ಮಂಗಳೂರು ಉತ್ತರ; ನೀರಿನ ಪೂರೈಕೆಗೆ ಸಂಕಷ್ಟ

ಎಕ್ಸ್ ಪ್ರಸ್‌ ವಿದ್ಯುತ್‌ ಲೈನ್‌ ಕೊರತೆ

Team Udayavani, Mar 31, 2019, 11:25 AM IST

1-April-5

ನೀರು ಶುದ್ಧೀಕರಿಸಿ ಸರಬರಾಜು ಮಾಡುವ ಕೂಳೂರಿನ ಪಂಪಿಗ್‌ ಸ್ಟೇಷನ್‌. 

ಸುರತ್ಕಲ್ : ಬಿಸಿಲಿನ ದಗೆ ಹೆಚ್ಚಾಗುತ್ತಿದ್ದಂತೆ ಇತ್ತ ನೀರು ಪೂರೈಕೆಯಲ್ಲಿ ವ್ಯತ್ಯಾಸ ಕಾಣತೊಡಗಿದೆ. ಹಳೆಯ ಕಾಲದ ಪೂರೈಕೆ ವ್ಯವಸ್ಥೆಯನ್ನೇ ನೆಚ್ಚಿಕೊಂಡಿರುವ ಮಹಾನಗರ ಪಾಲಿಕೆ ದೂರದ ತುಂಬೆಯಿಂದ ಮಂಗಳೂರು, ಸುರತ್ಕಲ್‌ ವರೆಗೆ ಪೂರೈಕೆ ಸಂದರ್ಭ ಯಥೇಚ್ಚ ನೀರಿನ ಪೋಲು, ಸರಿಯಾದ ವಿತರಣೆ ವ್ಯವಸ್ಥೆ ಇಲ್ಲದೆ ಎರಡು ದಿನಕ್ಕೊಮ್ಮೆ ನೀರು ಪೂರೈಸುವ ಸಂದಿಗ್ಧ ಸ್ಥಿತಿ ಬಂದೊದಗಿದೆ.
ತುಂಬೆಯಿಂದ ನೇರವಾಗಿ ನೀರು ಸರಬರಾಜು ನಿರಾತಂಕವಾಗಿ ಆಗಬೇಕಾದರೆ ವಿದ್ಯುತ್‌ ಕಡಿತವಾಗ ಬಾರದು. ಹೀಗಾದಾಗ ಮಾತ್ರ ಎಲ್ಲೆಡೆ ಇರುವ ನೀರಿನ ಪಂಪಿಂಗ್‌ ಸ್ಟೇಷನ್‌ಗಳಿಗೆ ನೀರು ನಿರಾತಂಕವಾಗಿ ಪೂರೈಕೆ ಸಾಧ್ಯವಿದೆ. ಇದೀಗ ಸಾಮಾನ್ಯ ವ್ಯವಸ್ಥೆಯಲ್ಲಿಯೇ ನೀರಿನ ಸರಬರಾಜು ಆಗುತ್ತಿದೆ. ನಗರದಲ್ಲಿ ಅರ್ಧ ಗಂಟೆ ಪವರ್‌ ಕಟ್‌, ದುರಸ್ತಿ ಮತ್ತಿತರ ಕಾರಣಗಳಿಗೆ ವಿದ್ಯುತ್‌ ಕಡಿತವಾದಾಗ ತುಂಬೆಯಿಂದ ಪೈಪ್‌ ಮೂಲಕ ಹರಿಯುವ ನೀರು ಪಾಲಿಕೆಯ ಕೊನೆಯ ವಾರ್ಡ್‌ ವರೆಗೆ ಮುಟ್ಟುವ ಖಚಿತತೆಯಲ್ಲ. ಇದೀಗ ಪಾಲಿಕೆ ವ್ಯಾಪ್ತಿಯಲ್ಲಿ ಎಕ್ಸ್‌ಪ್ರೆಸ್‌ ಲೈನ್‌ ಇಲ್ಲ. ಇದರಿಂದ ವಿದ್ಯುತ್‌ ಕಡಿತವಾದಾಗ ಕೆಲವು ವಾರ್ಡ್‌ಗಳಿಗೆ ಎರಡು ದಿನ, ನಾಲ್ಕು ದಿನಗಳವರೆಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ತುಂಬೆಯಿಂದ ಪಂಪ್‌ ಮಾಡಿದ ನೀರು ಪಾಲಿಕೆಯಾದ್ಯಂತ ವಿವಿಧ ಪಂಪಿಂಗ್‌ ಸ್ಟೇಷನ್‌ಗಳಿಗೆ ಮುಟ್ಟಲು ನಿರಂತರ ವಿದ್ಯುತ್‌ ಇದ್ದರೆ ಮಾತ್ರ ಸಾಧ್ಯ.
ತುಂಬೆಯಲ್ಲಿ ಬೇಕಾದಷ್ಟು ನೀರು!
ತುಂಬೆಯಲ್ಲಿ ಇದೀಗ ಪಾಲಿಕೆಗೆ ಮುಂದಿನ ಸುಮಾರು ಮೂರು ತಿಂಗಳಿಗೆ ಸಮಸ್ಯೆಯಾಗದಷ್ಟು ನೀರು ಸಂಗ್ರಹವಿದೆ. ಆದರೆ ಪ್ರಧಾನವಾಗಿ ಪೂರೈಕೆ ಮತ್ತು ವಿದ್ಯುತ್‌ ಎಕ್ಸ್‌ಪ್ರೆಸ್‌ ಲೈನ್‌ ಇಲ್ಲದೇ ಇರುವುರಿಂದ ನಿರೀಕ್ಷಿತ ಮಟ್ಟದಲ್ಲಿ ಮುಂದಿನ ಬಿರು ಬೇಸಗೆ ಕಾಲದಲ್ಲಿ ನೀರು ಪೂರೈಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ಅಧಿಕಾರಿಗಳನ್ನು ಚಿಂತೆಗೀಡಾಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಈ ವರ್ಷ ನೀರಿನ ಸಮಸ್ಯೆ ಎದುರಾಗದು ಎಂಬ ಲೆಕ್ಕಾಚಾರ ಪಾಲಿಕೆಯದ್ದು, ಮುಂಜಾಗ್ರತೆ ಕ್ರಮವಾಗಿ ಬಂಟ್ವಾಳ ಶಂಭೂರು ಗ್ರಾಮದಲ್ಲಿರುವ ಎಎಂಆರ್‌ ವಿದ್ಯುತ್‌ ಯೋಜನೆಯ ಅಣೆಕಟ್ಟಿನಲ್ಲಿ ನೀರನ್ನು ಸ್ಟಾಕ್‌ ಇಡಲಾಗಿದೆ. ತುಂಬೆ ವೆಂಟೆಡ್‌ ಡ್ಯಾಮ್‌ನಲ್ಲಿ ನೀರಿನ ಮಟ್ಟ ಇಳಿಕೆಯಾದಾಗ ಈ ಮೇಲಿನ ಡ್ಯಾಮ್‌ಗಳಿಂದ ನೀರು ಬಿಡುವ ವ್ಯವಸ್ಥೆಯೂ ಇದೆ. ಆದರೆ ಎಕ್ಸ್‌ ಪ್ರಸ್‌ ವಿದ್ಯುತ್‌ ಲೈನ್‌ನ ಕೊರತೆಯಿಂದ ಪ್ರತಿದಿನ ನೀರು ಪೂರೈಕೆ ಮಾಡುವುದು ಸಮಸ್ಯೆಯಾಗಿದೆ. ಈ ಬಗ್ಗೆ ಪಾಲಿಕೆ ಮೆಸ್ಕಾಂ ಜತೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳಬೇಕಿದೆ.
ಚರ್ಚಿಸಿ ಸೂಕ್ತ ಕ್ರಮ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಬೇಸಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಎಕ್ಸ್‌ಪ್ರೆಸ್‌ ವಿದ್ಯುತ್‌ ಲೈನ್‌ ನೀಡುವ ಕುರಿತು ಕ್ರಮ ವಹಿಸಲಾಗುವುದು. ಈ ಹಿಂದೆ ಇದ್ದ ಲೈನ್‌ ಯಾಕಾಗಿ ಬಳಸುತ್ತಿಲ್ಲ ಎಂಬುದರ ಕುರಿತು ನನಗೆ ಮಹಿತಿ ಇಲ್ಲ. ಈ ಬಗ್ಗೆ ಸಂಬಂಧ ಪಟ್ಟ ಮೆಸ್ಕಾಂ ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸ್ನೇಹಲ್‌ ಆರ್‌.,
ಮೆಸ್ಕಾಂ ನಿರ್ದೇಶಕರು
‡ ವಿಶೇಷ ವರದಿ

ಟಾಪ್ ನ್ಯೂಸ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.