ಮೋದಿ ಗೆಲ್ಲಿಸಲು ಚೌಕೀದಾರರಾಗೋಣ


Team Udayavani, Apr 1, 2019, 12:32 PM IST

dvg-1
ದಾವಣಗೆರೆ: ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ದೇಶ, ರಕ್ಷಣೆ, ಭಾರತ ಮಾತೆಗಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಲು ಎಲ್ಲರೂ ಚೌಕೀದಾರ್‌ರಾಗಿ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಮನವಿ ಮಾಡಿದ್ದಾರೆ.
ಭಾನುವಾರ ಬಿಜೆಪಿ ಚುನಾವಣಾ ಕಾರ್ಯಾಲಯದ ಆವರಣದಲ್ಲಿ ನಡೆದ ಮೈ ಭಿ ಚೌಕಿದಾರ್‌… ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ನಡೆಯುತ್ತಿರುವಂತಹ ಚುನಾವಣೆ ಜಿ.ಎಂ. ಸಿದ್ದೇಶ್ವರ್‌ ಅವರನ್ನ ಮತ್ತೆ ಸಂಸತ್‌ ಸದಸ್ಯರನ್ನಾಗಿ ಮಾಡುವ, ನರೇಂದ್ರ ಮೋದಿ ಅವರನ್ನ ಮತ್ತೆ ಪ್ರಧಾನ ಮಂತ್ರಿಯನ್ನಾಗಿ ಮಾಡುವ ಚುನಾವಣೆ ಅಲ್ಲ. ಭಾರತಮಾತೆಯ ಘನತೆ, ಗೌರವವನ್ನು ಇನ್ನೂ ಎತ್ತರಕ್ಕೆ ಮುಟ್ಟಿಸುವಂತಹ ಭಾರತಮಾತೆ ಮತ್ತು ದೇಶಕ್ಕಾಗಿ ನಡೆಯುವ ಚುನಾವಣೆ ಎಂದು ವಿಶ್ಲೇಷಿಸಿದರು.
ಅತ್ಯಂತ ಬಡ ಕುಟುಂದ ಹಿನ್ನೆಲೆಯಿಂದ, ಹಿಂದುಳಿದ ಜಾತಿಗಳಲ್ಲಿ ತೀರಾ ಹಿಂದುಳಿದ, ಅವರಿವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಬಡ ತಾಯಿಯ ಮಗನಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ದೇಶದ ಬಡವರು,
ಹಿಂದುಳಿದವರ ಪ್ರತಿನಿಧಿ. ಬಡವರಿಗೆ ಸ್ಫೂರ್ತಿ ಆಗಿದ್ದಾರೆ. ಅಂತಹವರನ್ನ ಮತ್ತೆ ಪ್ರಧಾನಿಯನ್ನಾಗಿ ಮಾಡುವ ಚೌಕೀದಾರರಾಗಬೇಕು ಎಂದು ತಿಳಿಸಿದರು.
ದುನಿಯಾ ಝುಕ್ತಾ ಹೈ… ಝುಕಾನಾವಾಲಾ ಚಾಹಿಯೇ… ಎನ್ನುವಂತೆ ಸಾಮಾನ್ಯ ಬಡ ಕುಟುಂಬದಿಂದ ಬಂದಿರುವ ಅಸಾಮಾನ್ಯ ನಾಯಕ ನರೇಂದ್ರಮೋದಿ ಅವರೇ ಮತ್ತೆ ಐದು ವರ್ಷ ಪ್ರಧಾನಿಯಾದರೆ ಇಡೀ ಜಗತ್ತನ್ನೇ ಬಗ್ಗಿಸಿ ದೇಶವನ್ನು
ಮುನ್ನಡೆಸುವಂತಹ ಮಹಾನ್‌ ನಾಯಕರಾಗುತ್ತಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಜಿ.ಎಂ. ಸಿದ್ದೇಶ್ವರ್‌ ಅವರನ್ನ ಗೆಲ್ಲಿಸುವ ಮೂಲಕ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜಿ.ಸಿ. ಮಾಧುಸ್ವಾಮಿ ಮಾತನಾಡಿ, ಭಾರತದ ಇತಿಹಾಸದಲ್ಲೇ ಮತದಾರರು ಮತ್ತು ಜನಪ್ರತಿನಿಧಿಗಳ ನಡುವೆ ಆಡಳಿತ, ಸಮಸ್ಯೆ, ಪರಿಹಾರ ಕುರಿತಂತೆ ಮೊಟ್ಟ ಮೊದಲ ಬಾರಿಗೆ ಚರ್ಚೆ ಆರಂಭವಾಗಿದೆ. ಆ ಚರ್ಚೆ ಮುಂದುವರೆಯಬೇಕು ಎನ್ನುವುದಾದರೆ ಈ ದೇಶಕ್ಕೆ ಮೋದಿ ಅವರು ತೀರಾ ಅನಿವಾರ್ಯ. ಮತ್ತೆ ಪ್ರಧಾನಿ ಆಗುವುದು ಮೋದಿ ಅವರಿಗೆ ಅನಿವಾರ್ಯ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಅವರು ಮತ್ತೂಮ್ಮೆ ಪ್ರಧಾನಿ ಆಗುವುದು ದೇಶಕ್ಕೆ ಅನಿವಾರ್ಯ ಎಂದರು.
ದೇಶದ ಜನರನ್ನ ಸಂಕಷ್ಟದಿಂದ ಪಾರು ಮಾಡುವ, ದೇಶಕ್ಕೆ ರಕ್ಷಣೆ ಕೊಡುವ, ಅಭ್ಯುದಯದ ಬಗ್ಗೆ ಚಿಂತನೆ ಮಾಡುವ, ದೇಶದ ಜನರ ಸ್ವಾಭಿಮಾನ, ಪ್ರತಿಷ್ಠೆ, ಗೌರವ ಉಳಿಸಿ, ಬೆಳೆಸುವ ಶಕ್ತಿ ಹೊಂದಿರುವ ಅಮೂಲ್ಯವಾದ ವಸ್ತು ಎಂದರೆ ನರೇಂದ್ರ ಮೋದಿ. ನಾಲ್ಕು ಎತ್ತು, ಕೋಣ ಸೇರಿಕೊಂಡು ಅಧಿಕಾರ ಮಾಡುವ ಪ್ರಯತ್ನ ಮಾಡುತ್ತಿವೆ ಎಂದು ಮಹಾಗಟಬಂಧನ್‌ ಟೀಕಿಸಿದ ಅವರು, ನಾಲ್ಕು ಎತ್ತು, ಕೋಣ ಸೇರಿಕೊಂಡು ಅಧಿಕಾರ ಮಾಡಿದರೆ ನೀರಿನ ಕಡೆ, ಇಲ್ಲ ಬದುವಿನ ಕಡೆ ಎಳೆಯುತ್ತವೆ. ಅದಕ್ಕೆ ಅವಕಾಶ ಕೊಡದೆ ಸಶಕ್ತ, ಸಬಲ, ದೇಶಕ್ಕಾಗಿ ದುಡಿಯುವ ಎತ್ತು ನಮ್ಮ ಮುಂದೆ ಇದೆ. ಅಂತಹ ಬಲಶಾಲಿ ಎತ್ತಿನಿಂದ ಮತ್ತೂಮ್ಮೆ ಕೆಲಸ ಪಡೆಯುವಂತಾಗಬೇಕು ಎಂದು ಮನವಿ ಮಾಡಿದರು. ಈಗ ನಡೆಯುತ್ತಿರುವಂತಹ ಚುನಾವಣೆಯಲ್ಲಿ ಜಿ.ಎಂ. ಸಿದ್ದೇಶ್ವರ್‌ ಅವರನ್ನ ಮತ್ತೆ ಸಂಸದ ಹಾಗೂ ಮೋದಿ ಅವರನ್ನೇ ಪ್ರಧಾನಿಯನ್ನಾಗಿ ಮಾಡಬೇಕು. ಒಂದೊಮ್ಮೆ ಮೋದಿ ಅವರಿಗೆ ಹಿನ್ನಡೆಯಾದರೆ ಅದು ರಾಷ್ಟ್ರಕ್ಕೆ ಅಪಮಾನ ಎಂದು ತಿಳಿಯಬೇಕು ಎಂದರು.
ಈಗ ನಡೆಯುತ್ತಿರುವ ಚುನಾವಣೆ ಜಿ.ಎಂ. ಸಿದ್ದೇಶ್ವರ್‌ ಅವರ ಚುನಾವಣೆ ಅಲ್ಲ. ನಮ್ಮ-ನಿಮ್ಮ ಎಲ್ಲರ ಚುನಾವಣೆ. ಕರ್ನಾಟಕದಲ್ಲಿ 22 ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವ ಮೂಲಕ ದಕ್ಷಿಣ ಭಾರತದ ಹೆಬ್ಟಾಗಿಲು ತೆಗೆಯುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಅತೀ ಕಡು ಬಡತನದಲ್ಲಿ ಹುಟ್ಟಿರುವ ನರೇಂದ್ರ ಮೋದಿ ಅವರು ಎಂದಿಗೂ ಅಣ್ಣ-ತಮ್ಮ, ಅಕ್ಕ-ತಂಗಿಯರಿಗೆ ಅಧಿಕಾರ ಬಯಸದೆ ದೇಶದ 130 ಕೋಟಿ ಜನರನ್ನು ಅಣ್ಣ-ತಮ್ಮ. ಅಕ್ಕ-ತಂಗಿ ಎಂದು ಭಾವಿಸಿ ದಿನದ 18 ಗಂಟೆ ಕೆಲಸ ಮಾಡುವ, ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುವ, ದೇಶವನ್ನು ರಕ್ಷಿಸುವ ಸಮರ್ಥ ನಾಯಕರಾಗಿದ್ದಾರೆ. ಅಂತಹ ಮಹಾನ್‌ ನಾಯಕನನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ದೇಶದ ರಕ್ಷಣೆ ಮಾಡುವಂತಹ ಸಮರ್ಥ ಚೌಕಿದಾರ್‌. ಆ ಚೌಕಿದಾರ್‌ ಮತ್ತೆ ಪ್ರಧಾನಿ ಆಗಲು ನನ್ನನ್ನು ಮತ್ತೂಮ್ಮೆ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಶಾಸಕರಾದ ಎಸ್‌.ಎ. ರವೀಂದ್ರನಾಥ್‌,
ಎಂ.ಪಿ. ರೇಣುಕಾಚಾರ್ಯ, ಎಸ್‌.ವಿ. ರಾಮಚಂದ್ರ, ಪ್ರೊ| ಎನ್‌. ಲಿಂಗಣ್ಣ, ಮಾಜಿ ಶಾಸಕರಾದ ಎಂ. ಬಸವರಾಜನಾಯ್ಕ, ಬಿ.ಪಿ. ಹರೀಶ್‌, ಜಿಪಂ ಅಧ್ಯಕ್ಷೆ ಶೈಲಜಾ ಬಸವರಾಜ್‌, ಉಪಾಧ್ಯಕ್ಷ ಸುರೇಂದ್ರನಾಯ್ಕ, ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಇತರರು ಇದ್ದರು.
ಎಚ್‌. ಆನಂದಪ್ಪ ಸೇರ್ಪಡೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮಾಯಕೊಂಡ ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್‌. ಆನಂದಪ್ಪ ತಮ್ಮ ಅಪಾರ ಬೆಂಬಲಿಗರೊಂದಿಗೆ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡರು.
4 ರಂದು ನಾಮಪತ್ರ
ಏ.4 ರಂದು ತಾವು ನಾಮಪತ್ರ ಸಲ್ಲಿಸುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ್‌ ತಿಳಿಸಿದರು. ಅಂದು ಬೆಳಗ್ಗೆ 10.30ಕ್ಕೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ 11.30ಕ್ಕೆ ನಾಮಪತ್ರ ಸಲ್ಲಿಸಲಾಗುವುದು. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಶಾಸಕರಾದ ಕೆ.ಎಸ್‌. ಈಶ್ವರಪ್ಪ, ಬಿ. ಶ್ರೀರಾಮುಲು, ಎಂ. ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್‌ ಹಾಗೂ ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಮಾಜಿ ಶಾಸಕರು, ಮುಖಂಡರು, ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.

ಟಾಪ್ ನ್ಯೂಸ್

1-bang

Bangladesh: ಚಿನ್ಮಯ್‌ ಕೃಷ್ಣದಾಸ್‌ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

Samantha Ruth Prabhu: ನನ್ನ ಸೆಕೆಂಡ್‌ ಹ್ಯಾಂಡ್‌ ಅಂದ್ರು!: ಸಮಂತಾ ದುಃಖದ ಮಾತು

1-kims

Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ

ICC

ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?

ISREL

Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ

highcort dharwad

Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Arrested: ಸರ‌, ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Theft Case: ಕೆಲಸಕ್ಕಿದ್ದ ಮನೆಯಲ್ಲೇ 25 ಲಕ್ಷ ರೂ. ಚಿನ್ನ ಕದ್ದಳು!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Theft: ಕೇರ್‌ ಟೇಕರ್‌ ಮಹಿಳೆಯಿಂದ ಕನ್ನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.