ಹಣಕಾಸಿನ ಕೊರತೆ: ಕೆರೆ ಕಾಮಗಾರಿ ಅಂತ್ಯ?
Team Udayavani, Apr 1, 2019, 5:54 PM IST
ಸಾಗರ: ನಗರದ ಸಾಗರ ತಾಲೂಕು ಜೀವಜಲ ಕಾರ್ಯಪಡೆ ಹಾಗೂ ಸ್ವಾನ್ ಆ್ಯಂಡ್ ಮ್ಯಾನ್ ಸಂಸ್ಥೆಯ ಸಹಯೋಗದಲ್ಲಿ ನಡೆಯುತ್ತಿದ್ದ ಕಲ್ಮನೆ ಗ್ರಾಪಂ ವ್ಯಾಪ್ತಿಯ ಚಿಪ್ಳಿಲಿಂಗದಹಳ್ಳಿಯ ಬಂಗಾರಮ್ಮನ ಕೆರೆಯ ಹೂಳು ತೆಗೆಯುವ ಕಾಮಗಾರಿ ಸೋಮವಾರ ಮತ್ತೂಮ್ಮೆ ಹಣಕಾಸಿನ ಕೊರತೆಯ ಹಿನ್ನೆಲೆಯಲ್ಲಿ ಸ್ಥಗಿತಗೊಳ್ಳುವ ಅಪಾಯ ಎದುರಾಗಿದೆ.
ದಿನಕ್ಕೆ 37 ಸಾವಿರ ರೂ.ಗಳಷ್ಟು ವೆಚ್ಚ ಬೀಳುವ ಈ ಹೂಳು ತೆಗೆಯುವ ಎರಡನೇ ಹಂತದ ಕಾಮಗಾರಿ ಕಳೆದ 14 ದಿನಗಳಿಂದ ನಡೆದಿದೆ. ಈಗಾಗಲೇ ಆರು ಲಕ್ಷ ರೂ. ಗಳಷ್ಟು ಹಣ ಬಳಕೆಯಾಗಿದೆ. ಹೊಸ ಆರ್ಥಿಕ ಮೂಲಗಳಿಂದ ಸಹಾಯ ಲಭಿಸದೆ ಕಾಮಗಾರಿ ಮುಂದುವರಿಸುವುದು ಬೇಡ ಎಂದು ಸಾಗರ ತಾಲೂಕು ಜೀವಜಲ ಕಾರ್ಯಪಡೆ ನಿರ್ಧರಿಸಿದೆ.
2017ರಲ್ಲಿ ಹಿರಿಯ ಸಾಹಿತಿ ನಾ. ಡಿಸೋಜಾ, ತಾಲೂಕಿನ ಎಸಿ, ಡಿವೈಎಸ್‌ಪಿ ಮೊದಲಾದವರನ್ನು ಒಳಗೊಂಡ ಜೀವಜಲ ಕಾರ್ಯಪಡೆ ಹೊಸ ಹುಮ್ಮಸ್ಸಿನಿಂದ ಲಿಂಗದಹಳ್ಳಿಯ ಕೆರೆ ಹೂಳೆತ್ತುವ ಕಾರ್ಯ ಸುಮಾರು 11.5 ಲಕ್ಷ ರೂ.ಗಳ ವೆಚ್ಚ ಮಾಡಿಯೂ ಶೇ. 30ರಷ್ಟು ಮಾತ್ರ ಸಾಗಿತ್ತು. ಈ ವರ್ಷ ಕರ್ನಾಟಕ ಬ್ಯಾಂಕ್ ಐದು ಲಕ್ಷ ರೂ. ಸಹಾಯ ಧನ ಒದಗಿಸಿದ ಹಿನ್ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿ ನಡೆದಿದ್ದು, ಶೇ. 75ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಕಾರ್ಯಪಡೆಯ ಅಖೀಲೇಶ್ ಚಿಪ್ಳಿ ಪತ್ರಿಕೆಯೊಂದಿಗೆ ಮಾತನಾಡಿ, ಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಬಂಗಾರಮ್ಮನ ಕೆರೆಯ ವಿಷಯ ಪ್ರಸ್ತಾಪವಾದ ನಂತರದಲ್ಲಿ ಸ್ವಲ್ಪ ಮಟ್ಟಿನ ಧನಸಹಾಯದ ಭರವಸೆಗಳು ವ್ಯಕ್ತವಾಗಿವೆ. ಕೆಲವರು ಸ್ವಯಂಪ್ರೇರಿತವಾಗಿ ಕರೆ ಮಾಡಿ ಈ ರೀತಿಯ ಸಾಮಾಜಿಕ ಕಾರ್ಯಯೋಜನೆಗಳಿಗೆ ಧನಸಹಾಯ ಒದಗಿಸುವ ಸರ್ಕಾರೇತರ ಸಂಸ್ಥೆಗಳ ನೆರವನ್ನು ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ನಾವೂ ಕೂಡ ವೈಯಕ್ತಿಕ ಮಟ್ಟದಲ್ಲಿ ಸಿಗಬಹುದಾದ ಹಣಕಾಸು ನೆರವಿಗೆ ಸಂಪರ್ಕ ನಡೆಸಿದ್ದೇವೆ ಎಂದರು.
ಈ ಬಾರಿಯ ಹಣ ಸಂಗ್ರಹವಾಗುವ ವಿಶ್ವಾಸವಿದೆ. ಅದನ್ನು ಆಧರಿಸಿ ಇನ್ನಷ್ಟು ದಿನ ಕಾಮಗಾರಿ ಮುಂದುವರಿಸಲು ಕೆಲವರು ಸಲಹೆ ನೀಡುತ್ತಿದ್ದಾರೆ. ಆದರೆ ಕಳೆದ ಬಾರಿ ಕಾಮಗಾರಿ ಆರಂಭಿಸಿ, ಹಣ ಸಂಗ್ರಹವಾಗುವ ಭರವಸೆಯ ಮೇಲೆ ಚಟುವಟಿಕೆಯನ್ನು ಧೈರ್ಯದಿಂದ ಮುಂದುವರಿಸಿದ್ದೆವು. ನಂತರದ ದಿನಗಳಲ್ಲಿ ಬಾಕಿ ಬಿಲ್‌ಗಳ ಪಾವತಿಗೆ ನಾವು ಬಹಳ ಶ್ರಮ ಪಡಬೇಕಾಯಿತು. ಈ ಹಂತದಲ್ಲಿ ಆ ಅಪಾಯವನ್ನು ತಂದುಕೊಳ್ಳುವ ಕೆಲಸ ಮಾಡುವುದು ಬೇಡ ಎಂದು ಕಾರ್ಯಪಡೆಯ ಸದಸ್ಯರು ತೀರ್ಮಾನಿಸಿದ್ದೇವೆ. ಒಂದೊಮ್ಮೆ ತಕ್ಷಣದಲ್ಲಿ ಹಣಕಾಸಿನ ನೆರವು ಹರಿದುಬಂದರೆ ವಿಳಂಬವಿಲ್ಲದೆ ಈ ವರ್ಷವೇ ಕಾಮಗಾರಿ ಪೂರೈಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.