ಬಡವರ ಬದುಕಿಗೆ ಬೆಳಕಾದ ವಿದ್ಯಾರ್ಥಿಗಳು

ಪೆರಡಾಲ ಕಾಲನಿಯಲ್ಲಿ ಪ್ರಕಾಶಿಸುತ್ತಿದೆ ವಿದ್ಯಾರ್ಥಿಗಳ ಪರಿಶ್ರಮದ ಬೆಳಕು.

Team Udayavani, Mar 31, 2019, 1:44 PM IST

peradala

ಬದಿಯಡ್ಕ : ಸಾಮಾನ್ಯವಾಗಿ ತಮ್ಮ ಅಗತ್ಯಗಳು ಕಳೆದಾಗ ಮರಳಿ ನೋಡದ ಜನರ ನಡುವೆ ತೀರಾ ವ್ಯತ್ಯಸ್ಥವಾಗಿ ಒಂದು ಪ್ರದೇಶದ ಅಭಿವೃದ್ಧಿಗೆ, ಹಿಂದುಳಿದ ಜನಾಂಗದ ಅಗತ್ಯಗಳಿಗೆ ಸ್ಪಂಧಿಸಿ ಸುಭದ್ರ ಜೀವನಕ್ಕೆ ಸಹಾಯಕರಾಗಿ ಸೌಲಭ್ಯ, ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಮಹತ್ತರವಾದ ಕಾರ್ಯ. ಭವಿಷ್ಯದ ನೈಜ ಸಮಾಜ ಸೇವಕರನ್ನು ಸƒಷ್ಟಿಸುವ ಕೆಲಸವನ್ನು ಕೇಂದ್ರೀಯ ವಿಶ್ವ ವಿದ್ಯಾಲಯ ಮಾಡುತ್ತಿದೆ ಎಂದು ಕೇರಳ ವಿಶ್ವ ವಿದ್ಯಾಲಯದ ರಿಜಿಸ್ಟ್ರರ್‌ ರಾಧಾಕೃಷ್ಣ ನಾಯರ್‌ ಸಂತಸ ವ್ಯಕ್ತಪಡಿಸಿದರು.

ನಿಸ್ವಾರ್ಥ ಮನೋಭಾವದಿಂದ ನೊಂದವರ ಬಾಳಿಗೆ ಬೆಳಕಾಗುವ ಉತ್ತಮ ಚಿಂತನೆಯನ್ನು, ಸಮಾಜದೆಡೆಗಿನ ತುಡಿತವನ್ನು ವಿದ್ಯಾರ್ಥಿಗಳಲ್ಲಿ ಬಲಪಡಿಸಿ ಮುಂದಿನ ಸುದೃಢ ಸಮಾಜದ ಕಾಳಜಿಯುಕ್ತ, ಜವಾಬ್ದಾರಿಯುಕ್ತ ಪ್ರಜೆಗಳನ್ನಾಗಿ ಮಾಡುವ ಕೆಲಸ ಇಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.

ವಿದ್ಯುತ್‌ ಬಿಲ್‌ ಪಾವತಿಸಲಿಲ್ಲ ಎಂಬ ಕಾರಣಕ್ಕೆ ಕಡಿತಗೊಳಿಸಿದ ವಿದ್ಯುತ್‌ ಸಂಪರ್ಕವನ್ನು ಮತ್ತೆ ಕಲ್ಪಿಸುವ ಮೂಲಕ ಪೆರಡಾಲ ಕೊರಗ ಕಾಲನಿಯ ಮಕ್ಕಳ ಪಾಲಿಗೆ ವರದಾನವಾಗಿರುವ ಏಕೋಪಾಧ್ಯಾಯ ಶಾಲೆಯಲ್ಲಿ ಮತ್ತೆ ಬೆಳಕ ಉರಿಸಿ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಸಮಾಜ ಸೇವಾ ಘಟಕ ಮಾದರಿ ಕಾರ್ಯವನ್ನು ಮಾಡಿ ಕಾಲನಿ ನಿವಾಸಿಗಳ ಆನಂದಕ್ಕೆ ಕಾರಣವಾಗಿದೆ.

2000ನೇ ಇಸವಿಯಲ್ಲಿ ಪೆರಡಾಲ ಕೊರಗ ಕಾಲನಿಯ ಕಾಸರಗೋಡು ತಾಲೂಕು ಕೊರಗ ವೆಲ್ಫೆàರ್‌ ಮಲ್ಟಿ ಪರ³ಸ್‌ ಸೊಸೆ„ಟಿಯ ಅಧೀನದಲ್ಲಿದ್ದ ಕಮ್ಯೂನಿಟಿ ಸಭಾಂಗಣದಲ್ಲಿ ತರಗತಿ ಪ್ರಾರಂಭಗೊಂಡಾಗ ವಿದ್ಯುತ್‌ ಸಂಪರ್ಕ ಇದ್ದು ಸೊಸೆ„ಟಿಗೆ ಬಿಲ್‌ ಪಾವತಿಸಲು ಪ್ರತ್ಯೇಕ ಸಂಪನ್ಮೂಲದ ವ್ಯವಸ್ಥೆಯೂ ಇತ್ತು. ಆದರೆ 2003ರ ಬಳಿಕ ವಿದ್ಯುತ್‌ ಬಿಲ್‌ ಪಾವತಿಸದೇ ಇರುವ ಕಾರಣ 2007ರಲ್ಲಿ ಈ ಕಟ್ಟಡದ ವಿದ್ಯುತ್‌ ವಿಚ್ಛೇಧಿಸಿ ಕಾಲನಿಯ ಬಡಮಕ್ಕಳು ಕತ್ತಲೆಯಲ್ಲಿಯೇ ಕುಳಿತು ಓದುವಂತಾಯಿತು.

ಈ ನಡುವೆ ವಿದ್ಯುತ್‌ ಸಂಪರ್ಕ ಮರುಸ್ಥಾಪನೆಗೆ ಮಾಡಿದ ಎಲ್ಲಾ ಶ್ರಮವೂ ವ್ಯರ್ಥವಾಯಿತು. ಮಾತ್ರವಲ್ಲದೆ ಸಹಾಯಕ್ಕಾಗಿ ಪಂಚಾಯತ್ತನ್ನು ಸಂಪರ್ಕಿಸಿದರೂ ಅಂದಿನ ಪಂ.ಕಾರ್ಯದಶಿ ಕೈಚೆಲ್ಲಿದ್ದು ಈ ಮಕ್ಕಳ ಕತ್ತಲೆಯ ಬದುಕಿಗೆ ಕಾರಣವಾಯಿತು.

ಕೇಂದ್ರೀಯ ವಿಶ್ವ ವಿದ್ಯಾಲಯ ಸಮಾಜ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಈ ಕಾಲನಿಯಲ್ಲಿ ಶಿಬಿರ ನಡೆಸಿದ ಸಂದರ್ಭದಲ್ಲಿ ಕಾಲನಿಯ ಜನರ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಅಭ್ಯಸಿಸಿ ತಕ್ಕುದಾದ ಪರಿಹಾರ ಮಾರ್ಗ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದು ಈ ಶಾಲೆಯ ವಿದ್ಯುತ್‌ ಸಂಪರ್ಕವನ್ನು ಮರುಸ್ಥಾಪಿಸುವ ಉದ್ದೇಶದಿಂದ ಸತತ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ವಿದ್ಯುತ್‌ ಇಲಾಖೆಗೆ ಪಾವತಿಸಲು ಬಾಕಿ ಮೊತ್ತವನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ ಪಾವತಿಸಿದರೂ ವಿದ್ಯುತ್‌ ವಿಚ್ಛೇದಿಸಿರುವ ಕಾರಣ ಮರುಸ್ಥಾಪನೆಗಾಗಿ ಇನ್ನೂ ಹೆಚ್ಚಿನ ತೆರಬೇಕಾಗಿ ಬಂದಿದೆ. ಆದರೆ ಈ ಸಂದರ್ಭದಲ್ಲಿ ಮಹತ್ಕಾರ್ಯದಲ್ಲಿ ಕೈಜೋಡಿಸಲು ಮುಂದಾದ ಬದಿಯಡ್ಕ ಪಂಚಾಯತು ಆ ಮೊತ್ತವನ್ನು ತೆತ್ತು ಸಹಕರಿಸಿತು.


ಸಮಾಜ ಅಧ್ಯಯನ ಘಟಕದ ಮುಖ್ಯಸ್ಥೆ ಡಾ.ಲಕ್ಷ್ಮಿ ಹಾಗೂ ಅವರ ವಿದ್ಯಾರ್ಥಿಗಳ ಕಾಳಜಿ ಹಾಗೂ ಸಮಾಜದ ಏಳಿಗೆಗಾಗಿ ದುಡಿಯುವ ಮನೋಭಾವ ಈ ಕಾಲನಿಯ ಮಕ್ಕಳು ಸಂಭ್ರಮದಿಂದ ಕುಣಿದಾಡುವಂತೆ ಮಾಡಿದೆ. ಕತ್ತಲಿನಿಂದ ಬೆಳಕಿನೆಡೆಗೆ ಈ ಪ್ರದೇಶದ ಜನರನ್ನು ಕರೆತರುವ ಪ್ರಯತ್ನ ಸತತವಾಗಿ ಸಾಗುತ್ತಿರುವುದು ಕಂಡುಬರುತ್ತದೆ.

2017-18ರಲ್ಲಿ ಸಮಾಜ ಅಧ್ಯಯನ ಘಟಕದ ವಿದ್ಯಾರ್ಥಿಗಳಿಗಾಗಿ 10 ದಿನಗಳ ಶಿಬಿರ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕೊರಗ ಕಾಲನಿಯ ಜನರು ನೀಡಿದ ಸಹಕಾರ ಹಾಗೂ ಕಾಲನಿಯಲ್ಲಿ ಇರುವ ಅವ್ಯವಸ್ಥತೆಗಳನ್ನು ಸರಿ ಪಡಿಸಬೇಕೆಂಬ ದೃಢ ನಿರ್ಧಾರಕ್ಕೆ ಬರಲಾಯಿತು. ಮುಂದಿನ ವರ್ಷವೂ ಇದೇ ಕಾಲನಿಯಲ್ಲಿ ಶಿಬಿರ ಏರ್ಪಡಿಸಿ ಕಾಲನಿಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಕಾಲನಿಯ ಅಭಿವೃದ್ಧಿಗೆ ಬೇಕಾದ ಒಂದೊಂದೇ ಕಾರ್ಯಯೋಜನೆಯನ್ನು ನಿರ್ಮಿಸಲಾಯಿತು.

ಸತತ ಪ್ರಯತ್ನದ ಮೂಲಕ ಬೆಳಕ ಉರಿಸಿದ ಜೆಸೀಲ್‌.ಯಂ ಮತ್ತು ಮಾನಸ ವೇಣುಕಳೆದ ಎರಡು ವರ್ಷಗಳಿಂದ ವಿದ್ಯುತ್‌ ಸಂಪರ್ಕ ಮರುಕಲ್ಪಿಸುವ ಸಂಪೂರ್ಣ ಜವಾಬ್ದಾರಿ ವಹಿಸಿದ್ದ ವಿದ್ಯಾರ್ಥಿಗಳಾದ ಜೆಸೀಲ್‌.ಯಂ ಮತ್ತು ಮಾನಸ ವೇಣು ಆಗಾಗ ಕಾಲನಿ, ವಿದ್ಯುತ್‌ ಕಚೇರಿಗೆ ಭೇಟಿ ನೀಡಿ ಸಮಸ್ಯೆಯ ಪರಿಹಾರಕ್ಕೆ ಸತತ ಪ್ರಯತ್ನ ಮಾಡಿ ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎದುರಾದ ಅನೇಕ ಅಡೆತಡೆಗಳಿಗೆ ಹೆದರದೆ ಪಣ ತೊಟ್ಟು ಮಾಡಿದ ಈ ಮಾದರಿ ಕಾರ್ಯವನ್ನು ಕಂಡು ಕಾಲನಿ ನಿವಾಸಿಗಳು, ಪಂಚಾಯತು ಅಧೀಕೃತರು, ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ವರ್ಗ ಇವರನ್ನು ಅಭಿನಂಧಿಸಿದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥ ಡಾ.ಮೋಹನ್‌.ಎ.ಕೆ, ಸಹಾಯಕ ಪ್ರಾಧ್ಯಾಪಕರಾದ ದಿಲೀಪ್‌ ದಿವಾಕರ್‌, ವಿಮಲ ಕೊರಗ, ಶಾಲಾ ಶಿಕ್ಷಕ ಬಾಲಕೃಷ್ಣ ಅಚ್ಚಾಯಿ ಮೀಡಿಯಾ ಕ್ಲಾಸಿಕಲ್‌ ಕಾಸರಗೋಡು ಪದಾಧಿಕಾರಿಗಳು, ಕಾಲನಿಯ ಹಿರಿಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

crimebb

Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

5

Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

death

Gangolli: ಲಾರಿ ಪ್ರಯಾಣದ ವೇಳೆ ಕ್ಲೀನರ್‌ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.