ಮತದಾರರ ಮನ ಸೆಳೆದ ಪುಟಾಣಿ ವಚನಾ
ಜಿಲ್ಲಾಧಿಕಾರಿ, ಜಿಪಂ ಸಿಇಒ, ಸಾರ್ವಜನಿಕರಿಂದ ಪ್ರಶಂಸೆ
Team Udayavani, Apr 1, 2019, 5:03 PM IST
ಅಕ್ಕಿಆಲೂರು: ಗ್ರಾಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮತದಾನ ಕುರಿತು ಪ್ರತಿಜ್ಞಾವಿಧಿ ಬೋಧಿಸಿದ್ದ ಪುಟಾಣಿ ವಚನಾ.
ಅಕ್ಕಿಆಲೂರು: ಇಲ್ಲಿನ ಕುಮಾರ ನಗರದ 6 ವರ್ಷದ ಪುಟಾಣಿ ವಚನಾ ಚಿಲ್ಲೂರಮಠ ತನ್ನ ಕೈಬರಹದಿಂದ ಕಡ್ಡಾಯ ಮತದಾನ ಕುರಿತು ಕರಪತ್ರ ಬರೆದು, ಮತದಾನ ಜಾಗೃತಿಗೆ ಮುಂದಾಗುವ ಮೂಲಕ ಈ ಭಾಗದ ಜನತೆಯ ಪ್ರಶಂಸೆಗೆ ಪಾತ್ರರಾಗಿದ್ದಾಳೆ.
ಡೊಳ್ಳೇಶ್ವರ ಸರ್ಕಾರಿ ಶಾಲೆ ಶಿಕ್ಷಕ ಶಿವಬಸಯ್ಯ ಮತ್ತು ಅರ್ಪಣಾ ಚಿಲ್ಲೂರಮಠ ದಂಪತಿ ಪುತ್ರಿಯಾದ ವಚನಾ ಸ್ಥಳೀಯ ಜ್ಞಾನಭಾರತಿ ಕಾನ್ವೆಂಟ್ ಮಾದರಿ ಶಾಲೆಯಲ್ಲಿ ಯುಕೆಜಿ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
ಮತದಾನ ಎಂಬುದು ರಾಷ್ಟ್ರಪ್ರಜ್ಞೆ ಅನಾವರಣ ಮಾಡಲು ಇರುವ ಸುವರ್ಣ ವೇದಿಕೆ. ಮತದಾನ ಮಾಡದ ಯಾವ ಒಬ್ಬ ವ್ಯಕ್ತಿಗೂ ಸರ್ಕಾರದ ಸವಲತ್ತು ಪಡೆಯುವ ನೈತಿಕ ಹಕ್ಕಿಲ್ಲ. ನನ್ನ ಒಂದು ಮತ ಚಲಾವಣೆಯಾಗದಿದ್ದರೆ ನಡೆಯುತ್ತೆ ಎಂಬ ಬೇಜವಾಬ್ದಾರಿಯಿಂದ ರಜೆಗೆ ತೆರಳದಿರಿ, ಒಂದು ಮತ ದೇಶದ ಭವಿಷ್ಯ ನಿರ್ಧರಿಸುವ ಸಾಮರ್ಥ್ಯ ಹೊಂದಿದೆ ಇತ್ಯಾದಿ ಘೋಷಣೆಗಳೊಂದಿಗೆ ಮಾರುಕಟ್ಟೆ, ಧಾರ್ಮಿಕ ಸಭೆ ಸಮಾರಂಭ, ಶಾಲಾ-ಕಾಲೇಜುಗಳಿಗೆ ತೆರಳುವ ವಚನಾ ಮತದಾನದ ಮಹತ್ವ ಸಾರುತ್ತಿದ್ದಾಳೆ.
ವಚನಾಳ ಈ ನಿಸ್ವಾರ್ಥ ಸೇವೆಗೆ ಜಿಲ್ಲಾ ಚುನಾವಣಾಧಿ ಕಾರಿ ಕೃಷ್ಣಾ ಬಾಜಪೇಯಿ, ಜಿಪಂ ಸಿಇಒ ಕೆ. ಲೀಲಾವತಿ, ಹುಕ್ಕೇರಿಮಠದ ಸದಾಶಿವ ಶ್ರೀಗಳು, ವಿರಕ್ತಮಠದ ಶಿವಬಸವ ಶ್ರೀಗಳು, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರವೀಣಕುಮಾರ ಅಪ್ಪಾಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
By Polls: ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.