ಆಟಿಸಂ ಮಕ್ಕಳಿಗೆ ಭಾವನಾತ್ಮಕ ಕಾಳಜಿ ಅಗತ್ಯ


Team Udayavani, Apr 2, 2019, 11:38 AM IST

ribbon
ಇತ್ತೀಚಿನ ವರ್ಷಗಳಲ್ಲಿ ಆಟಿಸಂ ಜಾಗೃತಿ ವಿಶ್ವಾದ್ಯಂತ ಬೆಳೆದಿದೆ. ಸ್ವಲೀನತೆ ಅಥವಾ  ಆಟಿಸಂಗೆ ಹಲವು ಕಾರ ಣ ಗಳಿದ್ದು ಸಂಶೋಧನೆಗಳ ಪ್ರಕಾರ ಹುಟ್ಟಿ ನಿಂದ ಬರುವದರಲ್ಲಿ ಆನುವಂಶಿಕ ಅಂಶಗಳ ಪ್ರಾಬಲ್ಯ ಹೆಚ್ಚಿರುತ್ತದೆ. ಜೀನ್‌ಗಳು ಇದಕ್ಕೆ ಮುಖ್ಯಪಾತ್ರ ವಹಿಸುತ್ತವೆ. ವೈದ್ಯರ ಪ್ರಕಾರ ಮಕ್ಕಳು ತಾಯಿಯ ಗರ್ಭದಲ್ಲಿರುವಾಗ ಅನುಭವಿಸಿದ ಕಷ್ಟ ಅಥವಾ ಆಕೆಯ ಮೇಲೆ ಬೀರಿದ ಪ್ರಭಾವಗಳಿಂದ ಈ ರೋಗ ಬರುವ ಸಂಭವವಿರುತ್ತದೆ. ಅದಲ್ಲದೆ ರುಬೇಲಾ ಸೋಂಕಿ ನಿಂದ ಶೇ. 1 ಬರುವ ಸಾಧ್ಯತೆಗಳಿವೆ.
ಎ. 2ರಂದು ವಿಶ್ವ ಆಟಿಸ್‌ಂ ಜಾಗೃತಿ ದಿನ ಆಚರಿಸಲಾಗುತ್ತದೆ. ಯುನೈಟೆಡ್‌ ಜನರಲ್‌ ಅಸೆಂಬ್ಲಿ ಡಿಸೆಂಬರ್‌ 18, 2007ರಲ್ಲಿ ಈ ದಿನವನ್ನು ಜಾರಿಗೊಳಿಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಯಶಸ್ವಿಯಾಗಿದೆ.
ಉದ್ದೇಶ
ವಿಶ್ವಸ್ವಲೀನತೆ ಜಾಗೃತಿ ದಿನವನ್ನು ಸ್ವಲೀನತೆ ಹೊಂದಿರುವವರು ಮತ್ತು ಅವರ ಜತೆ ವಾಸಿಸುವವರಿಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಜಾಗತಿಕವಾಗಿ ಆರೋಗ್ಯ ಸಮಸ್ಯೆ ಹೆಚ್ಚುತ್ತಿರುವ ಈ ಸಮಯದಲ್ಲಿ ಸ್ವಲೀನತೆಯ ಬಗ್ಗೆ ಜನರು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗಿದೆ.
ಪಝಲ್‌ ರಿಬ್ಬನ್‌ ಅರ್ಥ
ಆಟಿಸಂ ಪೀಡಿತರ ಜಾಗೃತಿಗಾಗಿ ಸಾಂಕೇತಿಕವಾಗಿ ಪಝಲ್‌ ರಿಬ್ಬನ್‌ನ್ನು ಬಳಸಲಾಗುತ್ತದೆ. ಜೀವನದಲ್ಲಿ ನಾನು ಒಬ್ಬಂಟಿ ಅಲ್ಲ. ನನ್ನ ಅಸ್ವಸ್ಥತೆ ಇನ್ನೊಬ್ಬರಿಗೆ ಕಷ್ಟ ಕೊಡಲಾರದು. ಎಲ್ಲ ಬಣ್ಣ ಗಳು ಒಟ್ಟಾಗಿ ಇರುವಂತೆ ಎಲ್ಲ ರೊಂದಿಗೆ ನಾನು ಬೇರೆಯುತ್ತೇನೆ. ಅವರಂತೆಯೇ ನಾನು ಬದುಕುತ್ತೇನೆ ಎನ್ನುವುದು ರಿಬ್ಬನ್ನಿನ ಸಂಕೇತ. ಅದಲ್ಲದೆ ವಿವಿಧ ಬಣ್ಣ ಗಳು ಮತ್ತು ಆಕಾರಗಳು ಜನ ಮತ್ತು ಕುಟುಂಬಗಳ ವೈವಿಧ್ಯವನ್ನು ಪ್ರತಿನಿಧಿಸುತ್ತವೆ.
2018ರಲ್ಲಿ 59 ಮಕ್ಕಳಲ್ಲಿ ಒಂದು ಮಗು ಆಟಿಸ್‌ಂ ಅಸ್ವಸ್ಥತೆ ಯಿಂದ ಬಳಲುತ್ತಾರೆ ಎಂದು ತಿಳಿದು ಬಂದಿದೆ. ಬಾಲಕಿಯರಿಗಿಂತ ಬಾಲಕರಲ್ಲಿ 4 ಪಟ್ಟು ಹೆಚ್ಚು ರೋಗದ ಗುಣ ಲ ಕ್ಷ ಣ ಗಳು ಕಂಡುಬರು ತ್ತದೆ. ಇದು 2-5 ಮತ್ತು 6-8 ವಯಸ್ಸಿನಲ್ಲಿ ಹೆಚ್ಚಾಗಿ ಕಂಡು ಬರುವ ಸಾಧ್ಯತೆಗಳಿರುತ್ತವೆ. ಹಳ್ಳಿಗಳಿಗೆ ಹೋಲಿಸಿದರೆ ನಗರ ಪ್ರದೇಶದ ಮಕ್ಕಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ವಿಶ್ವಾದ್ಯಂತ ಕನಿಷ್ಠ 70 ಮಿಲಿಯನ್‌ ಮಕ್ಕಳಲ್ಲಿ ಕಂಡುಬರುತ್ತಿದ್ದು, ಭಾರತದಲ್ಲಿ 10 ಮಿಲಿಯನ್‌ ಮಕ್ಕಳಲ್ಲಿ ಕಂಡುಬರುತ್ತದೆ.
ದಕ್ಷಿಣ ಕನ್ನಡ 2,000 ಮಕ್ಕಳಲ್ಲಿ ಸಮಸ್ಯೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2,000 ಮಕ್ಕಳು ಆಟಿಸಂ ಸಮಸ್ಯೆಯಿಂದ ಬಳಲುತ್ತಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆಟಿಸಂ ರೋಗಕ್ಕೆ ಒಳಗಾದ ಮಕ್ಕಳ ಚಿಕಿತ್ಸೆ-ಆರೈಕೆಯಲ್ಲಿ ಹಲವು ಆಸ್ಪತ್ರೆ, ಎನ್‌ಜಿಒಗಳು ತೊಡಗಿಸಿಕೊಂಡಿವೆೆ. ಪ್ರಸ್ತುತ ಮಂಗಳೂರಿನಲ್ಲಿ ಆಟಿಸಂ ಮಕ್ಕಳಿಗೆ ಶಿಕ್ಷಣ ನೀಡುವ ಸುಮಾರು 3 ಪ್ರಮುಖ ಶಾಲೆಗಳಿವೆ. ಸಾನಿಧ್ಯ ವಸತಿ ಯುತ ಶಾಲೆ, ಚೇತನಾ ಚೈಲ್ಡ್‌ ಡೆವಲಪ್‌ಮೆಂಟ್‌ ಸೆಂಟರ್‌, ಆ್ಯಗ್ನೆಸ್‌ ವಿಶೇಷ ಶಾಲೆಯು ಆಟಿಸಂ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೆಲಸ ಮಾಡು ತ್ತಿದೆ. ಇನ್ನುಳಿದಂತೆ ಅರಿವು ಟ್ರಸ್ಟ್‌, ಅನಿರ್ವೇದ ಎನ್‌ಜಿಒಗಳು ಆಟಿಸಂ ಲಕ್ಷಣ ಕಂಡು ಬಂದ ಮಕ್ಕಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿವೆ. ಇಷ್ಟು ಮಾತ್ರವಲ್ಲದೆ ಹಲವು ಖಾಸಗಿ ಸಂಸ್ಥೆಗಳು ಆಟಿಸಂ ಮಕ್ಕಳಿಗೆ ಶಿಕ್ಷಣ, ತರಬೇತಿ ನೀಡುತ್ತಿವೆ. ಆಟಿಸಂ ಮಕ್ಕಳಲ್ಲಿ ಮಾತಿನ ಸಮಸ್ಯೆ, ವರ್ತನೆಯಲ್ಲಿ ಸಾಮಾನ್ಯ ಮಕ್ಕಳಿಗಿಂತ ಕೊಂಚ ವಿಭಿನ್ನತೆ ಇರುವುದರಿಂದ ಅವರಿಗೆ ಮಾತು, ನಡುವಳಿಕೆಯ ಬಗ್ಗೆ ತರಬೇತಿ ನೀಡುವ ಸಲುವಾಗಿ ಸ್ಪೀಚ್‌ ಆ್ಯಂಡ್‌ ಬಿಹೇವಿಯರಲ್‌ ಥೆರಪಿ ಮಾಡಿಸುವ ಅನೇಕ ಖಾಸಗಿ ಆಸ್ಪತ್ರೆಗಳು ನಗರದಲ್ಲಿ ಕಾರ್ಯಾಚರಿಸುತ್ತಿವೆ.
ಆಟಿಸಂನಿಂದ ಬಳಲುವ ಮಕ್ಕಳು ಪ್ರತಿಕ್ರಿಯಿಸುವುದಿಲ್ಲ 
ಸಾಮಾನ್ಯವಾಗಿ ಮಗು, ತಾಯಿ, ಇತರರ ಮುಖ ನೋಡಿ ಪ್ರತಿಕ್ರಿಯೆ ನೀಡುತ್ತದೆ. ಆದರೆ ಆಟಿಸಂನಿಂದ ಬಳಲುವ ಮಕ್ಕಳು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.ಆಟಿಸಂನಿಂದ ಬಳಲುವ ಮಕ್ಕಳು ಮಾತು ಕೇಳಿಯೂ ಪ್ರತಿಕ್ರಿಯೆ ನೀಡುವುದಿಲ್ಲ. ರೋಗದಿಂದ ಬಳಲುವ ಮಕ್ಕಳು ಬೇರೆಯವರ ಜತೆ ಬೆರೆಯುವುದು ಕಡಿಮೆ. ಒಬ್ಬಂಟಿಯಾಗಿರಲು ಇಚ್ಛಿಸುವ ಮಕ್ಕಳು, ಒಂದೇ ವಸ್ತುವಿನ ಮೇಲೆ ಲಕ್ಷ್ಯ ಇಟ್ಟಿರುತ್ತಾರೆ. ಅವರ ಚಿಂತನೆ ಅಭಿವೃದ್ಧಿಯಾಗದಿರುವ ಕಾರಣ ಅವರು ಸೃಜನಶೀಲರಾಗಿರುವುದಿಲ್ಲ.
ಒಂಬತ್ತು ತಿಂಗಳಾದರೂ ಮಗು ನಗುತ್ತಿಲ್ಲ, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದಾದರೆ ಇದು ಆಟಿಸಂ ಲಕ್ಷಣವಾಗಿರುವ ಸಾಧ್ಯತೆಯಿರುತ್ತದೆ. ಈ ಲಕ್ಷಣಗಳು ಮಕ್ಕ ಳಲ್ಲಿ ಕಂಡು ಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಯಾಕೆಂದರೆ ಒಂದು ಹಂತದ ಬಳಿಕ ಚಿಕಿತ್ಸೆ ನೀಡುವುದು ಕೂಡ ಕಷ್ಟ. ಸಾಮಾನ್ಯವಾಗಿ 2 ವರ್ಷಗಳಾದಾಗ ಮಗುವಿನಲ್ಲಿ ಆಟಿಸಂ ಲಕ್ಷಣಗಳು ಕಂಡು ಬರುತ್ತವೆ. ಆ ವೇಳೆಗೆ ಮಕ್ಕಳನ್ನು ಆಟಿಸಂ ಸಂಬಂಧಿತ ತರಬೇತಿ ಕೇಂದ್ರಗಳಿಗೆ ಹಾಕಿದರೆ, ಸುಮಾರು 1 ವರ್ಷದ ಬಳಿಕ ಮಗು ಇತರ ಮಕ್ಕಳೊಂದಿಗೆ ಬೆರೆಯಲು ಸಾಧ್ಯವಾಗುತ್ತದೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಅವರಲ್ಲಿ ಕಲಿಯುವ ಆಸಕ್ತಿ, ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ ಎಂಬುದಾಗಿ ಆಟಿಸಂ ತರಬೇತುದಾರರು ಹೇಳುತ್ತಾರೆ.
ಆಟಿಸಂ ಎಂದರೇನು?
ಆಟಿಸಂ (ಸ್ವಲೀನತೆ)ಎಂಬುದು ಚಿಕ್ಕ ಮಕ್ಕ ಳಲ್ಲಿ ಕಂಡುಬರುವ ಅಸ್ವ ಸ್ಥತೆ. ಅಂತಹ ಮಕ್ಕ ಳಲ್ಲಿ ಬುದ್ಧಿ ಮಟ್ಟ ಅತೀ ಕಡಿಮೆ ಇರಲಿದ್ದು, ಸಾಮಾನ್ಯವಾಗಿ ಎಲ್ಲ ಮಕ್ಕಳಿರುವಂತೆ ಇರುವುದಿಲ್ಲ. ಆರು ತಿಂಗಳ ಅನಂತರ ರೋಗ ಪರಿಣಾಮಕಾರಿಯಾಗಿ ಕಾಣಿಸಿಕೊಳಲಿದ್ದು, ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ರೋಗದ ಲಕ್ಷ ಣ ಗಳು ಹೆಚ್ಚಾ ಗುತ್ತವೆ. ಉಪಶಮನವಾಗಲು ಯಾವುದೇ ಚಿಕಿತ್ಸೆಗಳಿಲ್ಲದಿದ್ದರೂ ಅಸ್ವಸ್ಥತೆ ಹೆಚ್ಚಾಗದಂತೆ ತಡೆಯಬಹುದಾಗಿದೆ.
ರೋಗದ ಲಕ್ಷಣಗಳು 
ಮೆದುಳು ಮತ್ತು ನರವ್ಯೂಹದ ಮೇಲೆ ಬೀರುವ ಪರಿಣಾಮದಿಂದಾಗಿ ಆಟಿಸ್‌ಂ ಪೀಡಿತ ಮಕ್ಕಳು ಭಾವ ನಾ ತ್ಮಕ ವಾಗಿ ಹಾಗೂ ಸಾಮಾಜಿಕವಾಗಿ ಸ್ಪಂದಿಸುವುದಿಲ್ಲ. ಇವ ರಲ್ಲಿ ದೃಷ್ಟಿ ಸಂಪರ್ಕ ಕಳಪೆ ಮಟ್ಟದಲ್ಲಿರುತ್ತದೆ. ಪುನರಾವರ್ತಿತ ನಡವಳಿಕೆಗಳು ಇವರಲ್ಲಿ ಹೆಚ್ಚುಕಾಣಬಹುದು. ಉದಾಹರಣೆಗೆ ನಾವು ಒಂದು ಪದ್ಯವನ್ನು ಕೇಳಿ ಒಂದೋ ಎರಡೋ ಬಾರಿ ಗುನುಗುತ್ತೇವೆ. ಆದರೆ ಈ ಮಕ್ಕಳು ಅದನ್ನು ಹೇಳಿದ ಹಾಡನೇ ಪುನಃ ಪುನಃ ಹೇಳು ತ್ತೀರು ತ್ತಾರೆ. ಇಂದು ತಿಂದ ತಿಂಡಿ ಇಷ್ಟ ವಾ ಯಿ ತೆಂದರೆ ಹಠ ಮಾಡಿಯಾದರೂ ಪ್ರತಿ ದಿನ ಅದನ್ನೇ ತಿನ್ನು ತ್ತಾರೆ. ಆಟಿಸ್‌ಂ ಪೀಡಿತ ಮಕ್ಕ ಳ ಲ್ಲಿ ಗ್ರಹಿ ಸುವ ಶಕ್ತಿ ಕೂಡ ತುಂಬಾ ಕಡಿಮೆ ಇರ ಲಿದ್ದು, ಹೇಳಿದ ಮಾತು ಗ ಳಿಗೆ ಅರ್ಧ ಒಂದು ಗಂಟೆಯ ಬಳಿಕ ಉತ್ತ ರಿ ಸು ತ್ತಾರೆ. ಅದ ಲ್ಲದೆ ಯಾವುದೇ ವಾಕ್ಯ ಗ ಳನ್ನು ಸಂಪೂ ರ್ಣ ಮಾಡದೇ ಅರ್ಧಕ್ಕೆ ನಿಲ್ಲಿ ಸು ವುದು ಅಥವಾ ಅರ್ಥವಾ ಗದ ರೀತಿ ಯಲ್ಲಿ ಎರ ಡೆ ರಡು ಶಬ್ದ ಗ ಳಿಗೆ ತುಂಬಾ ಅಂತರ ನೀಡಿ ಮಾತ ನಾ ಡು ವುದು. ಮಾಡಿದ ಕೆಲಸ ಅಥವಾ ತನ್ನ ಸುತ್ತಮುತ್ತ ಸ್ವತ್ಛ ವಾಗಿ ಇಟ್ಟು ಕೊ ಳ್ಳ ದಿ ರು ವುದು ಇದರ ಮುಖ್ಯ ಗುಣ ಲಕ್ಷ ಣ.
ಆಟಿಸಂ ಮಕ್ಕಳನ್ನು ಪ್ರೀತಿಸಿ
ಆಟಿಸಂ ಇರುವ ಮಕ್ಕಳು ಹುಟ್ಟಿದಾಗ, ಹೆತ್ತವರು ತುಂಬಾ ಪ್ರೀತಿ-ವಾತ್ಸಲ್ಯದಿಂದ ಆರೈಕೆ ಮಾಡ ಬೇಕು. ಸಮಾಜ ಅಥವಾ ಮನೆಯಲ್ಲಿ ಅವರನ್ನು ನಿರ್ಲಕ್ಷಿಸ ಬಾರದು. ಆ ಮಕ್ಕಳನ್ನು ಕೂಡ ಎಲ್ಲ ಮಕ್ಕ ಳಂತೆ ಸಮಾಜದಲ್ಲಿ ಬಹಳ ಗೌರವ, ಮುತುವರ್ಜಿಯಿಂದ ಸಾಕಿ ಬೆಳೆಸಬೇಕಾದ ಜವಾ ಬ್ದಾರಿ ಯಿದೆ. ಅವರಿಗೆ ಸೂಕ್ತ ಚಿಕಿತ್ಸೆ- ತರಬೇತಿ ಜತೆಗೆ, ಅಂತಹ ಮಕ್ಕಳು ಇರುವ ಶಾಲೆಗೆ ಸೇರಿಸಿ ಅಗತ್ಯ ಶಿಕ್ಷಣ ನೀಡುಬೇಕು. ಎಲ್ಲ ಆಟಿಸಂ ಮಕ್ಕಳನ್ನು ಹೆತ್ತವರ ಜತೆಗೆ ಸಮಾಜ ಕೂಡ ಪ್ರೀತಿಯಿಂದ ಕಾಣಬೇಕು.
ತರಬೇತಿ ನೀಡಿ
ಆಟಿಸಂ ಲಕ್ಷಣ ಕಂಡಬಂದ ಮಕ್ಕಳಿಗೆ ತರಬೇತಿ ನೀಡದೆ ಇತರ ಮಕ್ಕಳು ಕಲಿಯುವ ಶಾಲೆಗೆ ಸೇರಿಸಿದರೆ ಅವರು ಮಾನಸಿಕವಾಗಿ ಇನ್ನಷ್ಟು ಕ್ಷೀಣಿಸುವ ಸಾಧ್ಯತೆ ಇದೆ. ಅವರಿಗೆ ಇತರ ಮಕ್ಕಳೊಂದಿಗೆ ಬೆರೆಯುವ ಗುಣ ಇರುವುದಿಲ್ಲ. ಹಾಗಾಗಿ ಅಂಥ‌ಹವರನ್ನು ಮೊದಲು ಆಟಿಸಂ ತರಬೇತಿ ಕೇಂದ್ರಗಳಿಗೆ ಸೇರಿಸಿ.
– ಪೂರ್ಣಿಮಾ ಭಟ್‌, ಅರಿವು ಟ್ರಸ್ಟ್‌, ಶಕ್ತಿನಗರ
ಸೂಕ್ತ ಚಿಕಿತ್ಸೆ ನೀಡಿ 
ಸಾಮಾನ್ಯವಾಗಿ ಮಕ್ಕಳಲ್ಲಿ 12ರಿಂದ 18 ತಿಂಗಳಲ್ಲಿ ಆಟಿಸಂ ಲಕ್ಷಣಗಳು ಗೋಚರಿಸುತ್ತವೆೆ. ಅವನ್ನು ಹೆತ್ತವರು ಶೀಘ್ರ ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ನೀಡಿದಾಗ ಆಟಿಸಂನಿಂದ ಬಳಲುವ ಮಕ್ಕಳನ್ನು ಸಾಮಾನ್ಯ ಮಕ್ಕಳಂತೆ ಮಾಡಬಹುದಾಗಿದೆ.
– ಡಾ| ರಧೀಶ್‌, ಕೆಎಂಸಿ ಆಸ್ಪತ್ರೆಯ ವಾಕ್‌ ಶ್ರವಣ ವಿಭಾಗದ ಮುಖ್ಯಸ್ಥ

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.