ಅಂಚೆ ಸೇವೆ ಗುರುತಿಸುತ್ತಿಲ್ಲಾ ಸರ್ಕಾರ: ಮಹಾದೇವಯ್ಯ


Team Udayavani, Apr 1, 2019, 12:10 PM IST

gul-3
ಕಲಬುರಗಿ: ಗ್ರಾಮೀಣ ಅಂಚೆ ಸೇವಕರ ಸೇವೆಯನ್ನು ಗುರುತಿಸಿ ಜನತೆ ಪ್ರೀತಿಯಿಂದ “ಅಂಚೆ ಅಣ್ಣ’ ಎಂದು
ಕರೆಯುತ್ತಾರೆ. ಆದರೆ, ನಮ್ಮನ್ನು ಆಳುವ ಸರ್ಕಾರಗಳು ಮಾತ್ರ ಅಂಚೆ ಸೇವಕರ ಶ್ರಮ ಗುರುತಿಸದೆ ಕಡೆಗಣಿಸುತ್ತಿವೆ
ಎಂದು ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎಸ್‌. ಮಹಾದೇವಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದಲ್ಲಿ ರವಿವಾರ ಅಖೀಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘ (ಎಐಜಿಡಿಎಸ್‌ಯು) ಕಲಬುರಗಿ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ದ್ವೈವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ 120 ವರ್ಷಗಳಿಂದ ಅಂಚೆ ಇಲಾಖೆಯಲ್ಲಿ ಅಂಚೆ ಸೇವಕರ ಹುದ್ದೆ ಇದೆ. ಅಂದಿನಿಂದ ಇಂದಿನವರೆಗೂ
ಅಂಚೆ ಸೇವಕರನ್ನು ಕಾಯಂಗೊಳಿಸುವ ಕ್ರಮವನ್ನು ಯಾವುದೇ ಸರ್ಕಾರಗಳು ಕೈಗೊಂಡಿಲ್ಲ ಎಂದು ಹೇಳಿದರು.
ದಿನಕ್ಕೆ ಎಷ್ಟೇ ಗಂಟೆ ದುಡಿದರೂ ಕೇವಲ 5 ಗಂಟೆ ಕೆಲಸಕ್ಕೆ ಮಾತ್ರ ವೇತನ ನೀಡಲಾಗುತ್ತಿದೆ. ಒಬ್ಬ ಸಾಮಾನ್ಯ
ನೌಕರನಿಗೆ ಸಿಗಬೇಕಾದ ಕನಿಷ್ಠ ವೇತನ, ಬಡ್ತಿ, ಪಿಂಚಣಿ, ರಜೆ ಸೇರಿದಂತೆ ಯಾವುದೇ ಸೌಲಭ್ಯಗಳು ಅಂಚೆ ಸೇವಕರಿಗೆ ಸಿಗುತ್ತಿಲ್ಲ ಎಂದರು.
ಬ್ರಿಟಿಷರ ಕಾಲದ ಕಾನೂನನ್ನೇ ಅನುಸರಿಸಿ ಅಂಚೆ ಸೇವಕರನ್ನು ತುಳಿಯಲಾಗುತ್ತಿದೆ. ಇಲಾಖೆಯಲ್ಲಿ
ಕಾಯಂ ನೌಕರರು ಮತ್ತು ಅಂಚೆ ಸೇವಕರ ನಡುವೆ ಇಬ್ಬಗೆ ನೀತಿಯನ್ನು ಸರ್ಕಾರಗಳು ಹೊಂದಿವೆ. ದೇಶಾದ್ಯಂತ ಅಂಚೆ ಸೇವಕರ ಸ್ಥಿತಿಗತಿ ಸುಧಾರಣೆ ನಿಟ್ಟಿನಲ್ಲಿ ಕಮಲೇಶ್ಚಂದ್ರ ಸಮಿತಿ ಅನೇಕ ಶಿಫಾರಸುಗಳನ್ನು ಮಾಡಿದೆ. ಆದರೆ, ಕೇಂದ್ರ ಸರ್ಕಾರ ಕಮಲೇಶ್ಚಂದ್ರ ಸಮಿತಿ ವರದಿ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷé ವಹಿಸಿದೆ. ಅಂಚೆ ಸೇವಕರ
ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಕಲಬುರಗಿ ಸಹಾಯಕ ಅಂಚೆ ಅಧೀಕ್ಷಕ ಆರ್‌.ಎಚ್‌. ಶಿವಾನಂದ, ಯಾದಗಿರಿ ಸಹಾಯಕ ಅಂಚೆ ಅಧೀಕ್ಷಕ ವಿ.ಎಲ್‌. ಚಿತಕೋಟೆ, ಧಾರವಾಡ ವಲಯ ಸಹಾಯಕ ಕಾರ್ಯದರ್ಶಿ ಎಂ.ಎನ್‌. ಕುರಹಟ್ಟಿ, ಎಐಜಿಡಿಎಸ್‌ಯು ಕಲಬುರಗಿ ವಿಭಾಗದ ಅಧ್ಯಕ್ಷ ಶಿವರಾಜ ಬಿರಾದಾರ, ಯಾದಗಿರಿ ಉಪ ವಿಭಾಗದ ಅಧ್ಯಕ್ಷ ನಾಗಪ್ಪ, ದಿಂಗಬರ್‌ ಸಜ್ಜನ, ಪ್ರಫುಲ್‌ಕುಮಾರ ಬೋರಗಾಂವಕರ್‌, ದೊಡ್ಡಯ್ಯನಾಯಕ, ಕೆ.ಪಿ. ಹೂಗಾರ ಹಾಗೂ ಮತ್ತಿತರರು ಇದ್ದರು.
ದೇಶದಲ್ಲಿ ಕಲಬುರಗಿ ವಿಭಾಗವನ್ನು ಮಾದರಿ ಮಾಡುವ ಉದ್ದೇಶ ಹೊಂದಲಾಗಿದೆ. ಇಲಾಖೆಯಲ್ಲಿ ಶೇ.70ರಷ್ಟು ಗ್ರಾಮೀಣ ಅಂಚೆ ಸೇವಕರಿದ್ದು, ನಿಮ್ಮ ಸಹಕಾರ ಬೇಕಾಗಿದೆ. ಸುಕನ್ಯಾ ಸಮೃದ್ಧಿ, ಅಟಲ್‌ ಪಿಂಚಣಿ ಉತ್ತಮ ಯೋಜನೆಗಳಾಗಿದ್ದು, ಹೆಚ್ಚಿನ ಖಾತೆ ತೆಗೆದಲ್ಲಿ ಅಂಚೆ ಸೇವಕರಿಗೆ 20ರಿಂದ 42 ವರ್ಷ ನಿರಂತರವಾಗಿ ಕೆಲಸ ಸಿಗುತ್ತದೆ. ಅಧಿಕ ಹಣವೂ ಸಂಪಾದಿಸಬಹುದು.  ಬಿ.ಆರ್‌. ನನಜಿಗ, ಹಿರಿಯ ಅಂಚೆ ಅಧೀಕ್ಷಕ, ಕಲಬುರಗಿ ವಿಭಾಗ

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು

Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು

priyank kharge

Kalaburagi: ಪುನರ್‌ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ

Priyank–Kharge

Waqf Notice Issue: ಬಿಜೆಪಿ- ಕಾಂಗ್ರೆಸ್‌ ನಾಯಕರಿಂದ ರಾಜಕೀಯ ವಾಕ್ಸಮರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.