ಗುಂಡಿ ಮುಚ್ಚದಿದ್ದರೆ ಅಪಘಾತ ಖಚಿತ
Team Udayavani, Apr 1, 2019, 4:18 PM IST
ಭಾಲ್ಕಿ: ಪಟ್ಟಣದ ಹಲವು ಬಡಾವಣೆಗಳ ರಸ್ತೆಗಳಲ್ಲಿ ತಗ್ಗು ಗುಂಡಿಗಳು ನಿರ್ಮಾಣವಾಗಿ ಹದಗೆಟ್ಟಿದ್ದು, ಇಂತಹ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸಲು ನಿತ್ಯ ಪ್ರಯಾಸ ಪಡಬೇಕಾಗಿದೆ.
ಪಟ್ಟಣದ ಹೃದಯ ಭಾಗ ಚನ್ನಬಸವಾಶ್ರಮದ ಹತ್ತಿರ ಹಳೆ ತಹಶೀಲ್ದಾರ್ ಕಚೇರಿ ಪ್ರದೇಶದ ಕೂಡು ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದ್ದು, ಈ ಗುಂಡಿ ಮೇಲೆ ಕಾರು, ಬೈಕ್‌ಗಳು ಹಲವಾರು ಸಲ ಬಿದ್ದು ಚಾಲಕರು ಆಸ್ಪತ್ರೆ ಸೇರಿದ ಘಟನೆಗಳು ನಡೆದಿವೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಇದರುವರೆಗೆ ಗುಂಡಿ ಮುಚ್ಚುವ ಗೋಜಿಗೆ ಹೋಗಿಲ್ಲ.
ಈ ರಸ್ತೆಯಲ್ಲಿ ಗುಂಡಿ ಸುಮಾರು 4 ವರ್ಷಗಳಿಂದ ಹಾಗೆಯೇ ಇದೆ. ಪ್ರತಿನಿತ್ಯ ಹೊಸದಾಗಿ ಬರುವ ವಾಹನ ಚಾಲಕರು ಈ ಗುಂಡಿಯಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳುತ್ತಾರೆ. ಆದರೆ ಯಾರೊಬ್ಬರೂ ಈ ಗುಂಡಿ ಮುಚ್ಚುವ ಕಡೆ ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಮಹೇಶ ವಾರದ. ಇಂತಹ ಗುಂಡಿಗಳು ಈ ಒಂದೇ ಸ್ಥಳದಲ್ಲಿ ಮಾತ್ರವಲ್ಲ ಪಟ್ಟಣದ ಹಲವಾರು ಕಡೆಗಳಲ್ಲಿ ಇವೆ. ಆದರೆ ಪುರಸಭೆ ಅಧಿಕಾರಿಗಳು ಈ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸಹಕರಿಸುವ ಕಾರ್ಯ ಮಾಡಬೇಕು ಎಂಬುದು ಜನರ ಆಗ್ರಹವಾಗಿದೆ.
ರಸ್ತೆ ಮಧ್ಯಭಾಗದಲ್ಲಿ ಯಾವುದೇ ತಗ್ಗು ಗುಂಡಿಗಳಿರಬಾರದು ಎನ್ನುವ ನಿಯಮವಿದೆ. ಅಂತಹ ಗುಂಡಿಗಳು ಕಂಡು ಬಂದರೆ ತಕ್ಷಣ ಮುಚ್ಚಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವುದು ಸರ್ಕಾರದ ಮೂಲ ಉದ್ದೇಶ. ಆದರೆ ಸರ್ಕಾರದ ಅಧೀನದಲ್ಲಿ ಕಾರ್ಯಮಾಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ಇತ್ತ ಗಮನ ಹರಿಸದೇ, ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳಿದ್ದರೂ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.
ಈ ಮೊದಲು ರಸ್ತೆ ಪಕ್ಕ ನೀರು ಸರಬರಾಜಿಗಾಗಿ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿತ್ತು, ರಸ್ತೆ ಅಗಲೀಕರಣದ ನಂತರ ಪೈಪ್‌ಲೈನ್‌ನಲ್ಲಿರುವ ವಾಲ್‌ಗಳು ರಸ್ತೆಯ ನಡುವೆ ಬಂದಿವೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ಪೈಪ್‌ಲೈನ್ ಜೋಡಣೆಯ ನಂತರ ಎಲ್ಲಾ ತಗ್ಗು ಗುಂಡಿಗಳನ್ನು ಮುಚ್ಚಲಾಗುವುದು ಎನ್ನುವುದು ಪುರಸಭೆ ಮುಖ್ಯಾ ಧಿಕಾರಿ ಶಿವಶರಣಯ್ನಾ ಸ್ವಾಮಿ ಅವರ ಮಾತು.
ಆದಷ್ಟು ಬೇಗ ರಸ್ತೆ ಮಧ್ಯದ ತಗ್ಗು ಗುಂಡಿಗಳನ್ನು ಮುಚ್ಚಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಣಿವು ಮಾಡಿಕೊಡಬೇಕು ಎನ್ನುವುದು ಇಲ್ಲಿನ ನಾಗರಿಕರ ಒತ್ತಾಸೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.