ಏನೋ ಹೇಳ್ಬೇಕು ಕಣ್ರಿ, ಸ್ವಲ್ಪ ನನ್ನ ಮಾತು ಕೇಳ್ರಿ
Team Udayavani, Apr 2, 2019, 6:00 AM IST
ಮುದ್ದು ಹುಡ್ಗಿ,
ತುಂಬಾ ದಿನಗಳಿಂದ ನಿಮ್ಮತ್ರ ಏನೋ ಒಂದ್ ಹೇಳ್ಕೊಳ್ಬೇಕು ಅಂತ ಬಹಳ ಒದ್ದಾಡ್ತಾ ಇದ್ದೇನೆ. ಆದ್ರೆ, ಹೇಳ್ಳೋಕೆ ಆಗಿರ್ಲಿಲ್ಲ. ಇವತ್ತು ಏನೇ ಆಗ್ಲೀ ಹೇಳ್ಳೇಬೇಕು ಅಂತ ಧೈರ್ಯ ಮಾಡಿದ್ದೀನಿ. ಇದು ಬರೀ ನಿವೇದನೆ ಅಲ್ಲ. ನನ್ ಮನಸಿನೊಳಗೆ ಅವಿತು ಕುಳಿತಿರೋ ಭಾವಗಳ ಮಾತು..ಕೇಳಿ..! ಅದೇನಂದ್ರೆ…
ಯಾವತ್ತು ನಿಮ್ಮನ್ನು ನೋಡಿದೆನೋ ಅವತ್ತೇ ನಿಮ್ಮ ಸೌಂದರ್ಯಕ್ಕೆ ಸೋತು ಶರಣಾಗೋದೆ. ಅವತ್ತೇ ಅಂದ್ಕೊಂಡೆ, ಈ ನನ್ನ ಹೃದಯ ಸಾಮ್ರಾಜ್ಯದ ಅಂತಃಪುರಕ್ಕೆ ನೀವೇ ಪಟ್ಟದರಸಿ ಆಗಬೇಕು ಅಂತ. ನಿಮ್ಮ ಆಸೆ ಕನಸುಗಳು ಏನೇ ಇದ್ರೂ, ಅದೆಷ್ಟೇ ಇದ್ರೂ, ನೀವು ಕೇಳ್ಳೋ ಮುಂಚೇನೇ ಎಲ್ಲವನ್ನೂ ಈಡೇರಿಸ್ಬೇಕು ಅಂತ ಪಣ ತೊಟ್ಟಿರೋದು ಅಷ್ಟೇ ನಿಜ!
ನಾನು ಬಡವ ಇರಬಹುದು, ಆದ್ರೆ ಮೂರ್ ಹೊತ್ತೂ ಪ್ರೀತಿಯಿಂದ ಕೈ ತುತ್ತು ಕೊಟ್ಟು ಸಾಕ್ತೀನಿ. ನನ್ನಿಂದ ಇನ್ನೊಂದು ತಾಜ್‌ಮಹಲ… ಕಟೊಕೆ ಆಗ್ದೇ ಇರಬಹುದು, ಆದ್ರೆ ಸಣ್ಣದೊಂದು ಅರಮನೆ ಕಟ್ಟಿ ನಿಮ್ಮನ್ನು ಖುಷಿಯಾಗಿಡ್ತೀನಿ. ನಿಮ್ಮ ತಂದೆ ತಾಯಿ ನಿಮ್ಗೆಷ್ಟು ಪ್ರೀತಿ ಕೊಟ್ಟಿದ್ದಾರೋ, ಅಷ್ಟೇ ಪ್ರೀತಿಯನ್ನು ಅಥವಾ ಅದಕ್ಕಿಂತ ತುಸು ಹೆಚ್ಚೇ ಪ್ರೀತಿಯನ್ನು ನಿಮಗೆ ಧಾರೆ ಎರಿತೀನಿ ಅನ್ನೋ ಆತ್ಮವಿಶ್ವಾಸ ನನಗಿದೆ.
ಯಾಕಂದ್ರೆ ನಿಮ್ಗೆ ಕಾಳಜಿ, ರಕ್ಷಣೆ ನೀಡೋ ಅಪ್ಪಾನೂ ನಾನೇ, ಪ್ರತಿಕ್ಷಣ ಮಮತೆಯಿಂದ ಪ್ರೀತ್ಸೋ ಅಮ್ಮಾನು ನಾನೇ ಆಗಿ ಕೊನೆವಗೂ ನನ್ ಉಸಿರೊಳಗೆ ನಿಮ್ಮ ಜೀವವಿಟ್ಟು ಮುದ್ದು ಮಗುವಂತೆ ಕಾಪಾಡ್ತೀನಿ.
ಟ್ರಸ್ಟ್ ಮಿ!
ಪ್ರೀತಿಯಿಂದ ಮಂಡಿಯೂರಿ ಹೇಳ್ತಿದೀನಿ, “ಐ ಲವ್ ಯೂ ರೀ’
ಪುರುಷೋತ್ತಮ್ ವೆಂಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.