ಸಿ.ಎಚ್.ವಿಜಯಶಂಕರ್(ಕಾಂಗ್ರೆಸ್),
ಪ್ರತಾಪ್ ಸಿಂಹ(ಬಿಜೆಪಿ)
ತುಮಕೂರು
ಕಣದಲ್ಲಿ ಉಳಿದವರು: 15
ಪ್ರಮುಖರು
ಎಚ್.ಡಿ.ದೇವೇಗೌಡ (ಜೆಡಿಎಸ್),
ಜಿ.ಎಸ್.ಬಸವರಾಜು (ಬಿಜೆಪಿ)
ಉಡುಪಿ-ಚಿಕ್ಕಮಗಳೂರು
ಕಣದಲ್ಲಿ ಉಳಿದವರು: 12
ಪ್ರಮುಖರು
ಶೋಭಾ ಕರಂದ್ಲಾಜೆ (ಬಿಜೆಪಿ),
ಪ್ರಮೋದ್ ಮಧ್ವರಾಜ(ಜೆಡಿಎಸ್)
ದಕ್ಷಿಣ ಕನ್ನಡ
ಕಣದಲ್ಲಿ ಉಳಿದವರು: 13
ಪ್ರಮುಖರು
ನಳೀನ್ ಕುಮಾರ್ ಕಟೀಲ…(ಬಿಜೆಪಿ),
ಮಿಥುನ್ ರೈ (ಕಾಂಗ್ರೆಸ್)
ಚಿತ್ರದುರ್ಗ
ಕಣದಲ್ಲಿ ಉಳಿದವರು: 19
ಪ್ರಮುಖರು
ಬಿ.ಎನ್.ಚಂದ್ರಪ್ಪ (ಕಾಂಗ್ರೆಸ್),
ಆನೇಕಲ್ ನಾರಾಯಣಸ್ವಾಮಿ(ಬಿಜೆಪಿ)
ಬೆಂಗಳೂರು ಉತ್ತರ
ಕಣದಲ್ಲಿ ಉಳಿದವರು: 31
ಪ್ರಮುಖರು
ಡಿ.ವಿ.ಸದಾನಂದಗೌಡ (ಬಿಜೆಪಿ),
ಕೃಷ್ಣಬೈರೇಗೌಡ (ಕಾಂಗ್ರೆಸ್)
ಬೆಂಗಳೂರು ದಕ್ಷಿಣ
ಕಣದಲ್ಲಿ ಉಳಿದವರು: 25
ಪ್ರಮುಖರು
ತೇಜಸ್ವಿ ಸೂರ್ಯ (ಬಿಜೆಪಿ),
ಬಿ.ಕೆ.ಹರಿಪ್ರಸಾದ್ (ಕಾಂಗ್ರೆಸ್)
ಬೆಂಗಳೂರು ಕೇಂದ್ರ
ಕಣದಲ್ಲಿ ಉಳಿದವರು: 22
ಪ್ರಮುಖರು
ಪಿ.ಸಿ.ಮೋಹನ್ (ಬಿಜೆಪಿ),
ರಿಜ್ವಾನ್ ಅರ್ಷದ್ (ಕಾಂಗ್ರೆಸ್)
ಬೆಂಗಳೂರು ಗ್ರಾಮಾಂತರ
ಕಣದಲ್ಲಿ ಉಳಿದವರು: 15
ಪ್ರಮುಖರು
ಡಿ.ಕೆ.ಸುರೇಶ್ (ಕಾಂಗ್ರೆಸ್),
ಅಶ್ವತ್ಥನಾರಾಯಣ (ಬಿಜೆಪಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.