ಅಕ್ರಮ ಹಣ ಪ್ರಜಾತಂತ್ರಕ್ಕೆ ಕಳಂಕ


ಸಂಪಾದಕೀಯ, Apr 1, 2019, 6:00 AM IST

egal-money,

ಚುನಾವಣೆಯಲ್ಲಿ ಅಕ್ರಮ ಹಣದ ಹರಿವು ಈಗಲೂ ಒಂದು ಬಗೆಹರಿಸಲಾದ ಸವಾಲಾಗಿಯೇ ಇದೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ಚುನಾವಣೆಯೇ ಪ್ರಜಾತಂತ್ರದ ಜೀವಾಳ. ಆದರೆ ಅಕ್ರಮ ಹಣದಿಂದಾಗಿ ಈ ಮೂಲ ಆಶಯಕ್ಕೆ ಭಂಗವುಂಟಾಗುತ್ತದೆ. ಚುನಾವಣಾ ಪ್ರಕ್ರಿಯೆಯಿಂದ ಅಕ್ರಮ ಹಣವನ್ನು ದೂರವಿಡುವ ಸಲುವಾಗಿ ಹಲವಾರು ಶಾಸನಗಳನ್ನು ರಚಿಸಿದ್ದರೂ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಅಕ್ರಮ ಹಣದ ಹಾವಳಿಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಿಲ್ಲ. ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯೂ ಅಕ್ರಮ ಹಣದ ಹರಿವಿನಿಂದ ಹೊರತಾಗಿಲ್ಲ. ಈಗಾಗಲೇ ಅಧಿಕಾರಿಗಳು ಸುಮಾರು 540 ಕೋ. ರೂ. ಅಕ್ರಮ ಹಣ, ಭಾರೀ ಪ್ರಮಾಣದ ಶರಾಬು ಮತ್ತು ಉಚಿತವಾಗಿ ಹಂಚಲು ತಂದಿಟ್ಟಿದ್ದ ಉಡುಗೊರೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನುತ್ತಿದೆ ಒಂದು ವರದಿ.
ಇದು ಚುನಾವಣೆ ದಿನಾಂಕ ಘೋಷಣೆಯಾದ ಬರೀ 15 ದಿನಗಳಲ್ಲಿ ವಶವಾದ ಅಕ್ರಮ ಹಣ.

ಲೋಕಸಭೆ ಚುನಾವಣೆ ಮೂರು ತಿಂಗಳ ಸುದೀರ್ಘ‌ ಪ್ರಕ್ರಿಯೆಯಾಗಿದ್ದು, 15 ದಿನದಲ್ಲಿ 540 ಕೋ. ರೂ. ಸಿಗುವುದಾದರೆ ಚುನಾವಣೆ ಪ್ರಕ್ರಿಯೆ ಮುಗಿಯುವಾಗ ಎಷ್ಟು ಕೋಟಿ ಕಪ್ಪುಹಣ ಚುನಾವಣ ವ್ಯವಸ್ಥೆಯೊಳಗೆ ಹರಿದು ಬರಬಹುದು ಎಂದು ಅಂದಾಜಿಸಲು ಸಾಧ್ಯವಿಲ್ಲ. ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಯಾವ ಪಕ್ಷವನ್ನೂ ಸಾಚಾ ಎನ್ನುವಂತಿಲ್ಲ. ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಮತ್ತು ಸ್ಥಳೀಯ ಪಕ್ಷಗಳು ಚುನಾವಣೆ ಗೆಲ್ಲಲು ದಂಡಿಯಾಗಿ ಅಕ್ರಮ ಹಣ ಬಳಕೆ ಮಾಡುತ್ತಿವೆ. ಮತದಾರರಿಗೆ ಹಣ ಹಂಚುವುದು ಮಾತ್ರವಲ್ಲದೆ, ಎದುರಾಳಿಯ ಮತಗಳನ್ನು ಒಡೆಯುವ ಸಲುವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು, ನಾಮಪತ್ರ ಹಿಂದೆಗೆದುಕೊಳ್ಳುವಂತೆ ಮನವೊಲಿಸಲು, ಕಾರ್ಯಕರ್ತರ ರಾತ್ರಿಯ ಮೋಜುಮಸ್ತಿಗಳಿಗೆ ಹೀಗೆ ನಾನಾ ರೂಪದಲ್ಲಿ ಅಕ್ರಮ ಹಣ ಉಪಯೋಗವಾಗುತ್ತಿದೆ. ಚುನಾವಣ ವೆಚ್ಚದ ಮೇಲೆ ಕಣ್ಣಿಡುವ ಸಲುವಾಗಿ ಆಯೋಗ ನೂರಾರು ವೀಕ್ಷಕರನ್ನು ನೇಮಿಸಿದೆ. ಜೊತೆಗೆ ಮೊಬೈಲ್‌ ಆ್ಯಪ್‌, ಮೊಬೈಲ್‌ ಸರ್ವೇಲೆನ್ಸ್‌ ಟೀಂನಂಥ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆಯನ್ನು ಮಾಡಿಕೊಂಡಿದೆ. ಇದರ ಹೊರತಾಗಿಯೂ ಅಕ್ರಮ ಹಣ ಬಳಕೆಯಾಗುತ್ತಿದೆ.

ಭ್ರಷ್ಟಾಚಾರದ ಮೂಲವಿರುವುದೇ ಚುನಾವಣ ವ್ಯವಸ್ಥೆಯಲ್ಲಿ. ಭಾರೀ ಪ್ರಮಾಣದ ಹಣ ಖರ್ಚು ಮಾಡಿ ಗೆದ್ದು ಬರುವವರು ಹೀಗೆ ಖರ್ಚು ಮಾಡಿದ ಹಣವನ್ನು ವಸೂಲು ಮಾಡಲು ದಾರಿಗಳನ್ನು ಹುಡುಕಿಕೊಳ್ಳುತ್ತಾರೆ. ಇಲ್ಲಿಂದಲೇ ಭ್ರಷ್ಟಾಚಾರ ಶುರುವಾಗುತ್ತದೆ. ಈ ವ್ಯವಸ್ಥೆಗೆ ನಾವು ಎಷ್ಟು ಒಗ್ಗಿ ಹೋಗಿದ್ದೇವೆ ಎಂದರೆ ಚುನಾವಣೆಯಲ್ಲಿ ಹಣ ಖರ್ಚು ಮಾಡದೆ ಗೆಲ್ಲುವುದು ಅಸಾಧ್ಯ ಎನ್ನುವುದನ್ನು ಒಂದು ಸಾಮಾನ್ಯ ವಿಷಯವೇನೋ ಎಂದು ಪರಿಗಣಿಸಿದ್ದೇವೆ. ಗೆಲ್ಲಲು ಅಕ್ರಮ ಹಣವನ್ನು ಉಪಯೋಗಿಸಿದ ಬಳಿಕ ರಾಜಕೀಯದಲ್ಲಿ ಪ್ರಾಮಾಣಿಕತೆಯನ್ನು ನಿರೀಕ್ಷಿಸುವುದು ಅಸಾಧ್ಯ. ಆರ್‌ಟಿಐ ಮೂಲಕ ರಾಜಕೀಯ ಪಕ್ಷಗಳ ಹಣದ ಮೂಲದ ಕುರಿತು ಮಾಹಿತಿ ಕೇಳಿದಾಗ ಸಿಪಿಎಂ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಈ ಮಾಹಿತಿ ಕೊಡುವ ಬಾಧ್ಯತೆ ನಮಗಿಲ್ಲ ಎಂದು ಹೇಳಿದ್ದೇ ಪಕ್ಷಗಳ ನಿಧಿ ಮೂಲಗಳು ಎಷ್ಟು ಸಂಶಯಾಸ್ಪದವಾಗಿವೆ ಎನ್ನುವುದಕ್ಕೊಂದು ಉದಾಹರಣೆ. ನಿಧಿ ಸಂಗ್ರಹವನ್ನು ಪಾರದರ್ಶಕಗೊಳಿಸುವ ಸಲುವಾಗಿ ಪ್ರಾರಂಭಿಸಲಾಗಿರುವ ಚುನಾವಣ ಬಾಂಡ್‌ ಪದ್ಧತಿಯಲ್ಲೂ ಲೋಪಗಳಿವೆ ಎನ್ನುವುದನ್ನು ಕೆಲ ದಿನಗಳ ಹಿಂದೆಯಷ್ಟೆ ಸ್ವತಃ ಚುನಾವಣ ಆಯೋಗ ನ್ಯಾಯಾಲಯಕ್ಕೆ ತಿಳಿಸಿರುವುದರಿಂದ ರಾಜಕೀಯವನ್ನು ಅಕ್ರಮ ಹಣದಿಂದ ಮುಕ್ತಿಗೊಳಿಸುವ ನಿರೀಕ್ಷಿತ ಮಾರ್ಗವೂ ಮುಚ್ಚಿ ಹೋದಂತಾಗಿದೆ.

ರಾಜಕೀಯವನ್ನು ಕಪ್ಪು ಹಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಸರಕಾರವೇ ಎಲ್ಲ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಭರಿಸುವ ಪ್ರಸ್ತಾವವನ್ನು ಕೆಲ ಸಮಯದ ಹಿಂದೆ ಇಟ್ಟಿದ್ದರು. ಆದರೆ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವದಂತೆ ಈ ಪ್ರಸ್ತಾವ ಕೂಡಾ ರಾಜಕೀಯ ಸಹಮತವಿಲ್ಲದೆ ಮೂಲೆಗುಂಪಾಗಿದೆ. ಹಣ ಬಲದ ಮುಖ ನೋಡದೆ ನಿಷ್ಕಳಂಕಿತ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಮೂಲಕ ಪಕ್ಷಗಳು ರಾಜಕೀಯ ಕ್ಷೇತ್ರವನ್ನು ಸ್ವತ್ಛಗೊಳಿಸಬಹುದು. ಆದರೆ ಅದಕ್ಕೆ ಬೇಕಿರುವುದು ಪ್ರಬಲವಾದ ರಾಜಕೀಯ ಇಚ್ಛಾಶಕ್ತಿ. ಈಗ ಇರುವುದು ಇದರದ್ದೇ ಕೊರತೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ಪಡಿತರ ಚೀಟಿ ಮಾನದಂಡ ಆಮೂಲಾಗ್ರ ಪರಿಷ್ಕರಣೆ ಅಗತ್ಯ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

Karnataka: ರಾಜ್ಯದಲ್ಲಿ ನಕ್ಸಲರ ಸಂಪೂರ್ಣ ನಿಗ್ರಹ ನಡೆಯಲಿ

money

Agriculture: ಕೃಷಿಗೆ ಶೂನ್ಯ ಬಡ್ಡಿ ಸಾಲಕ್ಕೆ ಬೇಕಿದೆ ಮಾರ್ಗೋಪಾಯ

1-mani

Manipur conflict ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.