ಅನುಮತಿಯಿಲ್ಲದೆ ಚಿತ್ರ ಬಳಸಿದಕ್ಕೆ ಅಸಮಾಧಾನ
ಕಲಾವಿದನ ಕೇಳದೆ ಸೀರೆಗೂ ಬಂತು ಶಿರಸಿ ಕಲಾವಿದನ ಪೇಟಿಂಗ್ ಚಿತ್ರ!
Team Udayavani, Apr 1, 2019, 5:33 PM IST
ಶಿರಸಿ: ಸೀರೆಯ ಮೇಲೆ ಕಲಾವಿದನ ಚಿತ್ರಗಳು ಹಾಗೂ ಕಲಾವಿದನ ಒರಿಜಿನಲ್ ಚಿತ್ರಗಳು ಹಾಗೂ ಕಲಾವಿದ.
ಶಿರಸಿ: ಕಲಾವಿದನ ಅನುಮತಿ ಪಡೆಯದೇ ಆತ ಬಿಡಿಸಿದ ಚಿತ್ರವೊಂದು ಸೀರೆಯ ಮೇಲೂ ಬಂದ ವಿಲಕ್ಷಣ ಪ್ರಸಂಗ ಬೆಳಕಿಗೆ ಬಂದಿದ್ದು, ಇದು ಕಲಾವಿದರಿಗೆ ಆದ ಶೋಷಣೆ ಅಲ್ಲದೇ ಮತ್ತೇನು ಎಂದು ಜಿಲ್ಲಾ ಚಿತ್ರಕಲಾವಿದರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಶಿರಸಿಯ ಗಣೇಶ ನಗರದ ಚಿತ್ರ ಕಲಾವಿದ ಪ್ರಕಾಶ ನಾಯ್ಕ ಅವರು ಕಳೆದ 20 ವರ್ಷಗಳಿಂದಲೂ ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪೇಂಟಿಂಗ್ ಗಳನ್ನು ರಚಿಸುತ್ತಿದ್ದಾರೆ. ಅವುಗಳಲ್ಲಿ ಬೆಂಗಳೂರು, ಮುಂಬಯಿ ಹಾಗೂ ಕೆಲವು ಖಾಸಗಿ ಆರ್ಟ್ ಗ್ಯಾಲರಿಗಳಲ್ಲಿ ಕೂಡ ಇದೆ. ವೃತ್ತಿನಿರತ ಕಲಾವಿದರಾಗಿ ಕೂಡ ಕಾರ್ಯ ಮಾಡುತ್ತಿದ್ದಾರೆ. ಅವರ ಭಾರತೀಯ ಸಾಂಪ್ರದಾಯಿಕ ರೂಪದ ಸೆಮಿ ಮಾಡರ್ನ್ ಪೇಂಟಿಂಗ್‌ಗಳಿಗೆ ಸಾಕಷ್ಟು ಬೇಡಿಕೆ ಕೂಡ ಇದೆ. ಇವರು ಶಿರಸಿಯವರು, ನಮ್ಮ ಕಲಾವಿದರು ಎನ್ನಲು ನಮಗೆ ಹೆಮ್ಮೆ ಇದೆ ಎಂದು ಸಂಘ ಹೇಳಿದೆ.
ಧಾರವಾಡದಲ್ಲಿ ನಡೆದ ಕಲಾ ಶಿಬಿರದಲ್ಲಿ ಭಾಗವಹಿಸಲು ಹೋದ ಸಂದರ್ಭದಲ್ಲಿ ಗೆಳೆಯನೊಬ್ಬ ಇವರ ಚಿತ್ರಗಳು ರೇಷ್ಮೆ ಸಾರಿಗಳ ಮೇಲೆ ಪ್ರಿಂಟ್ ರೂಪದಲ್ಲಿ ಬಂದ ವಿಚಾರ ತಿಳಿಸಿದಾಗ ಸಂತೋಷ, ಆಶ್ಚರ್ಯ ಆಯಿತು. ಆದರೆ, ತಾನು ಯಾರಿಗೂ ಹೀಗೆ ವ್ಯವಹಾರಿಕವಾಗಿ ಮುದ್ರಿಸಲು ಅನುಮತಿ ನೀಡಿಲ್ಲ, ಆದರೂ ಬಳಸಿದ್ದಾರೆ ಎಂಬ ನೋವು ವ್ಯಕ್ತಪಡಿಸಿದ್ದಾಗಿ ಸಂಘ ತಿಳಿಸಿದೆ.
ಸಾರಿಯಲ್ಲಿ ಬಂದ ಚಿತ್ರಗಳನ್ನು ಮುಂಬಯಿಯ ಪ್ರಸಿದ್ಧ ಸ್ಟುಡಿಯೋ ಒಂದರ ಗ್ಯಾಲರಿಯಲ್ಲಿ ಮಾರಾಟಕ್ಕೆ ಇಡಲಾಗಿದ್ದು, ಸಾರಿ ಉದ್ಯಮದವರು ಕಲಾವಿದ ಪ್ರಕಾಶ ನಾಯಕರ ಚಿತ್ರಗಳನ್ನು ಕದ್ದು, ಕಲಾವಿದನ ಅನುಮತಿ ಇಲ್ಲದೇ ಉಚಿತವಾಗಿ ಬಳಸಿದ್ದಾರೆ. ಇದರಿಂದ ಕಲೆಗೆ, ಕಲಾವಿದರಿಗೆ ಅನ್ಯಾಯವಾಗುತ್ತದೆ. ಸೂಕ್ತ ಗೌರವಧನ ಕೊಟ್ಟು ಅನುಮತಿ ಪಡೆದು ಬಳಸಬೇಕಿತ್ತು. ಶಿರಸಿ ಕಲಾವಿದನಿಗೆ, ನಮ್ಮ ಸಂಘದ ಸದಸ್ಯನಿಗಾದ ಅನ್ಯಾಯವನ್ನು ಜಿಲ್ಲಾ ಚಿತ್ರಕಲಾ ಪರಿಷತ್ತು ಖಂಡಿಸುತ್ತದೆ ಎಂದು ಪ್ರಕಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ.ಎಂ. ಬೊಮ್ನಳ್ಳಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.