ನಗರಕ್ಕೆ ಲಕ್ಯಾ ಡ್ಯಾಂನ ನೀರುಣಿಸುವುದು ಇನ್ನು ಗಗನಕುಸುಮ !
ಪಂಪಿಂಗ್‌ಗೆ ಸುಪ್ರೀಂ ಕೋರ್ಟ್ ತಡೆ, ಪೈಪ್‌ಲೈನ್‌ನಲ್ಲಿ ಹೂಳು
Team Udayavani, Mar 30, 2019, 2:56 PM IST
ಲಕ್ಯಾ ಡ್ಯಾಂ
ಮಹಾನಗರ : ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರಿದಾಗ ಆಪತ್ಪಾಂಧವನಂತೆ ನೆರವಿಗೆ ಬರುತ್ತಿದ್ದುದು ಕುದುರೆಮುಖ ಪ್ರದೇಶದಲ್ಲಿರುವ ಲಕ್ಯಾ ಅಣೆಕಟ್ಟು. ಆದರೆ ಲಕ್ಯಾ ಡ್ಯಾಂನಿಂದ ಗ್ರ್ಯಾವಿಟಿ (ಗುರುತ್ವಾಕರ್ಷಕ)ಯಲ್ಲಿ ನೀರು ಸರಬರಾಜು ಹೊರತುಪಡಿಸಿ, ಪಂಪಿಂಗ್ ಮಾಡಲು ಸುಪ್ರೀಂ ಕೋರ್ಟ್ ಅವಕಾಶ ನೀಡದ ಹಿನ್ನೆಲೆ, ಡ್ಯಾಂನಿಂದ ನಗರಕ್ಕೆ ಸಂಪರ್ಕಿಸುವ ಪೈಪ್‌ಲೈನ್‌ನಲ್ಲಿ ಹೂಳು ತುಂಬಿಕೊಂಡ ಕಾರಣ ಲಕ್ಯಾ ನೀರು ಮಂಗಳೂರಿಗೆ ತರುವ ಬಹುದೊಡ್ಡ ಕನಸು ಗಗನಕುಸುಮವಾಗಿದೆ.
ಲಕ್ಯಾ ಡ್ಯಾಂನ ನೀರನ್ನು ಮಂಗಳೂರಿಗೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಬಹಳ ವರ್ಷಗಳಿಂದ ಪ್ರಯತ್ನ ನಡೆಯುತ್ತಿತ್ತು. ಆದರೆ ಕಾನೂನಿನ ತೊಡಕು, ನೀರು ಸರಬರಾಜಿನಲ್ಲಿ ಆಗುತ್ತಿರುವ ಸಮಸ್ಯೆಯ ಕಾರಣದಿಂದ ಈಗ ಪಾಲಿಕೆ ಈ ನೀರನ್ನು ಬಳಸಿಕೊಳ್ಳಲು ನಿರಾಕರಿಸಿದೆ.
ಕೆಲವು ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಸುರತ್ಕಲ್‌ಗೆ ಲಭ್ಯವಾಗಿದ್ದ ಲಕ್ಯಾ ಡ್ಯಾಂನ ನೀರನ್ನು ಮುಂದಿನ ದಿನದಲ್ಲಿ ಕುಡಿಯುವ ನೀರಿಗಾಗಿ ಬಳಕೆ ಮಾಡುವ ಸಂಬಂಧ ಪಾಲಿಕೆಯು ಸುಪ್ರೀಂ ಕೋರ್ಟ್‌ಗೆ ಅನುಮತಿ ಕೋರಿ ಮನವಿ ಸಲ್ಲಿಸಿತ್ತು. ಆದರೆ ಲಕ್ಯಾ ಡ್ಯಾಂನಿಂದ ನೀರನ್ನು ಗ್ರ್ಯಾವಿಟಿ (ಗುರುತ್ವಾಕರ್ಷಕ) ಮೂಲಕವಷ್ಟೇ ತರಬೇಕು. ಪಂಪಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಿಳಿಸಿದೆ.
ಗ್ರ್ಯಾವಿಟಿ ಆಧಾರದಲ್ಲಿಯೇ ನೀರು ಹರಿಯುವುದರಿಂದ ಈ ನೀರು ಸುರತ್ಕಲ್ ವ್ಯಾಪ್ತಿಗೆ ತಲುಪುವಾಗ ಅದರ ಪ್ರಮಾಣ ಕಡಿಮೆಯಾಗಿರುತ್ತದೆ. ಯಾಕೆಂದರೆ ಈ ಪೈಪ್ ಗಳು ಕೂಡ ಹಳೆಯದ್ದಾಗಿರುವುದರಿಂದ ನೀರು ಸರಬರಾಜಾಗುವ ಧಾರಣಾ ಸಾಮರ್ಥ್ಯ ಕುಂಠಿತವಾಗಿದೆ. ಜತೆಗೆ ಪೈಪ್‌ನ ಒಳಗೆ ಪಾಚಿ, ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.
ಕುದುರೆಮುಖ ಕಬ್ಬಿಣ ಅದಿರು ಗಣಿಗಾರಿಕೆ ಪ್ರದೇಶದಲ್ಲಿರುವ ಲಕ್ಯಾ ಅಣೆಕಟ್ಟಿನಿಂದ ನಗರಕ್ಕೆ ಕುಡಿಯುವ ನೀರು ಪಡೆಯುವ ಚಿಂತನೆ ಅಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ಕೆಲವು ಸಮಯದ ಬಳಿಕ ಚರ್ಚೆಗೆ ಬಂದಿತ್ತು.
2011ರ ಕನಸು!
2011ರ ಎಪ್ರಿಲ್‌ನಲ್ಲಿ ನಗರಕ್ಕೆ ಕುಡಿಯುವ ನೀರು ಪೂರೈಕೆಯ ಏಕೈಕ ಮೂಲವಾಗಿದ್ದ ತುಂಬೆಯಲ್ಲಿ ನೀರು ಸಂಗ್ರಹ ಕಡಿಮೆಯಾಗಿ ಕೊರತೆ ಭೀತಿ ಆವರಿಸಿದಾಗ ಲಕ್ಯಾದಿಂದ ನೀರು ಪಡೆಯುವ ಬಗ್ಗೆ ಆಗಿನ ಶಾಸಕ ಎನ್.ಯೋಗೀಶ್ ಭಟ್ ಪ್ರಸ್ತಾವನೆ ಮಂಡಿಸಿದ್ದರು. ಈ ಕುರಿತು ಮನಪಾದಲ್ಲಿ ನಿರ್ಣಯ ಕೈಗೊಂಡು ಇದರ ಪ್ರತಿಯೊಂದಿಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಅನುಮತಿಗಾಗಿ ಪಾಲಿಕೆ ಅರ್ಜಿ ಸಲ್ಲಿಸಿತ್ತು. ಕುದುರೆಮುಖ ಗಣಿಗಾರಿಕೆ ವಿಚಾರ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ಗಣಿಗಾರಿಕೆ ಪ್ರದೇಶ ದಲ್ಲಿರುವ ಲಕ್ಯಾ ಡ್ಯಾಂನಿಂದ ನೀರು ಪಡೆಯುವುದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ. ಈ ಹಿನ್ನೆಲೆಯಲ್ಲಿ ಪಾಲಿಕೆ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಕೋರಿತ್ತು. ಪಣಂಬೂರಿನಿಂದ ಈಗಾಗಲೇ ಇರುವ ನೀರು ಸರಬರಾಜು ಕೊಳವೆಗೆ ಲಿಂಕ್ ಮಾಡಿ ನೀರು ಸಂಗ್ರಹ ಸ್ಥಾವರಗಳಿಗೆ ತರುವ ಪ್ರಸ್ತಾವನೆ ಇದಾಗಿತ್ತು.
1979-1999ರಲ್ಲಿ ಲಕ್ಯಾ ಅಣೆಕಟ್ಟು
ಕುದುರೆಮುಖ ಗಣಿಗಾರಿಕೆ ಪ್ರದೇಶ ವ್ಯಾಪ್ತಿಯಲ್ಲಿರುವ ಲಕ್ಯಾದಲ್ಲಿ ಲಕ್ಯಾ ಅಣೆಕಟ್ಟು 1979 ಮತ್ತು 1999 ಒಟ್ಟು 2 ಹಂತಗಳಲ್ಲಿ ನಿರ್ಮಾಣಗೊಂಡಿತ್ತು. ಲಕ್ಯಾ ಡ್ಯಾಂನಿಂದ ಪಣಂಬೂರಿನ ಕುದುರೆಮುಖ ಕಂಪೆನಿ ಪ್ರದೇಶಕ್ಕೆ 2.3 ಎಂಜಿಡಿ ನೀರು ಸರಬರಾಜು ಆಗುತ್ತಿದೆ. ಅಲ್ಲಿಂದ ದಿನವೊಂದಕ್ಕೆ 6 ಎಂಜಿಡಿ ನೀರು ತೆಗೆಯಬಹುದಾಗಿದೆ. ಗುರುತ್ವಾಕರ್ಷಣಾ ಶಕ್ತಿ ಮೂಲಕ ನೀರನ್ನು ಅಲ್ಲಿಂದ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ.
ಲಕ್ಯಾಡ್ಯಾಂ ನೀರು ಸಿಗದು
ಸದ್ಯ ನಗರದಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ ಮೇ ತಿಂಗಳಿನಲ್ಲಿ ಒಂದು ದಿನ ಬಿಟ್ಟು ಒಂದು ದಿನದ ಆಧಾರದಲ್ಲಿ ಸುಮಾರು 20 ದಿನ ನೀರು ಸರಬರಾಜು ಮಾಡುವ ಪರಿಸ್ಥಿತಿ ಎದುರಾಗಬಹುದು. ಅದಕ್ಕೂ ಮೊದಲು ಮಳೆ ಬಂದರೆ ಸಮಸ್ಯೆ ಎದುರಾಗಲಾರದು. ಜತೆಗೆ ಪರ್ಯಾಯವಾಗಿದ್ದ ಲಕ್ಯಾ ಡ್ಯಾಂನಿಂದ ನೀರು ತರಿಸಲು ಈ ಬಾರಿ ಸಾಧ್ಯವಾಗದು. ಪೈಪ್‌ಲೈನ್ ನಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ತರುವುದು ಕಷ್ಟ.
– ಶಶಿಕಾಂತ್ ಸೆಂಥಿಲ್,
ಜಿಲ್ಲಾಧಿಕಾರಿ ದ.ಕ.
ವಿಶೇಷ ವರದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.