ಹ್ಯಾಪಿ ಟ್ಯಾಕ್ಸ್ ಪ್ಲಾನಿಂಗ್
ತೆರಿಗೆಯ ಹೊಸ 12 ಹಾದಿ
Team Udayavani, Apr 1, 2019, 6:00 AM IST
ಇಂದು ಏಪ್ರಿಲ್ ಒಂದು.ಹೊಸ ಆರ್ಥಿಕ ವರುಷದ ಮೊದಲನೆಯ ದಿನ. ಮಾರ್ಚ್ 31 ಕ್ಕೆ ಹಿಂದಿನ ವರ್ಷ ಮುಗಿದು ಇಂದಿನಿಂದ ಹೊಸ ವಿತ್ತ ವರ್ಷ 2019-20 ರ ಆರಂಭವಾಗುತ್ತದೆ. ಹಾಗಾಗಿ, ಹೊಸ ವರ್ಷದಲ್ಲಿ ಫೆಬ್ರವರಿ 2019 ರ ಹೊಸ ಬಜೆಟ್ ಪ್ರಕಾರ ಯಾವ ರೀತಿಯಲ್ಲಿ ಟ್ಯಾಕ್ಸ್ ಪ್ಲಾನಿಂಗ್ ಮಾಡಬೇಕು ಎನ್ನುವುದರ ಬಗ್ಗೆ ಚಿಂತನೆ ನಡೆಸಲು ಇದು ಸಕಾಲ.
ಈ ಸಾಲಿನ ಬಜೆಟ್‌ನ ಮುಖ್ಯ ಭೂಮಿಕೆಯಲ್ಲಿ ಇರುವುದು ಸೆಕ್ಷನ್ 87ಎ ರಿಯಾಯಿತಿ. ಅದರ ಪ್ರಕಾರ ಅದು ರೂ.5 ಲಕ್ಷದ ಒಳಗಿನ ಕರಾರ್ಹ ಆದಾಯ ಇರುವವರು ಯಾವುದೇ ಕರ ಕಟ್ಟಬೇಕಾಗಿಲ್ಲ. ಅವರಿಗೆ ಶೇ.100ರಷ್ಟು ಕರ ಮಾಫ್ ಸೌಲಭ್ಯ ಇರುತ್ತದೆ. ಈ ಸೆಕ್ಷನ್ ರೂ. 5 ಲಕ್ಷದ ಒಳಗಿನ ಕರಾರ್ಹ ಆದಾಯ ಇರುವವರಿಗೆ ಮಾತ್ರ ಲಭ್ಯವಾದ ಕಾರಣ ಸ್ವಾಭಾವಿಕವಾಗಿಯೇ ಎಲ್ಲರ ಗಮನವೂ ತಮ್ಮ ಕರಾರ್ಹ ಆದಾಯವನ್ನು 5 ಲಕ್ಷರೂ. ಒಳಕ್ಕೆ ಇಳಿಸುವಲ್ಲಿ ಇರುತ್ತದೆ. ಹೇಗಾದರೂ ಮಾಡಿ ಕರಾರ್ಹ ಆದಾಯವನ್ನು ರೂ 5 ಲಕ್ಷಕ್ಕಿಂತ ಕಡಿಮೆ ಮಾಡಲು ಈ ಕೆಳಗಿನ ಹೂಡಿಕೆ/ವೆಚ್ಚಗಳನ್ನು ಬಳಸಿಕೊಳ್ಳಬಹುದು ಮತ್ತು ಮುಂದಿನ 2019-20 ರ ವಿತ್ತ ವರ್ಷಕ್ಕೆ ಇವನ್ನೇ ಆಧಾರವಾಗಿ ಇಟ್ಟುಕೊಳ್ಳಬಹುದು:
1. ಸ್ಟಾಂಡರ್ಡ್ ಡಿಡಕ್ಷನ್: ಸಂಬಳ ಪಡೆಯುವ ಉದ್ಯೋಗಿಗಳು ಹಾಗೂ ಪೆನ್ಷನ್ ಪಡೆಯುವ ನಿವೃತ್ತರು ತಮ್ಮ ಸಂಬಳ ಅಥವಾ ಪೆನÒನ್ ಮೊತ್ತದಿಂದ ರೂ.50,000 ವನ್ನು ನೇರವಾಗಿ ಸ್ಟಾಂಡರ್ಡ್ ಡಿಡಕ್ಷನ್ ಹೆಸರಿನಲ್ಲಿ ಕಳೆಯಬಹುದಾಗಿದೆ.
2. ಗೃಹ ಸಾಲದ ಮೇಲಿನ ಬಡ್ಡಿ (ಸೆಕ್ಷನ್ 24): ನೀವು ಗೃಹ ಸಾಲದ ಬಡ್ಡಿ ಪಾವತಿಸುವವರಾಗಿದ್ದಲ್ಲಿ ವಾರ್ಷಿಕ ರೂ. 2 ಲಕ್ಷದವರೆಗೆ ಸ್ವಂತ ವಾಸದ 2 ಮನೆಗಳ ಮೇಲೆ ಹಾಗೂ ಬಾಡಿಗೆ ನೀಡಿರುವ ಮನೆಯ ಮೇಲೆ ಪ್ರತ್ಯೇಕವಾಗಿ ಇನ್ನೂ 2 ಲಕ್ಷದ ಮಿತಿಯಲ್ಲಿ ಮರುಪಾವತಿಸಿದ ಗೃಹಸಾಲದ ಬಡ್ಡಿಯನ್ನು Income from House property ಅಡಿಯಲ್ಲಿ ಕಳೆಯಬಹುದು.
ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರೆ ಆ ಆದಾಯ ತೋರಿಸಿ ಹೌಸ್ ಟ್ಯಾಕ್ಸ್ ಹಾಗೂ ಮತ್ತು ಬಾಡಿಗೆಯ ಶೇ. 30ರಷ್ಟು ವಿರ್ವಹಣಾ ವೆಚ್ಚಗಳನ್ನೂ ಕಳೆಯಬಹುದು.
3.ಎನ್.ಪಿ.ಎಸ್/ಅಟಲ್ ಪೆನ್ಷನ್ (ಸೆಕ್ಷನ್80ಸಿಸಿಡಿ(1ಬಿ): ಎನ್.ಪಿ.ಎಸ್ ದೇಣಿಗೆಯು 2 ಬೇರೆ ಬೇರೆ ಸೆಕ್ಷನ್‌ಗಳ ಅಡಿಯಲ್ಲಿ ಬರುತ್ತದೆ. ಮೂಲತಃ ಎನ್.ಪಿ.ಎಸ್ ದೇಣಿಗೆ ಸೆಕ್ಷನ್ 80ಸಿ ಸರಣಿಯಲ್ಲಿ ಅಡಿಯಲ್ಲಿ ಪಿಪಿಎಫ್, ಎನ್.ಎಸ್.ಸಿ, ಇ.ಎಲ್.ಎಸ್.ಎಸ್, ವಿಮೆ ಇತ್ಯಾದಿ ಬೇರೆ ಇತರ ಹೂಡಿಕೆಗಳ ಜೊತೆಗೆ 80 ಸಿಸಿಡಿ(1) ಅಡಿಯಲ್ಲಿ ಬರುತ್ತದೆ . ಅದನ್ನು ಆಮೇಲೆ ನೋಡೋಣ. ಆದರೆ, ಇತ್ತೀಚೆಗೆ ಅದನ್ನು ಇನ್ನೊಂದು ಸೆಕ್ಷನ್ 80 ಸಿಸಿಡಿ (1ಬಿ) ಅಡಿಯಲ್ಲಿ ಹೆಚ್ಚುವರಿ ದೇಣಿಗೆಯಾಗಿ ರೂ 50,000 ಮಿತಿಯಲ್ಲಿ ಕೂಡಾ ಸೇರಿಸಲಾಗಿದೆ. ಆ ಹೂಡಿಕೆಗೆ ಪ್ರತ್ಯೇಕವಾದ ಕರವಿನಾಯಿತಿ ಲಭ್ಯ. ಹಾಗಾಗಿ, ಮೊತ್ತ ಮೊದಲು ಎನ್.ಪಿ.ಎಸ್ ಹೂಡಿಕೆಯನ್ನು 80 ಸಿಸಿಡಿ (1ಬಿ) ಅಡಿಯಲ್ಲಿಯೇ ತೆಗೆದುಕೊಳ್ಳೋಣ. ಉಳಿದ ಮೊತ್ತವನ್ನು ಅಗತ್ಯ ಬಂದಲ್ಲಿ 80ಸಿಸಿಡಿ(1) ಅಡಿಯಲ್ಲಿ ತೆಗೆದುಕೊಳ್ಳಬಹುದು. (ಮೂರನೆಯದಾಗಿ, ಎನ್.ಪಿ.ಎಸ್ ಖಾತೆಯಲ್ಲಿ ಕಂಪೆನಿಯು ಮಾಡಿದ ದೇಣಿಗೆಯು 80ಸಿಸಿಡಿ(2) ಸೆಕ್ಷನ್ನಿನಲ್ಲಿ ಬರುತ್ತದೆ. ಅದನ್ನು ಉದ್ಯೋಗಿಗಳು ತಮ್ಮ ಲೆಕ್ಕದಲ್ಲಿ ಮುಟ್ಟುವಂತಿಲ್ಲ. ಅದು ಪ್ರತ್ಯೇಕ)
4.ಮೆಡಿಕಲ್ ಇನ್ಸುರೆನ್ಸ್ (ಸೆಕ್ಷನ್ 80ಡಿ): ಇದು ಆರೋಗ್ಯ ವಿಮೆಯ ಪ್ರೀಮಿಯಂ ಮೇಲೆ ಸಿಗುವ ತೆರಿಗೆ ರಿಯಾಯಿತಿ. ಸ್ವಂತ ಹಾಗೂ ಕುಟುಂಬದವರ ವಿಮೆಯ ಮೇಲೆ ರೂ.25,000 ಹಾಗೂ ಹೆತ್ತವರ ವಿಮೆಯ ಮೇಲೆ ಇನ್ನೊಂದು ರೂ. 25,000 ವರೆಗೆ ಕಟ್ಟಿದ ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿದೆ. ವಿಮಾ ಪ್ರೀಮಿಯಂ ಗಾಗಿ ಈ ಸೆಕ್ಷನ್ ಇದ್ದರೂ ಕೂಡಾ ವಾರ್ಷಿಕ ಸ್ವಾಸ್ಥ್ಯ ತಪಾಸಣೆಗಾಗಿ ರೂ 5,000ದ ಒಳಮಿತಿಯನ್ನು ಇದು ಹೊಂದಿರುತ್ತದೆ. 60 ದಾಟಿದ ಹಿರಿಯ ನಾಗರಿಕರಿಗೆ ಒಟ್ಟು ಮಿತಿ ರೂ.50,000 ಆಗಿದೆ. 60 ವರ್ಷ ದಾಟಿದ ಹಿರಿಯ ನಾಗರಿಕರು ವಿಮಾ ಪ್ರೀಮಿಯಂ ಕಟ್ಟದೆ ಇದ್ದಲ್ಲಿ ಅವರ ಮಿತಿಯನ್ನು ಸಂಪೂರ್ಣವಾಗಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಉಪಯೋಗಿಸಬಹುದು.
5. ಅವಲಂಬಿತರ ಅಂಗವೈಕಲ್ಯ (ಸೆಕ್ಷನ್ 80 ಡಿಡಿ) : ಅವಲಂಬಿತರ ಅಂಗವೈಕಲ್ಯದ ವೈದ್ಯಕೀಯ (ನರ್ಸಿಂಗ್ ಸಹಿತ) ತರಬೇತಿ ಮತ್ತು ಪುನರ್ವಸತಿಗಾಗಿ ಅಥವಾ ಪಾಲನೆಗಾಗಿ ಕರವಿನಾಯಿತಿ ಸೌಲಭ್ಯ ನೀಡಲಾಗುತ್ತದೆ. ಶೇ. 40-80 ಅಂಗವೈಕಲ್ಯ ಇದ್ದರೆ ವಾರ್ಷಿಕ ಮಿತಿ ರೂ. 75,000 ಹಾಗೂ ಶೇ.80 ಮೀರಿದ ತೀವ್ರವಾದ ಅಂಗವೈಕಲ್ಯವಿದ್ದರೆ ಈ ಮಿತಿ ರೂ.1,25,000 ಆಗಿರುತ್ತದೆ.
6. ಗಂಭೀರ ಖಾಯಿಲೆಗಳ ಚಿಕಿತ್ಸೆ (ಸೆಕ್ಷನ್ 80ಡಿಡಿಬಿ): ಸ್ವಂತ ಹಾಗೂ ಅವಲಂಬಿತರ ಕ್ಯಾನ್ಸರ್, ನ್ಯುರೋ,ಥಲಸೇಮಿಯ, ರೀನಲ್, ಹೀಮೋಫಿಲಿಯಾ ಮುಂತಾದ ಕೆಲ ಗಂಭೀರ ಖಾಯಿಲೆಗಳ ಚಿಕಿತ್ಸೆಗಾಗಿ ಈ ಮಿತಿಯನ್ನು ಬಳಸಬಹುದು. ಮಿತಿ ರೂ 40000. ಆದರೆ, 60 ದಾಟಿದ ವರಿಷ್ಠರಿಗೆ ಈ ಮಿತಿ ರೂ 100000.
7. ವಿದ್ಯಾ ಸಾಲದ ಬಡ್ಡಿ (ಸೆಕ್ಷನ್80 ಇ): ಸ್ವಂತ ಹಾಗೂ ಕುಟುಂಬದವರ ಉನ್ನತ ವ್ಯಾಸಂಗಕ್ಕಾಗಿ ಪಡೆದ ವಿದ್ಯಾ ಸಾಲದ ಬಡ್ಡಿ ಯಾವುದೇ ಮಿತಿಯಿಲ್ಲದೆ 8 ವರ್ಷಗಳವರೆಗೆ ತೆರಿಗೆ ವಿನಾಯಿತಿಗೆ ಅರ್ಹತೆ ಪಡೆದಿರುತ್ತದೆ. ವಿದ್ಯಾ ಸಾಲದ ಅಸಲಿನ ಮರುಪಾವತಿಗೆ ಕರವಿನಾಯಿತಿ ಇಲ್ಲ.
8. ಡೊನೇಶನ್ (ಸೆಕ್ಷನ್ 80 ಜಿ): ನಿಗದಿತ ಸಂಸ್ಥೆಗಳಿಗೆ ನೀಡಿದ ದಾನದ ಶೇ. 50 ಅಥವಾ 100ರಷ್ಟು – ಸರಕಾರ ನಿಗದಿಪಡಿಸಿದಂತೆ, ಸಂಬಳದ ಶೇ.10ರಷ್ಟು ಮೀರದಂತೆ; ನಿಮ್ಮ ಆದಾಯದಿಂದ ನೇರವಾಗಿ ಕಳೆಯಬಹುದಾಗಿದೆ.
9. ಬಾಡಿಗೆ ರಿಯಾಯಿತಿ (ಸೆಕ್ಷನ್ 80 ಜಿಜಿ): ಸಂಬಳ ಮೂಲಕ ಎಚ್‌ಆರ್ ಎ ಪಡೆಯದ ಹಾಗೂ ಸ್ವಂತ ಮನೆಯಿಲ್ಲದೆ ವಾಸ್ತವದಲ್ಲಿ ಬಾಡಿಗೆ ಮನೆಯಲ್ಲಿದ್ದು ಬಾಡಿಗೆ ನೀಡುತ್ತಿರುವವರಿಗೆ ಗರಿಷ್ಠ ವಾರ್ಷಿಕ ರೂ 60,000 ವರೆಗೆ ವಿನಾಯಿತಿ ಸಿಗುತ್ತದೆ. ಇದಕ್ಕೆ ಕೆಲವು ನಿಯಮಗಳು ಅನ್ವಯಿಸುತ್ತದೆ.
10. ಸ್ವಂತ ಅಂಗವೈಕಲ್ಯ (ಸೆಕ್ಷನ್ 80 ಯು): ಸ್ವಂತ ಅಂಗವೈಕಲ್ಯದ ಚಿಕಿತ್ಸೆಗಾಗಿ ರೂ. 75,000 ಮತ್ತು ಗಂಭೀರ ಊನಕ್ಕೆ ರೂ.1,25,000 ವಾರ್ಷಿಕ ರಿಯಾಯಿತಿ ಲಭ್ಯವಿದೆ.
ಮೇಲ್ಕಾಣಿಸಿದ ರಿಯಾಯಿತಿಗಳನ್ನು ಒಂದೊಂದಾಗಿ ಪರಿಗಣಿಸಬೇಕು. ಅದಾದ ಮೇಲೆ, ಪ್ರತ್ಯೇಕವಾಗಿ ಈ ಕೆಳಗಿನ ಸೆಕ್ಷನ್ 80ಸಿ ಸರಣಿಯ ಅಡಿಯಲ್ಲಿ ಮಾಡಿದ ಹೂಡಿಕೆಗಳಿಗೆ ಒಟ್ಟಾರೆ ಮೊತ್ತ ರೂ 1.5 ಲಕ್ಷ$ದವರೆಗೆ ಕರ ವಿನಾಯಿತಿಯನ್ನು ನೀಡಲಾಗಿದೆ. ಇವುಗಳಲ್ಲಿ ಹೂಡಿದ ಮೊತ್ತವನ್ನು ಈ ವರ್ಷದ ಆದಾಯದಿಂದ ನೇರವಾಗಿ ಕಳೆಯಬಹುದು.
12. ಎಸ್.ಬಿ/ಎಫ್.ಡಿ/ಆರ್.ಡಿ ಬಡ್ಡಿಗೆ ಕರವಿನಾಯಿತಿ
ಸೆಕ್ಷನ್ 80ಟಿಟಿಎ ಅನುಸಾರ ಬ್ಯಾಂಕ್ ಮತ್ತು ಅಂಚೆಕಚೇರಿಗಳಲ್ಲಿ ಕೇವಲ ಎಸ್ ಬಿಖಾತೆಯಲ್ಲಿ ಬರುವ ಬಡ್ಡಿಗೆ ರೂ 10,000 ದ ವರೆಗೆ ಕರ ವಿನಾಯಿತಿ ಇದೆ.
ಅಲ್ಲದೆ, ಕೇವಲ ಹಿರಿಯನಾಗರಿಕರಿಗೆ ಮಾತ್ರವೇ (ಎಲ್ಲರಿಗೂ ಅಲ್ಲ) ಅನ್ವಯಿಸುವಂತೆ ಒಂದು ಹೊಸ ಸೆಕ್ಷನ್ 80ಟಿಟಿಬಿ ಅನುಸಾರ ರೂ 50,000 ದವರೆಗೆ ಬ್ಯಾಂಕ್ ಬಡ್ಡಿಯ ಮೇಲೆ ಕರ ವಿನಾಯಿತಿ ನೀಡಲಾಗಿದೆ. (ಹಿರಿಯ ನಾಗರಿಕರಿಗೆ 80ಟಿಟಿಎ ಅನ್ವಯವಾಗುವುದಿಲ್ಲ). ಈ ರೂ 50,000 ದಲ್ಲಿ ಬ್ಯಾಂಕು ಪೋಸ್ಟಾಫೀಸುಗಳ ಎಸ್.ಬಿ ಬಡ್ಡಿಯ ಜೊತೆಗೆ ಎಫ್ಡಿಮತ್ತು ಆರ್.ಡಿ ಗಳ ಬಡ್ಡಿಯನ್ನೂ ಇದೀಗ ಸೇರಿಸಬಹುದಾಗಿದೆ. (ಹೌದು, ಪೆನ್ಷನ್ ಆದಾಯ ಇರುವ ಹಿರಿಯ ನಾಗರಿಕರು ಬಡ್ಡಿಯ ಮೇಲೆ ಈ 50,000 ಹಾಗೂ ಪೆನ್ಷನ್ ಮೇಲೆ ಸ್ಟಾಂಡರ್ಡ್ ಡಿಡಕ್ಷನ್‌ನ ಆ 50,000 ಎರಡನ್ನೂ ಪಡೆಯಬಹುದು. ಸಂಶಯವೇ ಬೇಡ)
ಪಿಎಫ್ ದುಡ್ಡು ಯಾವ ವ್ಯಾಪ್ತಿಗೆ ?
ಸೆಕ್ಷನ್ 80 ಸಿ/ಸಿಸಿಸಿ/ಸಿಸಿಡಿ: ಸೆಕ್ಷನ್ 80 ರ ಈ 3 ಉಪಸೆಕ್ಷನ್ ಅಡಿಯಲ್ಲಿ ಈ ಕೆಳಗಿನ ಹೂಡಿಕೆ/ಪಾವತಿಗಳು ಬರುತ್ತವೆ. (ಒಟ್ಟು ಮಿತಿ ರೂ 1.5 ಲಕ್ಷ) – ಎಂಪ್ಲಾಯೀಸ್ ಫ್ರಾವಿಡೆಂಟ್ ಫಂಡ್ (ಇಪಿಎಫ್) ನಿಮ್ಮ ದೇಣಿಗೆಯಲ್ಲದೆ ಸ್ವಂತ ಇಚ್ಛೆಯಿಂದ ವಾಲಂಟರಿಯಾಗಿ ಪಿ.ಎಫ್ಗೆ ನೀಡಿದ್ದರೂ ಇದರ ವ್ಯಾಪ್ತಿಗೆ ಸೇರುತ್ತದೆ. ಆದರೆ, ಕಂಪೆನಿಯ ದೇಣಿಗೆಯನ್ನು ನೀವು ನಿಮ್ಮ ಈ ಕರ ಲೆಕ್ಕಕ್ಕೆ ತೆಗೆದುಕೊಳ್ಳುವಂತಿಲ್ಲ. ಅದು ಪ್ರತ್ಯೇಕ.
– ಸ್ವಂತ, ಸೌಸ್, ಮಕ್ಕಳ ಜೀವ ವಿಮೆ/ಯುಲಿಪ್‌ನ ವಾರ್ಷಿಕ ಪ್ರೀಮಿಯಂ ವಿಮಾ ಮೊತ್ತದ ಶೇ.10ರಷ್ಟು
ಮಿತಿಯೊಳಗೆ, ಪ್ರತಿ ಪಾಲಿಸಿಗೆ. ಸರಿ ಸುಮಾರು ಜೀವ ವಿಮೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಕರ ವಿನಾಯಿತಿಗೆ ಅರ್ಹವಾದ ಆ ಪ್ರೀಮಿಯಂ ಮೊತ್ತವನ್ನು ಮೊದಲು ತೆಗೆದುಕೊಳ್ಳಿ.
– ಗರಿಷ್ಠ ಎರಡು ಮಕ್ಕಳ ಪರವಾಗಿ ಪಾವತಿಸಿದ ನರ್ಸರಿ/ಶಾಲಾ ಟ್ಯೂಶನ್ ಫೀ. (ಬಿಲ್ಡಿಂಗ್ ಫಂಡ್, ಡೊನೇಶನ್ ಇತ್ಯಾದಿ ಆಗಲ್ಲ; ಟ್ಯೂಶನ್ ಫೀ ಮಾತ್ರ)
– ಗೃಹಸಾಲದ ಮರುಪಾವತಿಯಲ್ಲಿ (ಇಎಮ್‌ಐ) ಅಸಲು ಭಾಗ (ಬಡ್ಡಿ ಅಲ್ಲದೆ)
– ಈ ವಿತ್ತ ವರ್ಷದಲ್ಲಿ ಮನೆ ಖರೀದಿಸಿದ್ದರೆ ಆ ಮನೆ ಖರೀದಿಯ ರಿಜಿಸ್ಟ್ರೇಶನ್, ಸ್ಟಾಂಪ್ ಡ್ನೂಟಿ ವೆಚ್ಚಗಳು.
– ಸಾರ್ವಜನಿಕವಾಗಿ ಮಾಡಿದ 15 ವರ್ಷದ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ದೇಣಿಗೆ:
– ಅಂಚೆ ಕಚೇರಿಯ ಎನ್.ಎಸ್.ಸಿ ಮತ್ತದರ ಬಡ್ಡಿಯ ಮರುಹೂಡಿಕೆ: ಈ ಯೋಜನೆಯ ಮೇಲಿನ ಬಡ್ಡಿಯನ್ನೂ ಕೂಡಾ ಮರು ಹೂಡಿಕೆ ಎಂದು ಪರಿಗಣಿಸಿ ಅದರ ಮೇಲೂ ಕರ ವಿನಾಯಿತಿ ಸೌಲಭ್ಯವಿದೆ.
– ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇ.ಎಲ್‌ಎಸ್‌ಎಸ್) ನಾಮಾಂಕಿತ ಮ್ಯೂಚುವಲ್ ಫಂಡ್. ಇಲ್ಲಿ ಯಾವುದೇ ಇಕ್ವಿಟಿ ಫಂಡುಗಳು ಬರುವುದಿಲ್ಲ. ಇವುಗಳು ಇ.ಎಲ್.ಎಸ್.ಎಸ್ ಅಥವಾ ಟ್ಯಾಕ್ಸ್ ಸೇವರ್ ಎಂಬ ನಿರ್ದಿಷ್ಠ ಲೇಬಲ್‌ಗಳೊಂದಿಗೆ ಬಿಡುಗಡೆಯಾಗುತ್ತವೆ.
– ಐದು ವರ್ಷಾವಧಿಯ ಬ್ಯಾಂಕು/ಪೋಸ್ಟಾಫೀಸಿನ ಕರನೋಂದಾಯಿತ ಎಫ್.ಡಿ: ಇಲ್ಲೂ ಕೂಡಾ 80ಸಿ ಸೆಕ್ಷನ್ ಅನ್ವಯ, ಕರ ಉಳಿತಾಯಕ್ಕೆ ಎನ್ನುವ ಲೇಬಲ್ ಅಗತ್ಯ. ಇವುಗಳ ಮೇಲೆ 5 ವರ್ಷಗಳ ಲಾಕ್-ಇನ್ ಇರುತ್ತವೆ.
– ಎಲ್ ಸಿ ಮತ್ತಿತರ ಜೀವ ವಿಮಾ ಕಂಪೆನಿಗಳು ನೀಡುವ ಪೆನ್ಷನ್ ಪ್ಲಾನುಗಳು (ಸೆಕ್ಷನ್ 80ಸಿಸಿಸಿ)
– ನ್ಯಾಶನಲ್ ಪೆನ್ಶನ್ ಸ್ಕೀಂ (ಎನ್.ಪಿ.ಎಸ್)/ಅಟಲ್ ಪೆನ್ಷನ್ (ಸೆಕ್ಷನ್ 80ಸಿಸಿಡಿ): ಮೇಲ್ಕಾಣಿಸಿದಂತೆ ಈ ಯೋಜನೆಯ ದೇಣಿಗೆ 2 ಸೆಕ್ಷನ್‌ಗಳಲ್ಲಿ ಬರುತ್ತವೆ 80ಸಿಸಿಡಿ(1) ಮತ್ತು 80ಸಿಸಿಡಿ(1ಬಿ). ಮೊದಲೇ ಹೇಳಿದಂತೆ, ನಿಮಗೆ ಬೇಕಾದಂತೆ ಬೇಕಾದ ಸೆಕ್ಷ$ನ್ನಿನಲ್ಲಿ ರಿಯಾಯಿತಿ ಪಡಕೊಳ್ಳಬಹುದು.
– ಜಯದೇವ ಪ್ರಸಾದ ಮೊಳೆಯಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.