ವಿನ್ ಮಾಡೋ ವಿನ್ಯಾಸ
ಪ್ರಾಡಕ್ಟ್ ಡಿಸೈನ್ ಪಂಡಿತರಾಗ್ತಿರಾ?
Team Udayavani, Apr 2, 2019, 6:27 AM IST
ಉತ್ಪನ್ನ ವಿನ್ಯಾಸಕರು ವಾಣಿಜ್ಯೋದ್ಯಮಗಳಿಗಾಗಿ ಉತ್ಪನ್ನಗಳು, ವಸ್ತುಗಳು ಹಾಗೂ ಇತರೆ ಪರಿಕರಗಳನ್ನು ವಿನ್ಯಾಸ ಮಾಡುತ್ತಾರೆ. ಇಂದು ಈ ವಿನ್ಯಾಸಗಾರರು ವಿನ್ಯಾಸೋದ್ಯಮದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ. ಇವರ ವಿನ್ಯಾಸ ಕೌಶಲಗಳು ಉತ್ಪನ್ನಗಳ ಪ್ರಾಯೋಗಿಕತೆ ಹಾಗೂ ಅವುಗಳ ಸೌಂದರ್ಯ ಎರಡಕ್ಕೂ ನ್ಯಾಯ ಒದಗಿಸುತ್ತದೆ.
ವಿನ್ಯಾಸಗಾರರು ಏನು ಮಾಡುತ್ತಾರೆ?
ವಿನ್ಯಾಸಗಾರರು ಕೇವಲ ಕೌಶಲವಿರುವ ಕಲಾವಿದರಲ್ಲ! ಇವರು ಗೃಹೋಪಯೋಗಿ ವಸ್ತುಗಳಿಂದ ತೊಡಗಿ ಕಾರು, ಕಂಪ್ಯೂಟರ್, ವೈದ್ಯಕೀಯ ಸಂಬಂಧಿತ ಅಥವಾ ಮನರಂಜನಾ ಉದ್ದಿಮೆಯ ಪರಿಕರಗಳು, ಮಕ್ಕಳ ಆಟಿಕೆ ಹೀಗೆ ವೈವಿಧ್ಯಮಯ ವಸ್ತುವಿಶೇಷಗಳನ್ನು ಲಾಭದಾಯಕವಾಗಿ ತಯಾರಿಸುವುದರಿಂದ ಹಿಡಿದು ಅವುಗಳನ್ನು ಗ್ರಾಹಕ ಪ್ರಿಯ ವಸ್ತುಗಳನ್ನಾಗಿ ಮಾರುಕಟ್ಟೆಯಲ್ಲಿ ಬಿಡುವಂತೆ ವಿನ್ಯಾಸ ಮಾಡಬೇಕಾಗುತ್ತದೆ. ಮಾರುಕಟ್ಟೆಯ ಸ್ಫರ್ಧಾತ್ಮಕ ಜಗತ್ತಿನಲ್ಲಿ ವಸ್ತುಗಳು ಗೆಲ್ಲಬೇಕು. ಅದೇ ವಿನ್ಯಾಸಗಾರ ಎದುರಿಸಬೇಕಾಗಿರುವ ಅತಿದೊಡ್ಡ ಸವಾಲು. ಉತ್ಪನ್ನ ವಿನ್ಯಾಸಕರು ಉತ್ಪನ್ನ ವಿನ್ಯಾಸ/ಪಿಂಗಾಣಿ ವಸ್ತುಗಳ ವಿನ್ಯಾಸ/ಪೀಠೊಪಕರಣಗಳ ವಿನ್ಯಾಸ ಇಂಥವುಗಳಲ್ಲಿ ವಿಶೇಷ ಪರಿಣತಿ ಹೊಂದಿರಬೇಕು.
ಅಗತ್ಯವಿರುವ ಕೌಶಲಗಳು
-ಸೃಜನಶೀಲತೆ
-ಕಲ್ಪನಾ ದೃಷ್ಟಿ
-ಸಮಸ್ಯೆಯನ್ನು ಸ್ಪಷ್ಟವಾಗಿ, ತರ್ಕಬದ್ಧವಾಗಿ ವಿಶ್ಲೇಷಣೆ ಮಾಡಿ, ರಚನಾತ್ಮಕ ಪರಿಹಾರಗಳನ್ನು ಯೋಚಿಸುವ ಶಕ್ತಿ
-ಯೋಜನೆಗಳನ್ನು ಚಿತ್ರಗಳ ಮೂಲಕ ಅಭಿವ್ಯಕ್ತಿಸುವ ಕಲೆ
– ಟೀಂ ವರ್ಕ್/ ತಂಡದಲ್ಲಿ ಹೊಂದಿಕೊಂಡು ಕೆಲಸ ಮಾಡುವ ವ್ಯಕ್ತಿತ್ವ
-ಕಲಾತ್ಮಕತೆ
-ಸಲಹೆ ಮತ್ತು ಟೀಕೆಗಳನ್ನು ಸ್ವೀಕರಿಸುವ ಮನೋಧರ್ಮ
-ಬಣ್ಣಗಳ ಕುರಿತ ಸೂಕ್ಷ್ಮತೆ
– ಸೌಂದರ್ಯವನ್ನು ಹೊರತರುವ ಮತ್ತು ಎರ್ಗೆನೋಮಿಕÕ… (ಮಾನವ ಮತ್ತು ಪರಿಸರದ ನಡುವಿನ ಸಂಬಂಧದ ಅಧ್ಯಯನ) ಕಲೆಯಿರಬೇಕು. -ಉತ್ಪಾದನಾ ವೆಚ್ಚದ ಮಿತಿಯಿಂದಾಗಿ ಅನೇಕ ಕಾರ್ಯಗಳನ್ನು ಕೈಬಿಡಲಾಗುವುದು. ಇಂಥ ಸಂದರ್ಭಗಳಿಗೆ ಹೊಂದಿಕೊಳ್ಳುವ ಉಪಾಯಗಳನ್ನು ಯೋಚಿಸುವ ಸಾಮರ್ಥ್ಯ
ಅವಕಾಶ ಎಲ್ಲಿದೆ?
ಉತ್ಪಾದನಾ ಸಂಸ್ಥೆಗಳು, ಕಾರ್ಖಾನೆಗಳು, ಔದ್ಯೋಗಿಕಾ ಸಲಹಾ ಸಂಸ್ಥೆಗಳು, ಪೀಠೊಪಕರಣಗಳು ಹಾಗೂ ಸ್ನಾನಗೃಹೋಪಯೋಗಿ ವಸ್ತುಗಳ ಉತ್ಪಾದನಾ ಘಟಕಗಳು, ದೀಪ ಮತ್ತು ಬೆಳಕಿನ ವ್ಯವಸ್ಥೆಯ ಪರಿಕರಗಳು, ಕುಂಬಾರಿಕೆ ಮಾದರಿಯ ಮಣ್ಣಿನ ಪರಿಕರಗಳನ್ನು ತಯಾರಿಸುವ ಸಂಸ್ಥೆಗಳು, ಅಲಂಕಾರಿಕ ಪೋರ್ಸಲೈನ್ ಮತ್ತು ವಿದ್ಯುತ್ ಉಪಕರಣಗಳ ತಯಾರಿಕಾ ಸಂಸ್ಥೆಗಳಲ್ಲಿ ಅವಕಾಶಗಳಿವೆ.
ಶೈಕ್ಷಣಿಕ ಹಾದಿ ಹೇಗಿರುತ್ತೆ?
-“ಎನ್‌ಐಡಿ’ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್) ನಾಲ್ಕು ವರ್ಷದ ವಿನ್ಯಾಸ ಪದವಿ ಕೋರ್ಸ್ ನಡೆಸುತ್ತದೆ. ಅದಕ್ಕೆ ಸೇರಲು ಅರ್ಹತೆ 12 ತರಗತಿ/ಪಿಯುಸಿ (ಯಾವುದೇ ವಿಷಯ). ಗರಿಷ್ಠ 20 ವರ್ಷ. (ಮೂರು ವರ್ಷಗಳ ಸಡಿಲಿಕೆಯಿದೆ).
-ಎನ್‌ಐಡಿ ಮಾಸ್ಟರ್ ಆಫ್ ಡಿಸೈನ್ ಕೋರ್ಸ್ (ಎರಡೂವರೆ ವರ್ಷ ಅವಧಿ). ಅರ್ಹತೆ: ಗರಿಷ್ಠ 30 ವರ್ಷ (ಮೀಸಲಾತಿ ಇರುವವರಿಗೆ ಮೂರು ವರ್ಷ ಸಡಿಲಿಕೆಯಿದೆ). ಶೈಕ್ಷಣಿಕ ಅರ್ಹತೆ ಯಾವುದೇ ಪದವಿ/ ವಿನ್ಯಾಸದಲ್ಲಿ ಡಿಪ್ಲೊಮಾ (10+2+4 ಮಾದರಿಯಲ್ಲಿ) /ಯಾವುದೇ ಪದವಿ (10+2+3 ಮಾದರಿಯಲ್ಲಿ)
ಎರಡು ಹಂತಗಳಲ್ಲಿ ಪರೀಕ್ಷೆ ನಡೆಸಿ, ಎನ್‌ಐಡಿ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಯ ತಿಳಿವಳಿಕೆ, ಕೌಶಲಗಳು ಮತ್ತು ವಿಶೇಷ ಸಾಮರ್ಥ್ಯಗಳನ್ನು ಅಳೆಯಲಾಗುವುದು.
ಕಲ್ಗುಂಡಿ ನವೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.