ರಾಜಕೀಯ ವಿಶ್ಲೇಷಣೆ ಕೃತಿಗಳು ವಿರಳ
Team Udayavani, Mar 30, 2019, 2:26 PM IST
ಬೆಂಗಳೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿರುವ ಭಾರತದಲ್ಲಿ ಸರ್ಕಾರಗಳ ಆಡಳಿತ, ರಾಜಕೀಯ ಕಷ್ಟ ನಷ್ಟಗಳ ಕುರಿತು ರಾಜಕೀಯ ವಿಶ್ಲೇಷಣೆಯನ್ನೊಳಗೊಂಡ ಕೃತಿಗಳ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ನಿರೀಕ್ಷಿತ ಮಟ್ಟದಲ್ಲಿ ಪ್ರಕಟವಾಗದಿರುವುದು ವಿಷಾದನೀಯ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ನಗರದ ಪ್ರಸ್‌ಕ್ಲಬ್‌ನಲ್ಲಿ ಶುಕ್ರವಾರ ಪತ್ರಕರ್ತ ಎಸ್.ಲಕ್ಷ್ಮೀ ನಾರಾಯಣ ಅವರ “ಆಫ್ ದಿ ರೆಕಾರ್ಡ್ ಪಾಲಿಟಿಕ್ಸ್” ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿನ ರಾಜಕೀಯವು ಸಾರ್ವಜನಿಕರ ಜೀವನದಲ್ಲೂ ದೊಡ್ಡ ಪ್ರಭಾವ ಬೀರುತ್ತದೆ.
ಆದರೆ, ಇಲ್ಲಿ ರಾಜಕೀಯ ಚರ್ಚೆಗಳು ಕೇವಲ ಬಾಯಿ ಮಾತಿಗೆ ಸೀಮಿತವಾಗುತ್ತವೆ. ರಾಜಕಾರಣಿಗಳ ನಡೆ, ಆಡಳಿತದ ವಿಮರ್ಶೆ, ಜನರ ಕಷ್ಟ ನಷ್ಟಗಳ ಕುರಿತು ಪುಸ್ತಕಗಳು ನಿರೀಕ್ಷಿತ ಪ್ರಮಾಣದಲ್ಲಿ ಬರುತ್ತಿಲ್ಲ. ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲೂ ಸರ್ಕಾರ ಚಟುವಟಿಕೆ, ಬಜೆಟ್, ಕಾಯ್ದೆ ಜಾರಿ, ತಿದ್ದುಪಡಿ ಸೇರಿದಂತೆ ರಾಜಕೀಯ ಚರ್ಚೆಗಳು ನಡೆಯುತ್ತಿಲ್ಲ.
ಪ್ರಮುಖವಾಗಿ ರಾಜ್ಯದ ಯಾವ ವಿಶ್ವವಿದ್ಯಾಲಯಗಳಲ್ಲೂ “ಪೊಲಿಟಿಕಲ್ ಅಕಾಡೆಮಿಗಳು” ಇಲ್ಲ. ಜತೆಗೆ ವಿವಿಗಳ ರಾಜ್ಯಶಾಸ್ತ್ರ ವಿಭಾಗದ ಪ್ರೊಪೇಸರ್‌ಗಳು ಯಾರೂ ಚುನಾವಣೆ ಹಾಗೂ ಸರ್ಕಾರದ ಕಾರ್ಯಚಟುವಟಿಕೆ ಕುರಿತು ಡಾಕ್ಟರೇಟ್ ಮಾಡಲು ಮುಂದಾಗುತ್ತಿಲ್ಲ ಬೇಸರ ವ್ಯಕ್ತಪಡಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪರ್ತಕರ್ತರು ಹಾಗೂ ರಾಜಕಾರಣಿಗಳು ಒಬ್ಬರನ್ನು ಬಿಟ್ಟು ಮತ್ತೂಬ್ಬರಿಲ್ಲ. ಇಬ್ಬರ ನಡುವೆ ವಿಶ್ವಾಸವಿದ್ದಾಗ ಈ “ಆಫ್ ದಿ ರೆಕಾರ್ಡ್” ಅಂಶಗಳು ಹೆಚ್ಚು ವಿನಿಮಯವಾಗಿರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿಶ್ವಾಸರ್ಹತೆ, ನಂಬಿಕೆ ಕುಗ್ಗಿದ್ದು ಎಷ್ಟೋ ವಿಚಾರಗಳು ಆಫ್ ದಿ ರೆಕಾರ್ಡ್ ಆಗಿ ಉಳಿದಿಲ್ಲ. ಆ ಪದಕ್ಕೆ ಮನ್ನಣೆಯೂ ಸಿಗುತ್ತಿಲ್ಲ.
ಆದರೆ, ಅಂತಹ ರಾಜಕೀಯದ ಆಫ್ ದಿ ರೆಕಾರ್ಡ್‌ಗಳನ್ನು (ಆಂತರಿಕ ಅಂಶ) ಪತ್ರಕರ್ತ ಲಕ್ಷ್ಮೀನಾರಾಯಣ ಅವರು ತಮ್ಮ ಅಂಕಣದಲ್ಲಿ “ಅಮಾಸೆ ಹಾಗೂ ಚೇರ್ಮನ್ರು” ಪಾತ್ರದ ಮೂಲಕ ವಿಡಂಬನಾತ್ಮಕವಾಗಿ ಜನರಿಗೆ ಮುಟ್ಟಿಸುತ್ತಿದ್ದಾರೆ. ಮುಖ್ಯವಾಗಿ ಈ ಪುಸ್ತಕದಲ್ಲಿ ಅಂತಹ ಆಯ್ದ ಅಂಕಣಗಳಿವೆ. ಇನ್ನು ಇಲ್ಲಿನ ಬಹುತೇಕ ಬರಹವು ಹಳ್ಳಿ ಸೊಗಡಿನಲ್ಲಿಯೇ ಇದ್ದು ಈ ಮೂಲಕ ಕೃತಿಯು ಓದುಗರಿಗೆ ಮತ್ತಷ್ಟು ಹತ್ತಿರವಾಗುತ್ತದೆ ಎಂದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಆಫ್ ದಿ ರೆಕಾರ್ಡ್ ಪದಕ್ಕೆ 25 ವರ್ಷಗಳ ಹಿಂದೆ ಮಹತ್ವ ಇತ್ತು. ಆದರೆ, ಇಂದು ರಾಜಕಾರಣಿಗಳ ಮಾತುಗಳು ಆಫ್ ದಿ ರೆಕಾರ್ಡ್ ಆಗಿ ಉಳಿದಿಲ್ಲ. ಇದರಿಂದಾಗಿ ಎಷ್ಟೋ ರಾಜಕಾರಣಿಗಳು ಖ್ಯಾತಿ ಕುಖ್ಯಾತಿಗಳನ್ನು ಪಡೆದಿದ್ದಾರೆ. ಆದರೆ, ಕೆಲ ಪತ್ರಕರ್ತರು ಇಂದಿಗೂ ಆಫ್ ದಿ ರೆಕಾರ್ಡ್ ಪಾಲಿಸಿ ಮುಂದುವರೆಸಿಕೊಂಡು ಬಂದಿದ್ದಾರೆ.
ಅಂತವರ ಸಾಲಿಗೆ ಲಕ್ಷ್ಮೀನಾರಾಯಣ ಅವರ ಸೇರಿದ್ದು, ಅವರು ಪ್ರಸ್ತುತ ರಾಜಕೀಯದ ವಸ್ತು ಸ್ಥಿತಿಯನ್ನು ಮತ್ತು ಅದರಲ್ಲಿನ ಆಂತರಿಕ ಅಂಶಗಳನ್ನು ಅಂಕಣ ರೂಪದಲ್ಲಿ ಬರೆದಿದ್ದಾರೆ. ಆ ಅಂಕಣ ಬರಹಗಳನ್ನು ಒಟ್ಟಾಗಿ ಸೇರಿಸಿರುವ ಈ “ಆಫ್ ದಿ ರೆಕಾರ್ಡ್ ಪಾಲಿಟಿಕ್ಸ್’ ಪುಸ್ತಕ ಸಂಗ್ರಹಕ್ಕೆ ಯೋಗ್ಯವಾಗಿದೆ ಎಂದು ತಿಳಿಸಿದರು.
ಬೆಂಗಳೂರು ಪ್ರಸ್‌ಕ್ಲಬ್ ಅಧ್ಯಕ್ಷ ಕೆ.ಸದಾಶಿವ ಶಣೈ, ಅನು ಪ್ರಕಾಶನದ ಬಿ.ಎನ್.ರಮೇಶ್, ಪತ್ರಕರ್ತ ಎಸ್.ಲಕ್ಷ್ಮೀ ನಾರಾಯಣ ಉಪಸ್ಥಿತರಿದ್ದರು. ಪತ್ರಕರ್ತ ವೈ.ಗ.ಜಗದೀಶ್ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.
ಅಧರ್ಮ ರಾಜಕಾರಣ ಕುರಿತು ಎಚ್.ವಿಶ್ವನಾಥ್ ಪುಸ್ತಕ: ಕಾರ್ಯಕ್ರಮದಲ್ಲಿ ತಮ್ಮ ಮುಂದಿನ ಪುಸ್ತಕ ಕುರಿತು ಮಾತನಾಡಿದ ವಿಶ್ವನಾಥ್ ಅವರು, ರಾಜಕೀಯದಲ್ಲಿ ನಾನು ಕಂಡ ಅನುಭವಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುತ್ತಿದ್ದೇನೆ.
ಅದರ ಸಾಲಿಗೆ ಮತ್ತೂಂದು ಕೃತಿ ಸೇರ್ಪಡೆಯಾಗುತ್ತಿದ್ದು, ಚುನಾವಣೆ ಬಳಿಕ ಪ್ರಕಟಿಸಲಾಗುವುದು. ಪುಸ್ತಕದ ಹೆಸರು “ಕರ್ನಾಟಕದಲ್ಲಿ ಮುಂದುವರೆದ ಅಧರ್ಮ ರಾಜಕಾರಣ 2006 ಮತ್ತು 18” ಆಗಿದ್ದು, ಮನಸ್ಸಿನಲ್ಲಿಯೇ ಉಳಿದುಕೊಂಡಿರುವ ಕೆಲವೊಂದು ವಿಚಾರಗಳನ್ನು ಈ ಕೃತಿಯಲ್ಲಿ ಬಹಿರಂಗ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್ ?
Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ
Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಸಮಸ್ಯೆ
Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು
Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.