ನಾಳೆಯಿಂದ ಆಗುಂಬೆ ಘಾಟಿ ರಸ್ತೆ ಬಂದ್
Team Udayavani, Mar 31, 2019, 6:30 AM IST
ಹೆಬ್ರಿ: ಕಳೆದ ಮಳೆಗಾಲದಲ್ಲಿ ಹಾನಿಗೀಡಾಗಿರುವ ಉಡುಪಿ-ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿ ರಸ್ತೆಯನ್ನು ಶಾಶ್ವತವಾಗಿ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಎ. 1ರಿಂದ ಒಂದು ತಿಂಗಳು ಈ ರಸ್ತೆಯಲ್ಲಿ ಬಂದ್ ಮಾಡಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ. ದಯಾನಂದ ತಿಳಿಸಿದ್ದಾರೆ.
ದುರಸ್ತಿಗೊಳಿಸುವ ಪ್ರದೇಶದಲ್ಲಿ ಹಲವಾರು ಬೃಹತ್ ಮರಗಳಿದ್ದು ಅವುಗಳನ್ನು ತೆರೆವುಗೊಳಿಸಲು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಮಾ. 19ರಂದು ಕಾಮಗಾರಿ ಆರಂಭಿಸಲು ಸೂಚಿಸಲಾಗಿತ್ತು. ಅರಣ್ಯ ಇಲಾಖೆಯ ಆಕ್ಷೇಪದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿತ್ತು. ಮಳೆಗಾಲ ಆರಂಭವಾದರೆ ಮತ್ತೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಯಾವುದೇ ಮರಗಳನ್ನು ತೆಗೆಯದೇ ದುರಸ್ತಿ ಕಾಮಗಾರಿ ಮಾಡಬೇಕು ಎಂಬ ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿಗಳು ಷರತ್ತು ವಿಧಿಸಿದ್ದಾರೆ.
ಬದಲಿ ಸಂಚಾರ ವ್ಯವಸ್ಥೆ
ಪ್ರಯಾಣಿಕರು ಕುಂದಾಪುರ – ಬಾಳೇಬರೆ (ಹುಲಿಕಲ್) ಘಾಟಿ ಅಥವಾ ಶೃಂಗೇರಿ – ತೀರ್ಥಹಳ್ಳಿ ಕುದುರೆಮುಖ ಘಾಟಿ ಮೂಲಕ ಸಂಚರಿಸಬಹುದಾಗಿದೆ.
ಚುನಾವಣೆಗೆ ದಿನ ಅವಕಾಶ ನೀಡಿ
ಉಡುಪಿ, ದ.ಕ., ಜಿಲ್ಲೆಗಳಲ್ಲಿ ಎ. 18ರಂದು ಹಾಗೂ ಶಿವಮೊಗ್ಗದಲ್ಲಿ ಎ. 23ರಂದು ನಡೆಯುವುದರಿಂದ ಮಲೆನಾಡು ಹಾಗೂ ಕರಾವಳಿ ನಡುವೆ ಸಂಚರಿಸುವ ಮತದಾರರಿಗೆ ತೊಂದರೆಯಾಗದಂತೆ ಈ ಎರಡು ದಿನ ಘಾಟಿ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸಾರ್ವಜನಿಕರು ವಿನಂತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.