ಐ ಲೈಕ್ ದೀಸ್ 12 ಕ್ಯಾಂಡಿಡೇಟ್ಸ್’
ಉಪೇಂದ್ರ ಪಕ್ಷದಿಂದ ಹನ್ನೆರಡು ಕ್ಷೇತ್ರಗಳಲ್ಲಿ ಸ್ಪರ್ಧೆ | ಜನರ ಬೇಡಿಕೆಗಳೇ ಪಕ್ಷದ ಪ್ರಣಾಳಿಕೆ
Team Udayavani, Mar 31, 2019, 6:05 AM IST
ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಟ ಉಪೇಂದ್ರ ಸ್ಥಾಪಿಸಿರುವ “ಉತ್ತಮ ಪ್ರಜಾಕೀಯ ಪಕ್ಷ’ವು 12 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ, ಉಪೇಂದ್ರ ಅವರು ಎಲ್ಲೂ ಸ್ಪರ್ಧೆ ಮಾಡುತ್ತಿಲ್ಲ. ಶನಿವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಉಪೇಂದ್ರ, “ಸೂಕ್ತ ಸಮಯದಲ್ಲಿ ನಾನು ರಾಜಕೀಯ ಪ್ರವೇಶಿಸುತ್ತೇನೆ. ಸಿನಿಮಾ ಮತ್ತು ರಾಜಕೀಯದಲ್ಲಿ ಏಕಕಾಲಕ್ಕೆ ಕಾಣಿಸಿಕೊಳ್ಳುವುದಿಲ್ಲ’ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ “ಉತ್ತಮ ಪ್ರಜಾಕೀಯ ಪಕ್ಷ’ದ ಅಭ್ಯರ್ಥಿಗಳು ಯಾವುದೇ ಪ್ರಣಾಳಿಕೆಗಳ ಆಮಿಷ ಇಲ್ಲದೆ ಸ್ಪರ್ಧಿಸಲಿದ್ದಾರೆ. ಏ.1ರಿಂದ ರಾಜ್ಯಾದ್ಯಂತ ಪ್ರಚಾರ ನಡೆಸಲಾಗುವುದು. ಸಭೆ, ಸಮಾರಂಭಗಳಿಗಾಗಿ ಉಳಿದ ಪಕ್ಷಗಳಂತೆ ದುಂದುವೆಚ್ಚ ಮಾಡುವುದಿಲ್ಲ. ಪ್ರಣಾಳಿಕೆಯಲ್ಲಿನ ಆಮಿಷಗಳನ್ನು ತೋರಿಸಿಯೂ ಮತಯಾಚನೆ ಮಾಡುವುದಿಲ್ಲ. ನಮ್ಮ ಪಕ್ಷಕ್ಕೆ ಜನರ ಸಮಸ್ಯೆಗಳೇ ಪ್ರಣಾಳಿಕೆ. ಅಭ್ಯರ್ಥಿಗಳು ಗೆಲುವು ಸಾಧಿಸಿದರೆ ಜನರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತೇವೆ’ ಎಂದರು. “ಹಣ ಮತ್ತು ಜಾತಿ ಬಲವಿಲ್ಲದೆ ಸಮಾಜಕ್ಕಾಗಿ ದುಡಿಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಜನಸಾಮಾನ್ಯರಿಗಾಗಿ ನಾವು ಕೆಲಸ ಮಾಡಲಿದ್ದೇವೆ. ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ, ಯಾವುದೇ ಪಕ್ಷದಿಂದ ಬೆಂಬಲ ತೆಗೆದುಕೊಳ್ಳುವುದೂ ಇಲ್ಲ. ಅರ್ಹ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ಪುಂಡರನ್ನು ದೂರವಿಡಲಾಗಿದೆ’ ಎಂದು ಹೇಳಿದರು. “ಜನರ ನಿಜವಾದ ಸಮಸ್ಯೆಗಳನ್ನು ಅತ್ಯಂತ ಪಾರದರ್ಶಕವಾಗಿ ಬಗೆಹರಿಸಲಾಗುವುದು. ಸಮಸ್ಯೆಗಳನ್ನು ಪರಿಹರಿಸಲು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಪಕ್ಷದ ಮುಖ್ಯ ಉದ್ದೇಶವಾಗಿದೆ’ ಎಂದರು.
ಅಣಕು ಪ್ರದರ್ಶನ: ಚುನಾವಣೆಯಲ್ಲಿ ಅಭ್ಯರ್ಥಿಗಳುಗೆದ್ದರೆ ಜನರ ಸಮಸ್ಯೆಗಳನ್ನು ಈಡೇರಿಸಿ “ರಿಪೋರ್ಟ್ ಕಾರ್ಡ್’ ನೀಡುವುದರ ಬಗ್ಗೆ ಅಣಕು ಪ್ರದರ್ಶನ ತೋರಿಸಿದರು.
ಅಭ್ಯರ್ಥಿಗಳ ಪಟ್ಟಿ
ಹಾಸನ ಚಂದ್ರೇಗೌಡ.ಎಚ್.ಎಂ
ದಕ್ಷಿಣ ಕನ್ನಡ ವಿಜಯ್ ಶ್ರೀನಿವಾಸ್
ಚಿತ್ರದುರ್ಗ ದೇವೇಂದ್ರಪ್ಪ
ತುಮಕೂರು ಛಾಯಾ ರಾಜಾಶಂಕರ್
ಮಂಡ್ಯ ದಿವಾಕರ್.ಸಿ.ಪಿ.ಗೌಡ
ಮೈಸೂರು ಆಶಾರಾಣಿ.ವಿ
ಚಾಮರಾಜನಗರ ನಾಗರಾಜು ಎಂ
ಬೆಂ.ಗ್ರಾಮಾಂತರ ಮಂಜುನಾಥ ಎಂ
ಬೆಂಗಳೂರು ಉತ್ತರ ಸಂತೋಷ್ ಎಂ
ಬೆಂಗಳೂರು ಕೇಂದ್ರ ಶ್ರೀದೇವಿ ಮೆಳ್ಳೇಗಟ್ಟಿ
ಬೆಂಗಳೂರು ದಕ್ಷಿಣ ಅಹೋರಾತ್ರ
ಚಿಕ್ಕಬಳ್ಳಾಪುರ ಮುನಿರಾಜು.ಜೆ
ಕೋಲಾರ ರಾಮಾಂಜಿನಪ್ಪ. ಆರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.