ಮತದಾನ ಸಂದೇಶ ಸಾರಿದ ಗಾಳಿಪಟಗಳು
Team Udayavani, Apr 2, 2019, 6:30 AM IST
ಮಲ್ಪೆ: ಮಲ್ಪೆಯ ಕಡಲತೀರದಲ್ಲಿ ಶನಿವಾರ ಸಂಜೆ ವಿಹರಿಸಲು ಬಂದವರಿಗೆ ಆಶ್ಚರ್ಯ ಕಾದಿತ್ತು, ಕಡಲತೀರದಲ್ಲಿ ಅಂಗವಿಕಲರ ಬೆ„ಕ್ ರ್ಯಾಲಿ, ಅಂಗವಿಕಲ ಮಕ್ಕಳ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ, ಬಾನಂಗಳದಲ್ಲಿ ಮತದಾನ ಸಂದೇಶ ಸಾರುವ ಅತ್ಯಾಕರ್ಷಕ ಗಾಳಿಪಟಗಳ ಹಾರಾಟ, ನೆರೆದಿದ್ದ ಸಾರ್ವಜನಿಕರಲ್ಲಿ ಮತದಾನ ಜಾಗƒತಿ ಮೂಡಿಸಿದವು.
ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಸಹಯೋಗದಲ್ಲಿ ನಡೆದ ಮತದಾನ ಜಾಗƒತಿ ಮೂಡಿಸುವ ಕಾರ್ಯಕ್ರಮದಲ್ಲಿ, ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ವಿಕಲಚೇತನರು, ಮತದಾನ ಜಾಗƒತಿ ಮೂಡಿಸುವ ಪ್ರದರ್ಶನ
ಫಲಕಗಳನ್ನು ತಮ್ಮ ದ್ವಿಚಕ್ರ ವಾಹನಗಳಿಗೆ ಅಳವಡಿಸಿಕೊಂಡು ಮಲ್ಪೆಯಲ್ಲಿ ಮತದಾನ ಜಾಗƒತಿ ಮೂಡಿಸುವುದರ ಜೊತೆಗೆ, ಮತದಾನ ಮಾಡುವುದು ನಮ್ಮ ಜನ್ಮ ಸಿದ್ಧ ಹಕ್ಕು, ಎ.18 ರಂದು ಮರೆಯದೇ ಮತದಾನ ಮಾಡಿ ಮುಂತಾದ ಸಂದೇಶಗಳಿದ್ದ ತಮಗಾಗಿ ಸಿದ್ದಪಡಿಸಿದ್ದ ಗಾಳಿಪಟಗಳನ್ನು ಹಾರಿಸುವುದರ ಮೂಲಕ ಮತದಾನ ಸಂದೇಶ ಸಾರಿದರು.
ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಮುಂತಾದ ಕಡೆಗಳಿಂದ ಬಂದಿದ್ದ ವೃತ್ತಿಪರ ಗಾಳಿಪಟ ಹಾರಿಸುವವರು, ಟೆಡ್ಡಿಬೇರ್, ಡ್ರಾಗನ್, ರಿಂಗ್, ಸಿಂಗಲ್ ನೋಟ್, ಪೈಪ್‌ಲೆ„ನ್ ಹಾಗೂ ರಾತ್ರಿ ವೇಳೆಯಲ್ಲಿ ಕಾಣುವ ಎಲ್.ಇ.ಡಿ. ಗಾಳಿಪಟ ಸೇರಿದಂತೆ ವಿವಿಧ ರೀತಿಯ ವೈವಿಧ್ಯಮಯ ಗಾಳಿಪಟಗಳಲ್ಲಿ ಮತದಾನದ ಸಂದೇಶ ರಚಿಸಿ, ನೋಡುಗರಲ್ಲಿ ಜಾಗƒತಿ ಮೂಡಿಸಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್ ಗಾಳಿಪಟ ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಖೆ ಉಪ ನಿರ್ದೇಶಕಿ ಗ್ರೇಸಿ
ಗೊನ್ಸಾಲ್ವಿಸ್, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ರವಿವಾರ ಕೂಡಾ ಗಾಳಿಪಟಗಳ ಹಾರಾಟ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.