ಕುಂಬ್ರ ಸಬ್‌ ಸ್ಟೇಷನ್‌: ದಿನಕ್ಕೆ 6 ಗಂಟೆ ಪವರ್‌ ಕಟ್‌

Kumbra Sub Station: 6 hour power cut per day

Team Udayavani, Mar 30, 2019, 1:31 PM IST

30-March-2
ಬಡಗನ್ನೂರು: ಅನಿಯಮಿತ ವಿದ್ಯುತ್‌ ಕಡಿತದಿಂದಾಗಿ ಜನ ರೋಸಿ ಹೋಗಿದ್ದಾರೆ. ಬೇಡಿಕೆಗೆ ತಕ್ಕಂತೆ ವಿದ್ಯುತ್‌ ಸರಬರಾಜು ಮಾಡಲು ಮೆಸ್ಕಾಂ ಎಲ್ಲ ವಿಧದ ತಯಾರಿ ನಡೆಸಿಕೊಂಡಿದ್ದರೂ ಓವರ್‌ಲೋಡ್‌ ಸಮಸ್ಯೆಯಿಂದಾಗಿ ಕುಂಬ್ರ ವಿದ್ಯುತ್‌ ಸಬ್‌ಸ್ಟೇಷನ್‌ ಬಳಕೆದಾರರಿಗೆ ಪೂರ್ಣ ಪ್ರಮಾಣದ ವಿದ್ಯುತ್‌ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಲ್ಲಿ 6 ಗಂಟೆ ಪವರ್‌ ಕಟ್‌ ಮಾಡಲು ಮೆಸ್ಕಾಂ ಮುಂದಾಗಿದೆ.
ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯ ಕುಂಬ್ರ ವಿದ್ಯುತ್‌ ಸಬ್‌ ಸ್ಟೇಷನ್‌ 1994ರಲ್ಲಿ ನಿರ್ಮಾಣಗೊಂಡಿದೆ. ಕುಂಬ್ರ-ಬೆಳ್ಳಾರೆ ರಸ್ತೆಯಲ್ಲಿ ಕುಂಬ್ರ ಪೇಟೆಯಿಂದ 1 ಕಿ.ಮೀ. ದೂರದಲ್ಲಿ ಸಬ್‌ ಸ್ಟೇಷನ್‌ ಇದೆ. ಇಲ್ಲಿ ತಲಾ 4 ಮೆಗಾ ವ್ಯಾಟ್‌ ಸಾಮರ್ಥ್ಯದ 2 ಟಿಸಿ ಇದೆ. ಒಟ್ಟು 8 ಮೆಗಾವ್ಯಾಟ್‌ ಸಾಮರ್ಥ್ಯವನ್ನು ಹೊಂದಿದ್ದು, ಇದೀಗ ಸುಮಾರು 20 ಮೆಗಾವ್ಯಾಟ್‌ ವಿದ್ಯುತ್‌ ಸರಬರಾಜು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಂಬ್ರ ಸಬ್‌ಸ್ಟೇಷನ್‌ನಿಂದ ಕುಂಬ್ರ, ಪರ್ಪುಂಜ, ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ಬಡಗನ್ನೂರು ಸುಳ್ಯಪದವು ಕೊನೆಯವರೆಗೆ ಹಾಗೂ ಜಾಲ್ಸೂರು, ಪೆರ್ಲಂಪಾಡಿ, ಮಾಡಾವು, ಕೆದಂಬಾಡಿ ಈ ಭಾಗಗಳಿಗೆ ವಿದ್ಯುತ್‌ ಸರಬರಾಜು ಇದೆ. ಈಶ್ವರಮಂಗಲ ಫೀಡರ್‌ನಿಂದ ಕರ್ನೂರು, ಗಾಳಿಮುಖ ತನಕ ವಿದ್ಯುತ್‌ ಸರಬರಾಜು ಇರುತ್ತದೆ. ಈ ಎಲ್ಲ ಪ್ರದೇಶಗಳ ಮನೆ, ಪಂಪ್‌ ಹೌಸ್‌ ಸಹಿತ ಸುಮಾರು 25 ಸಾವಿರ ಸಂಪರ್ಕಗಳು ಕುಂಬ್ರ ಸಬ್‌ಸ್ಟೇಷನ್‌ ವ್ಯಾಪ್ತಿಯಲ್ಲಿ ಬರುತ್ತವೆ.
ಸಾಮರ್ಥ್ಯ ಹೆಚ್ಚುತ್ತಿಲ್ಲ
ಕುಂಬ್ರ ಸಬ್‌ಸ್ಟೇಷನ್‌ ವ್ಯಾಪ್ತಿಯಲ್ಲಿ ಪ್ರತಿವರ್ಷ 500ಕ್ಕೂ ಅಧಿಕ ಹೊಸ ಸಂಪರ್ಕಗಳು ಸೇರ್ಪಡೆಯಾಗುತ್ತಲಿವೆ. ಆದರೆ ಸಬ್‌ ಸ್ಟೇಷನ್‌ ಸಾಮರ್ಥ್ಯ ಮಾತ್ರ ಹೆಚ್ಚುತ್ತಿಲ್ಲ. ಅದೇ 8 ಮೆಗಾವ್ಯಾಟ್‌ ಸಾಮರ್ಥ್ಯ ಇದೆ. ಓವರ್‌ ಲೋಡ್‌ ಆಗುತ್ತಿದೆ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಮೆಸ್ಕಾಂ ಸಹಾಯಕ ಎಂಜಿನಿಯರ್‌ ನಿತ್ಯಾನಂದ ತೆಂಡೂಲ್ಕರ್‌ ಅವರು ಹೇಳಿದ್ದಾರೆ.
ಈಶ್ವರಮಂಗಲ ಮತ್ತು ಸುಳ್ಯಪದವು ಫೀಡರ್‌ನಿಂದ ಸರಿಸುಮಾರು 7 ಮೆಗಾ ವ್ಯಾಟ್‌ ವಿದ್ಯುತ್‌ ಸರಬರಾಜು ಆಗುತ್ತಿದೆ. ಕುಂಬ್ರ ಸಬ್‌ಸ್ಟೇಷನ್‌ನಿಂದ ಒಟ್ಟು 7 ತ್ರಿಫೇಸ್‌ ಲೈನ್‌ಗಳಿವೆ. ಇದರಲ್ಲಿ ದಿನದ ಹಗಲು 4 ಗಂಟೆ ತ್ರಿಫೇಸ್‌ ಮತ್ತು ರಾತ್ರಿ 2 ಗಂಟೆ ಒಟ್ಟು 6 ಗಂಟೆ ತ್ರಿಫೇಸ್‌ ಕೊಡಲು ಪ್ರಯತ್ನ ಪಡುತ್ತಿದ್ದೇವೆ. ಏಕಕಾಲದಲ್ಲಿ ಪಂಪುಗಳು ಚಾಲೂ ಆಗುವುದರಿಂದ ಓವರ್‌ಲೋಡ್‌ ಆಗುತ್ತದೆ.
4 ಗಂಟೆ ಕೂಡ ತ್ರೀಫೇಸ್‌ ವಿದ್ಯುತ್‌ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಜೆ.ಇ. ಅವರ ಅಭಿಪ್ರಾಯ. 7 ತ್ರೀಫೇಸ್‌ನಲ್ಲಿ ಹೊಂದಾಣಿಕೆ ಮಾಡಿಕೊಂಡು ದಿನದಲ್ಲಿ 2 ಗಂಟೆ ಸಿಂಗಲ್‌ ಫೇಸ್‌ ನೀಡುತ್ತಿದ್ದೇವೆ. ತ್ರೀಫೇಸ್‌ ಕೊಡುವ ಸಮಯ ವಾರಕ್ಕೊಮ್ಮೆ ಬದಲಾಗುತ್ತದೆ ಎಂದು ಎಂಜಿನಿಯರ್‌ ಹೇಳುತ್ತಾರೆ.
ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ವಿದ್ಯುತ್‌ ಸರಬರಾಜು ಮಾಡಲು ಕೇವಲ ಒಂದು 110 ಕೆ.ವಿ. ವಿದ್ಯುತ್‌ ಸಬ್‌ ಸ್ಟೇಷನ್‌ ಇದೆ. ಉಳಿದ ತಾಲೂಕುಗಳನ್ನು ಅವಲೋಕನ ನಡೆಸಿದರೆ ಪ್ರತಿ ತಾಲೂಕಿಗೆ ತಲಾ ಎರಡು 110 ಕೆ.ವಿ. ಕುಂಬ್ರ ಸಬ್‌ ಸ್ಟೇಷನ್‌ ಇವೆ. ಮಾಡಾವಿನಲ್ಲಿ ನಿರ್ಮಾಣ ಹಂತದಲ್ಲಿರುವುದು 110 ಕೆ.ವಿ. ಆದರೆ ಈ ಸಬ್‌ಸ್ಟೇಷನ್‌ ಕಾಮಗಾರಿ ಆರಂಭವಾಗಿ 10 ವರ್ಷ ಕಳೆದಿದ್ದು, ಇನ್ನೂ ಪೂರ್ಣಗೊಂಡಿಲ್ಲ.
ಸಬ್‌ಸ್ಟೇಷನ್‌ ನಿರ್ಮಾಣದಿಂದ ಪರಿಹಾರ
ವಿದ್ಯುತ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದ್ದರೂ ಸಬ್‌ಸ್ಟೇಷನ್‌ ಸಾಮರ್ಥ್ಯ ಹೆಚ್ಚಳವಾಗಿಲ್ಲ. ಓವರ್‌ಲೋಡ್‌ ಸಮಸ್ಯೆ ಉಂಟಾಗಿದ್ದು, ಲೈನ್‌ ಟ್ರಿಪ್‌ ನಂತಹ ಸಮಸ್ಯೆಗಳು ಉಂಟಾಗುತ್ತಿವೆ. ಮುಖ್ಯವಾಗಿ ಕಾವು ಮತ್ತು ಮಾಡಾವಿನಲ್ಲಿ ನಿರ್ಮಾಣವಾಗಲಿರುವ 110 ಕೆ.ವಿ. ವಿದ್ಯುತ್‌ ಸಬ್‌ಸ್ಟೇಷನ್‌ಗಳು ಪೂರ್ಣಗೊಂಡರೆ ಬಹುತೇಕ ಸಮಸ್ಯೆ ನಿವಾರಣೆಯಾಗಬಹುದು.
2009ರಲ್ಲಿ ಆರಂಭವಾದ ಮಾಡಾವು ಸಬ್‌ ಸ್ಟೇಷನ್‌ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಶೀಘ್ರವಾಗಿ ಈ ಕಾಮಗಾರಿ ಪೂರ್ಣಗೊಂಡರೆ ಕುಂಬ್ರ ಭಾಗದ ವಿದ್ಯುತ್‌ ಸಮಸ್ಯೆ ಕೊನೆಯಾಗಬಹುದು.
ಪವರ್‌ ಕಟ್‌ ಅನಿವಾರ್ಯ
ಕುಂಬ್ರ ಸಬ್‌ಸ್ಟೇಷನ್‌ನಲ್ಲಿ ವಿಪರೀತ ಓವರ್‌ಲೋಡ್‌ ಇರುವುದರಿಂದ ಗ್ರಾಹಕರಿಗೆ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಕೊಡಲು ಸಾಧ್ಯವಾಗುತ್ತಿಲ್ಲ. ಸಬ್‌ಸ್ಟೇಷನ್‌ 8 ಮೆಗಾವ್ಯಾಟ್‌ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 20 ಮೆಗಾವ್ಯಾಟ್‌ ವಿದ್ಯುತ್‌ ಸರಬರಾಜು ಮಾಡಬೇಕಾದ ಅನಿವಾರ್ಯತೆ ಇದೆ. ಇದರಿಂದ ಓವರ್‌ಲೋಡ್‌ ಆಗುತ್ತಿದೆ. ಆದ್ದರಿಂದ ದಿನದಲ್ಲಿ 6 ಗಂಟೆ ಪವರ್‌ ಕಟ್‌ ಮಾಡಬೇಕಾದ ಅನಿವಾರ್ಯತೆ ಇದೆ. ಮಾಡಾವು ಮತ್ತು ಕಾವು ಸಬ್‌ಸ್ಟೇಷನ್‌ ಕಾಮಗಾರಿ ಪೂರ್ಣಗೊಂಡರೆ ಬಹುತೇಕ ಸಮಸ್ಯೆ ನಿವಾರಣೆಯಾಗಬಹುದು.
– ನಿತ್ಯಾನಂದ ತೆಂಡೂಲ್ಕರ್‌
ಜೂ. ಎಂಜಿನಿಯರ್‌, ಕುಂಬ್ರ ಮೆಸ್ಕಾಂ
ದಿನೇಶ್‌ ಪೇರಾಲು

ಟಾಪ್ ನ್ಯೂಸ್

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್

India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್;‌ ಗಾಯಗೊಂಡ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

7

Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

5

Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.