ಬತ್ತಿ ಹೋಗುವ ಹಂತದಲ್ಲಿದೆ ಬಂದಾರು ಕೆರೆ
ಗಂಧಕದ ಅಂಶವಿರುವ ಔಷಧೀಯ ಗುಣ ಸಮೃದ್ಧ ನೀರು
Team Udayavani, Apr 1, 2019, 12:28 PM IST
ಉಪ್ಪಿನಂಗಡಿ : ಇಲ್ಲಿಗೆ ಸಮೀಪದ ಬಂದಾರು ಎನ್ನುವಲ್ಲಿನ ಬಿಸಿ ನೀರ ಚಿಲುಮೆಯ ಕೆರೆಯು ಈ ಬಾರಿಯ ಸುಡು ಬಿಸಿಲ ತಾಪಕ್ಕೆ ಬತ್ತಿ ಹೋಗುವ ಹಂತಕ್ಕೆ ತಲುಪಿದೆ.
ಬಂದಾರಿನ ಈ ಕೆರೆಯು ವರ್ಷದ ಮಳೆಗಾಲ, ಚಳಿಗಾಲ, ಬೇಸಗೆ ಕಾಲದುದ್ದಕ್ಕೂ ಸುಮಾರು 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದೊಂದಿಗೆ ಬಿಸಿಯಾಗಿದ್ದು, ಈ ನೀರಿನಲ್ಲಿ ಗಂಧಕದ ಅಂಶ ಹೇರಳವಾಗಿರುವುದರಿಂದ ಹಲವಾರು ಬಗೆಯ ಚರ್ಮವ್ಯಾಧಿಗಳು ನಿವಾರಣೆಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ದೂರದ ಕೇರಳ, ತಮಿಳುನಾಡು, ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಹಲವಾರು ಮಂದಿ ಬಂದು ಈ ಕೆರೆಯಲ್ಲಿ ಸ್ನಾನ ಮಾಡಿ ಇಲ್ಲಿನ ನೀರನ್ನು ಕೊಂಡೊಯ್ಯುತ್ತಾರೆ.
ಈ ಕೆರೆಯ ನೀರನ್ನು ಕೃಷಿಗೆ ಬಳಸಿದಾಗ ಯಾವುದೇ ಅನ್ಯ ಗೊಬ್ಬರ ಬಳಕೆ ಮಾಡದೆ ಹೆಚ್ಚಿನ ಕೃಷಿ ಇಳುವರಿಯನ್ನು ಪಡೆಯಲು ಸಾಧ್ಯವಾಗಿದೆ. ಈ ಎಲ್ಲ ಕಾರಣಗಳಿಂದ ಕೇಂದ್ರೀಯ ಅಧ್ಯಯನ ವಿಭಾಗದ ವಿಜ್ಞಾನಿಗಳು ಇಲ್ಲಿಗೆ ಆಗಮಿಸಿ ಕೆರೆಯ ನೀರನ್ನು ಅಧ್ಯಯನಕ್ಕೆ ಒಳಪಡಿಸಿದ್ದರು.
ಪ್ರಾಕೃತಿಕ ಅಸಮತೋಲನ
ಈ ಎಲ್ಲ ವೈಶಿಷ್ಟ್ಯಗಳನ್ನು ಹೊಂದಿರುವ ಕೆರೆಯು ಈ ವರ್ಷ ಸಂಪೂರ್ಣ ಬತ್ತುವ ಭೀತಿಗೆ ಒಳಗಾಗಿರುವುದು ಪ್ರಕೃತಿಯಲ್ಲಿ ಸಮತೋಲನ ತಪ್ಪುತ್ತಿರುವ ವಿದ್ಯಮಾನವಾಗಿದೆ ಎಂದು ಪರಿಸರ ಪ್ರೇಮಿ, ಗೃಹರಕ್ಷಕ ದಳದ ಘಟಕಾಧಿಕಾರಿ ದಿನೇಶ್ ಅವರು ಹೇಳಿದ್ದಾರೆ.
ವರ್ಷದ ಎಲ್ಲ ದಿನಗಳಲ್ಲಿಯೂ ನೀರಿನ ಮಟ್ಟವನ್ನು ಕಾಯ್ದುಕೊಂಡಿದ್ದ ಈ ಕೆರೆಯ ನೀರು ಈ ಬಾರಿ ಬತ್ತಿ ಹೋಗುವ ಹಂತಕ್ಕೆ ಸಿಲುಕಿರುವುದು ಕಳವಳಕಾರಿ ಎಂದು ಸ್ಥಳೀಯ ನಿವಾಸಿ ಮಹಮ್ಮದ್ ಬಂದಾರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.