ಈಗಷ್ಟೇ ಸ್ವಾಭಿಮಾನದ ಬದುಕು
Team Udayavani, Mar 31, 2019, 12:23 PM IST
ಬೆಂಗಳೂರು: “ಆರು ದಶಕಗಳಲ್ಲಿ ನಮ್ಮ ಜೀವನ ಭಿಕ್ಷುಕರಿಗಿಂತ ಕಡೆಯಾಗಿತ್ತು. ಆದರೆ, ಕಳೆದ ಐದು ವರ್ಷಗಳಲ್ಲಿ ಸ್ವಾಭಿಮಾನ ಮತ್ತು ಘನತೆಯಿಂದಾದರೂ ಬದುಕುವಂತಾಗಿದೆ. ಇದು ಭಾರತದಲ್ಲಾದ ದೊಡ್ಡ ಪರಿವರ್ತನೆ’ ಎಂದು ಉದ್ಯಮಿ ಟಿ.ವಿ. ಮೋಹನದಾಸ್ ಪೈ ವಿಶ್ಲೇಷಿಸಿದರು.
ನಗರದ ಹೋಟೆಲ್‌ನಲ್ಲಿ ಬಿಜೆಪಿ ಆರ್ಥಿಕ ಘಟಕ ಶನಿವಾರ ಹಮ್ಮಿಕೊಂಡಿದ್ದ “ಪರಿವರ್ತನೆ ಭಾರತ’ (ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ) ಕುರಿತ ಸಂವಾದದಲ್ಲಿ ಮಾತನಾಡಿದ ಅವರು, “ಆರು ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್, ಕನಿಷ್ಠ ಮೂಲಸೌಕರ್ಯಗಳನ್ನೂ ನೀಡದೆ ನಮ್ಮನ್ನು ಭಿಕ್ಷುಕರನ್ನಾಗಿ ಮಾಡಿತ್ತು.
ಆದರೆ, ಕಳೆದ ಐದು ವರ್ಷಗಳಲ್ಲಿ ಭಾರತೀಯರ ಜೀವನಮಟ್ಟ ಸುಧಾರಿಸಿದೆ. ನಲ್ಲಿಗಳಲ್ಲಿ ನೀರು ಬರುತ್ತಿದೆ. ಸ್ವಿಚ್‌ನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಶೇ.85ರಷ್ಟು ಜನರಿಗೆ ಸೂರು ಸಿಕ್ಕಿದೆ. ಶೇ. 85ರಷ್ಟು ಜನ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. 80 ಕೋಟಿ ಜನ ದೂರವಾಣಿ ಸಂಪರ್ಕ ಹೊಂದಿದ್ದಾರೆ. 45 ಕೋಟಿ ಮಂದಿ ಬಳಿ ಸ್ಮಾರ್ಟ್‌ಫೋನ್‌ಗಳಿವೆ.
ಈ ಮೂಲಕ ದೂರದ ಹಳ್ಳಿಗಳಲ್ಲಿರುವ ಜನ ವಿಶ್ವದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅಲ್ಲಿನ ಆಗುಹೋಗುಗಳೊಂದಿಗೆ ವ್ಯವಹರಿಸುತ್ತಿದ್ದಾರೆ. ಈ ಮೂಲಕ ಒಂದು ಘನತೆಯ ಬದುಕು ಸಾಗಿಸಲು ಸಾಧ್ಯವಾಗಿದೆ. ನನ್ನ ಪ್ರಕಾರ ಇದು ದೇಶದಲ್ಲಾದ ದೊಡ್ಡ ಪರಿವರ್ತನೆ’ ಎಂದು ಪ್ರತಿಪಾದಿಸಿದರು.
“ರಫೇಲ್ ಒಂದು ಜೋಕ್’: ಈ ಹಿಂದೆ ದೆಹಲಿಯು ಇಡೀ ವಿಶ್ವದ ಭ್ರಷ್ಟಾಚಾರದ ಕೇಂದ್ರವಾಗಿತ್ತು. ಭಾರತೀಯರು ವಿದೇಶಗಳಲ್ಲಿ ತಮ್ಮ ಪಾಸ್‌ಪೋರ್ಟ್ ತೋರಿಸಿದಾಗ ವ್ಯಂಗ್ಯವಾಗಿ ನಗುವ ಕಾಲ ಇತ್ತು. ಆದರೆ, ಇಂದು ಈ ಚಿತ್ರಣ ಬದಲಾಗಿದೆ. ಹೆಮ್ಮೆಯಿಂದ ಓಡಾಡುವಂತಾಗಿದೆ.
ದಕ್ಷ ಆಡಳಿತದಿಂದ ಪಾರದರ್ಶಕತೆ ಬಂದಿದೆ ಎಂದ ಅವರು, “ರಫೇಲ್ ಡೀಲ್ ಪ್ರಕರಣದಲ್ಲಿನ ಅವ್ಯವಹಾರದ ಬಗ್ಗೆ ಪ್ರತಿಪಕ್ಷದ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ರಫೇಲ್ ಡೀಲ್ ಎನ್ನುವುದೇ ಒಂದು “ಜೋಕ್’. 56 ಸಾವಿರ ಕೋಟಿ ಮೊತ್ತದ ಈ ವ್ಯವಹಾರದಲ್ಲಿ ಸುಮಾರು 30 ಸಾವಿರ ಕೋಟಿ ರೂ. ಆಫ್ಸೆಟ್ ಗುತ್ತಿಗೆ. ಇದು ಇನ್ನೂ ಆಗಿಯೇ ಇಲ್ಲ’ ಎಂದರು.
“ದೆಹಲಿಯಲ್ಲಿರುವ ದೇಶದ ಮೊದಲ ಕುಟುಂಬ ಕಳೆದ ಆರು ದಶಕಗಳ ಕಾಲ ಐಷಾರಾಮಿ ಜೀವನ ನಡೆಸಿದೆ. ಅವರ ವೈಭವಯುತ ಜೀವನವನ್ನು ತೆರಿಗೆ ಪಾವತಿಸುವ ಮೂಲಕ ನಾನೂ ಪೋಷಿಸಿದ್ದೇನೆ’ ಎಂದು ಟೀಕಿಸಿದರು.
ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಆಯುಷ್ಮಾನ್ ಭಾರತವು ದೇಶದ ಅತಿದೊಡ್ಡ ಉದ್ಯಮವಾದ ಆರೋಗ್ಯ ಕ್ಷೇತ್ರದಲ್ಲಿ “ಗೇಮ್ ಚೇಂಜರ್’ ಆಗಿದೆ ಎಂದು ಬಣ್ಣಿಸಿದರು. ವಿಶ್ವನಾಥ್ ಭಟ್ ಉಪಸ್ಥಿತರಿದ್ದರು.
ದೇಶದ ಆರ್ಥಿಕತೆ ಮೇಲೆ ಪರಿಣಾಮ: ಮೂಲ ಸಂವಿಧಾನದಲ್ಲಿ ಇಲ್ಲದ ಸಮಾಜವಾದ ಮತ್ತು ಜಾತ್ಯತೀತವಾದ ಎಂಬ ಎರಡು ಪದಗಳ ಸೇರ್ಪಡೆಯು ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರಿತು ಎಂದು ಟಿ.ವಿ. ಮೋಹನದಾಸ್ ಪೈ ಅಭಿಪ್ರಾಯಪಟ್ಟರು. ಸಮಾಜವಾದ ಮತ್ತು ಜಾತ್ಯತೀತವಾದ ಎಂಬ ಪದಗಳು ಮೂಲ ಸಂವಿಧಾನದಲ್ಲಿ ಇರಲಿಲ್ಲ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಇದನ್ನು ಸೇರಿಸಿದರು. ಪರಿಣಾಮ ದೇಶದ ಆರ್ಥಿಕತೆ ಮುಕ್ತವಾಗಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.