ಲೋಕ ಗೆದ್ದ ರಾಜ್ಯದ ಮಹಿಳಾಮಣಿಗಳು
Team Udayavani, Mar 31, 2019, 6:00 AM IST
ಬೆಂಗಳೂರು: ಎಪ್ಪತ್ತರ ದಶಕದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ರಾಜ ಕೀಯ ಮರುಹುಟ್ಟು ಕೊಟ್ಟ ಕರ್ನಾ ಟಕದಿಂದ ಲೋಕಸಭೆ ಪ್ರವೇಶಿಸಿದ ಮಹಿಳೆಯರ ಸಂಖ್ಯೆ ತೀರಾ “ನಗಣ್ಯ’. ಲೋಕ ಸಭೆಯ ಇತಿಹಾಸದಲ್ಲೇ ರಾಜ್ಯ ದಿಂದ ಆಯ್ಕೆಯಾದ ಮಹಿಳಾ ಸಂಸದರ ಸಂಖ್ಯೆ ಕೇವಲ 12. ದೇಶದಲ್ಲಿ 1952ರಿಂದ ಈವರೆಗೆ ನಡೆದ 16 ಲೋಕ ಸಭಾ ಚುನಾವಣೆಗಳಲ್ಲಿ ರಾಜ್ಯದಿಂದ ಆಯ್ಕೆ ಯಾದ ಮಹಿಳಾ ಸಂಸದರು 12 ಮಂದಿ ಮಾತ್ರ.. ಇವರಲ್ಲಿ ಕಾಂಗ್ರೆಸ್‌ನಿಂದ 9, ಬಿಜೆಪಿಯಿಂದ ಇಬ್ಬರು ಹಾಗೂ ಜನತಾ ಪರಿವಾರದಿಂದ ಒಬ್ಬ ಮಹಿಳೆ ಆಯ್ಕೆಯಾಗಿ ದ್ದಾರೆ.
ರಾಜ್ಯದಿಂದ ಆಯ್ಕೆಯಾದ ಮಹಿಳಾ ಸಂಸದರ ಸಂಖ್ಯೆ ಯಾವತ್ತೂ ಎರಡರ ಗಡಿ ದಾಟಿಲ್ಲ. ಸ್ವಾತಂತ್ರ್ಯದ ಬಳಿಕ ದೇಶದಲ್ಲಿ ಇಲ್ಲಿವರೆಗೆ ಒಟ್ಟು 16 ಲೋಕಸಭಾ ಚುನಾ ವಣೆಗಳು ನಡೆದಿವೆ. ಮೊದಲ ಚುನಾವಣೆ
1952ರಲ್ಲಿ ನಡೆದಿದ್ದರೆ, 16ನೇ ಲೋಕಸಭಾ ಚುನಾವಣೆ 2014ರಲ್ಲಿ ನಡೆದಿತ್ತು. ಈ ಎಲ್ಲ ಚುನಾವಣೆಗಳ ಪೈಕಿ 1952 ಮತ್ತು 57ರಲ್ಲಿ ನಡೆದ ಮೊದಲ ಎರಡು ಚುನಾವಣೆಗಳಲ್ಲಿ, 1989ರಲ್ಲಿ ನಡೆದ 7ನೇ ಮತ್ತು
1998ರಲ್ಲಿ ನಡೆದ 12ನೇ ಲೋಕ ಸಭಾ ಚುನಾವಣೆಗಳಲ್ಲಿ ರಾಜ್ಯ
ದಿಂದ ಯಾವೊಬ್ಬ ಮಹಿಳೆಯೂ ಆಯ್ಕೆಯಾಗಿರಲಿಲ್ಲ. ರಾಜ್ಯ ದಿಂದ ಮೊದಲ ಬಾರಿಗೆ ಮಹಿಳೆಯೊಬ್ಬರು ಲೋಕಸಭೆ ಪ್ರವೇಶಿಸಿದ್ದು 1962ರಲ್ಲಿ. ಆಗ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ಡಾ.ಸರೋಜಿನಿ ಮಹಿಷಿ ಆಯ್ಕೆ ಯಾಗಿದ್ದರು.
ಉಳಿದಂತೆ, 1967ರಲ್ಲಿ ನಡೆದ 4ನೇ ಲೋಕಸಭಾ ಚುನಾವಣೆಯಲ್ಲಿ ಸರೋಜನಿ ಮಹಿಷಿ ಮರು ಆಯ್ಕೆಯಾಗಿದ್ದರೆ, ಮಧುಗಿರಿ ಲೋಕಸಭಾ ಕ್ಷೇತ್ರದಿಂದ ಸುಧಾ ವಿ.ರೆಡ್ಡಿ ಚುನಾಯಿತರಾಗಿದ್ದರು. 1971ರಲ್ಲಿ
ನಡೆದ 5ನೇ ಲೋಕಸಭೆಗೆ ಸರೋಜಿನಿ ಮಹಿಷಿ, 1977ರಲ್ಲಿ
ನಡೆದ 6ನೇ ಲೋಕಸಭೆಗೆ ಸರೋಜಿನಿ ಮಹಿಷಿ ಹಾಗೂ ಚಿಕ್ಕಮಗಳೂ ರಿನಿಂದ ಇಂದಿರಾ ಗಾಂಧಿ ಆಯ್ಕೆಯಾಗಿದ್ದರು.
ಏಳನೇ ಲೋಕಸಭೆಗೆಯಾರೂ ಆಯ್ಕೆಯಾಗಿರಲಿಲ್ಲ. 1984 ರಲ್ಲಿ ನಡೆದ 8ನೇ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಬಸವರಾಜೇಶ್ವರಿ
ಹಾಗೂ ಚಿಕ್ಕಮಗಳೂರಿನಿಂದ ಡಿ.ಕೆ.ತಾರಾದೇವಿ ಗೆದ್ದಿದ್ದರು.
ಅದೇ ರೀತಿ, 1989ರಲ್ಲಿ ನಡೆದ 9ನೇ ಲೋಕಸಭಾ ಚುನಾವಣೆಯಲ್ಲಿ
ಬಸವರಾಜೇಶ್ವರಿ ಮರು ಆಯ್ಕೆಯಾಗಿದ್ದರೆ, 1991ರಲ್ಲಿ ನಡೆದ ಚುನಾವಣೆಯಲ್ಲಿ ಬಸವರಾಜೇಶ್ವರಿ ಹಾಗೂ ಡಿ.ಕೆ.ತಾರಾದೇವಿ,
1996ರಲ್ಲಿ ನಡೆದ 11ನೇ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಮೀಸಲು ಕ್ಷೇತ್ರದಿಂದ ರತ್ನಮಾಲಾ ಡಿ.ಸವಣೂರು ಜನತಾದಳದಿಂದ ಆಯ್ಕೆಯಾಗಿದ್ದರು. 1998ರಲ್ಲಿ ಯಾರೂ ಆಯ್ಕೆಯಾಗಿರಲಿಲ್ಲ. 13ನೇ ಲೋಕಸಭೆಗೆ ಉತ್ತರ ಕನ್ನಡದಿಂದ ಮಾರ್ಗರೇಟ್ ಆಳ್ವ, 14ನೇ
ಲೋಕಸಭೆಗೆ ಕನಕಪುರ ಕ್ಷೇತ್ರದಿಂದ ತೇಜಸ್ವಿನಿ ಗೌಡ, ಉಡುಪಿಯಿಂದ ಮನೋರಮಾ ಮಧ್ವರಾಜ್, 15ನೇ ಲೋಕಸಭೆಗೆ ಬಳ್ಳಾರಿ ಮೀಸಲು ಕ್ಷೇತ್ರದಿಂದ ಬಿಜೆಪಿಯ ಜೆ. ಶಾಂತಾ ಹಾಗೂ ಮಂಡ್ಯದಿಂದ ಕಾಂಗ್ರೆಸ್‌ನ ರಮ್ಯಾ ಆಯ್ಕೆಯಾಗಿದ್ದರು. 16ನೇ ಲೋಕಸಭೆಗೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ ಗೆದ್ದಿದ್ದರು.
ರಾಜ್ಯದಿಂದ ಆಯ್ಕೆಯಾದ ಸಂಸದೆಯರು ನಾಲ್ವರು ಸಚಿವರು
ರಾಜ್ಯದಿಂದ ಆಯ್ಕೆಯಾದ ಒಟ್ಟು 12 ಮಂದಿ ಮಹಿಳಾ ಸಂಸದರ ಪೈಕಿ ಬಸವರಾಜೇಶ್ವರಿ, ಡಿ.ಕೆ.ತಾರಾದೇವಿ, ರತ್ನಮಾಲಾ ಡಿ.ಸವಣೂರು ಮತ್ತು ಮಾರ್ಗರೇಟ್ ಆಳ್ವ ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಯುಪಿಎ
ಸರ್ಕಾರದ ಅವಧಿಯಲ್ಲಿ ಮಾರ್ಗರೇಟ್ ಆಳ್ವ ಅವರು ರಾಜ್ಯಪಾಲರಾಗಿಯೂ ನೇಮಕಗೊಂಡಿದ್ದರು. ಬಾಗಲಕೋಟೆ-ವೀಣಾ ಕಾಶಪ್ಪನವರ್ (ಕಾಂಗ್ರೆಸ್
-ಜೆಡಿಎಸ್ ಮೈತ್ರಿ), ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ (ಬಿಜೆಪಿ), ವಿಜಯಪುರ- ಡಾ.ಸುನೀತಾ ಚೌಹಾಣ್ (ಕಾಂಗ್ರೆಸ್-ಜೆಡಿಎಸ್ ಮೈತ್ರಿ) ಮಂಡ್ಯ-
ಸುಮಲತಾ ಅಂಬರೀಶ್ (ಪಕ್ಷೇತರ).
ಸೋನಿಯಾ-ಸುಷ್ಮಾ ಸ್ಪರ್ಧೆ
ರಾಜ್ಯದ ಇತಿಹಾಸದಲ್ಲೇ ಅತಿ ಜಿದ್ದಾಜಿದ್ದಿನ ಚುನಾವಣೆ ಎಂದೇ ಹೇಳಲಾಗುವ 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಹಾಗೂ ಸುಷ್ಮಾ ಸ್ವರಾಜ್ ಎದುರಾಳಿಗಳಾಗಿದ್ದರು. ತುರುಸಿನ ಸ್ಪರ್ಧೆಯಲ್ಲಿ ಕೊನೆಗೂ ಸೋನಿಯಾ ಗಾಂಧಿ ಗೆದ್ದಿದ್ದರು. ಆದರೆ, ರಾಯ್‌ಬರೇಲಿಯಿಂದಲೂ ಸ್ಪರ್ಧಿಸಿ, ಅಲ್ಲಿಯೂ ಗೆದ್ದಿದ್ದ ಸೋನಿಯಾಗಾಂಧಿ, ಬಳ್ಳಾರಿ ಕ್ಷೇತ್ರಕ್ಕೆ ರಾಜೀನಾಮೆ ಕೊಟ್ಟಿದ್ದರು.
ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದವರು 12 ಮಂದಿ
ಸರೋಜಿನಿ ಮಹಿಷಿ, ಸುಧಾ ವಿ.ರೆಡ್ಡಿ, ಇಂದಿರಾ
ಗಾಂಧಿ, ಬಸವರಾಜೇಶ್ವರಿ, ಡಿ.ಕೆ.ತಾರಾದೇವಿ, ರತ್ನಮಾಲಾ
ಡಿ.ಸವಣೂರು, ಮಾರ್ಗರೇಟ್ ಆಳ್ವ, ತೇಜಸ್ವಿನಿ ಗೌಡ, ಮನೋರಮಾ
ಮಧ್ವರಾಜ್, ಜೆ.ಶಾಂತಾ, ರಮ್ಯಾ, ಶೋಭಾ ಕರಂದ್ಲಾಜೆ.
ಈ ಬಾರಿ ಕಣದಲ್ಲಿರುವ ಪ್ರಮುಖರು
ಬಾಗಲಕೋಟೆ-ವೀಣಾ ಕಾಶಪ್ಪನವರ್ (ಕಾಂಗ್ರೆಸ್ -ಜೆಡಿಎಸ್ ಮೈತ್ರಿ), ಉಡುಪಿ-ಚಿಕ್ಕಮಗಳೂರು-ಶೋಭಾ ಕರಂದ್ಲಾಜೆ (ಬಿಜೆಪಿ), ವಿಜಯಪುರ- ಡಾ.ಸುನೀತಾ ಚೌಹಾಣ್ (ಕಾಂಗ್ರೆಸ್-ಜೆಡಿಎಸ್ ಮೈತ್ರಿ) ಮಂಡ್ಯ-ಸುಮಲತಾ ಅಂಬರೀಶ್ (ಪಕ್ಷೇತರ).
ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.