ರಾತೋರಾತ್ರಿ ಬಾವಿಯಲ್ಲಿ ಉಕ್ಕಿದಳು ಗಂಗೆ!

ಕಡು ಬೇಸಗೆಯಲ್ಲೂ ಪುಷ್ಪಗಿರಿ ತಪ್ಪಲಿನ ಬಾವಿಯಲ್ಲೊಂದು ವಿಸ್ಮಯ!

Team Udayavani, Apr 2, 2019, 12:40 PM IST

0104SUB1A
ಸುಬ್ರಹ್ಮಣ್ಯ : ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಕೃಷಿಕ ಹೊನ್ನಪ್ಪ ಕೊಂದಾಳ ಅವರ ಪಾಲಿಗೆ ರವಿವಾರ ಶುಭ ದಿನವಾಗಿತ್ತು. ಬೇಸಗೆಯ ತಾಪ ಹೆಚ್ಚಿ ಕುಡಿಯಲು ನೀರಿಲ್ಲ ಎಂದು ಪರಿತಪಿಸುತ್ತಿದ್ದ ಸಮಯದಲ್ಲೇ ಅವರ ಬಾವಿಯಲ್ಲಿ ದಿಢೀರ್‌ ನೀರು ಉಕ್ಕಿ ಬಂದಿತ್ತು.
ಎ. 1 ಮೂರ್ಖರ ದಿನವಾದ ಕಾರಣ ಹೆಚ್ಚಿನವರು ಈ ಸುದ್ದಿ ಸುಳ್ಳೆಂದು ಭಾವಿಸಿದ್ದರು. ಹೊನ್ನಪ್ಪ ಗೌಡರು ಕುಟುಂಬ ಸದಸ್ಯರ ಜತೆ ರವಿವಾರ ತರವಾಡು ಮನೆಗೆ ತೆರಳಿದ್ದರು. ರಾತ್ರಿ ಮನೆ ತಲುಪಿದ ವೇಳೆಗೆ ಈ ಅಚ್ಚರಿ ಕಾದಿತ್ತು. ಮನೆಯ ಎದುರು ಭಾಗದಲ್ಲಿ ಇದ್ದ ತಮ್ಮ ಬಾವಿಯೊಳಗಿನಿಂದ ಏನೋ ಸದ್ದು ಕೇಳಿ ಬರುತ್ತಿದ್ದುದನ್ನು ಕೇಳಿ ಬಾವಿ ಬಳಿ ತೆರಳಿ ಇಣುಕಿ ನೋಡಿದರೆ ಅಲ್ಲಿ ಕೌತುಕದ ಸಂಗತಿ ಕಂಡುಬಂತು. ಬತ್ತಿ ಹೋಗಿ ಒಂದು ಕೊಡ ನೀರು ಸಿಗುವುದೂ ಕಷ್ಟ ಎನ್ನುವ ಸ್ಥಿತಿಯಲ್ಲಿದ್ದ ಬಾವಿಯಲ್ಲಿ ಸಾಕಷ್ಟು ನೀರು ಶೇಖರಣೆಗೊಂಡಿತ್ತು. 12 ಅಡಿ ಆಳವಿರುವ ಬಾವಿಯಲ್ಲಿ 3 ಅಡಿಯಷ್ಟು ನೀರು ಸಂಗ್ರಹಗೊಂಡಿತ್ತು. ಬಾವಿಯ ಸುತ್ತಲೂ ಮೂರು ಕಡೆಗಳಿಂದ ಒರತೆ ಬರುತ್ತಿದೆ.
ನೀರಿಲ್ಲದೆ ಕಂಗಲಾಗಿದ್ದ ಈ ಪರಿಸರದ ಜನರಿಗೆ ಇದು ಹೊಸ ಭರವಸೆಯನ್ನು ಚಿಮ್ಮಿಸಿದೆ. ಬೆಟ್ಟ-ಗುಡ್ಡಗಳಿಂದ ಆವೃತ ವಾದ ಈ ಭಾಗದಲ್ಲಿ ಜಲಮೂಲಗಳಾದ ನದಿ, ತೊರೆ, ಹಳ್ಳ ಹೀಗೆ ನೀರಿನ ಕಣಿಯೇ ಇದ್ದರೂ ಇತ್ತೀಚಿನ ವರ್ಷಗಳಲ್ಲಿ ಪ್ರಾಕೃತಿಕ ವೈಪರೀತ್ಯದಿಂದಾಗಿ ನೀರಿನ ಕೊರತೆ ಎದುರಿಸುವ ಸ್ಥಿತಿ ಬಂದಿದೆ.
ಕೃಷಿಕರು ಹೆಚ್ಚಿರುವ ಈ ಭಾಗದಲ್ಲಿ ಪ್ರತಿ ವರ್ಷ ನೀರಿನ ಕೊರತೆ ಕಂಡುಬರುತ್ತಿದ್ದರೂ ಕುಡಿಯಲು ತಾಪತ್ರಯ ಬರುವುದು ಕಡಿಮೆ. ಇತ್ತೀಚಿನ ಒಂದೆರಡು ವರ್ಷಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ.
ಹಲವು ಮನೆಗಳಿಗೆ ಆಸರೆ
ರವಿವಾರ ರಾತ್ರಿ ಆರಂಭವಾದ ನೀರ ಸೆಲೆ ಸೋಮವಾರವೂ ಮುಂದುವರಿದಿದೆ. ಕ್ಷಣದಿಂದ ಕ್ಷಣಕ್ಕೆ ನೀರಿನ ಮಟ್ಟ ಏರುತ್ತಲೆ ಇದೆ. ಜತೆಗೆ ಸಮತೋಲನ ಕಾಯ್ದುಕೊಳ್ಳುತ್ತಿದೆ. ಈ ಬಾವಿಯನ್ನು 1989ರಲ್ಲಿ ಕೊರೆಯಲಾಗಿದೆ. ಇದುವರೆಗೆ ಪ್ರತಿ ಬೇಸಗೆಯಲ್ಲಿ ಬಾವಿಯಲ್ಲಿ ನೀರು ಇಂಗುತ್ತಿತ್ತು. ನೆರೆಹೊರೆಯ ಏಳೆಂಟು ಮನೆಯವರು ನಿತ್ಯ ಇದೇ ಬಾವಿಯಿಂದ ನೀರು ಪಡೆದು ಬಳಸುತ್ತಿದ್ದರು. ದಿಢೀರನೆ ಬಾವಿಯಲ್ಲಿ ನೀರು ಚಿಮ್ಮುವ ಸುದ್ದಿ ತಿಳಿದು ಸುತ್ತಲ ಗ್ರಾಮಗಳ ಜನರು ಸೋಮವಾರ ಬೆಳಗ್ಗೆಯಿಂದ‌ ಧಾವಿಸಿ ಬಂದು ನೋಡುತ್ತಿದ್ದಾರೆ. ಪರಿಸರದಲ್ಲಿ ಕೊಳವೆ ಬಾವಿಗಳು ಅನೇಕ ಇದ್ದರೂ, ಬಾವಿಗೆ ಹತ್ತಿರವಾಗಿಲ್ಲ. ಘಟನೆ ಬಳಿಕ ಪರಿಸರದ ಇತರೆ ನಿವಾಸಿಗಳ ಬಾವಿಗಳಲ್ಲಿ ನೀರಿನ ಮಟ್ಟದಲ್ಲಿ ವ್ಯತ್ಯಯವಾಗಿಲ್ಲ. ಘಟನೆ ನಡೆದಿರುವ ಪ್ರದೇಶವು ಪಶ್ಚಿಮ ಘಟ್ಟ ತಪ್ಪಲಿನ ಕೊಡಗು ಮತ್ತು ದ.ಕ. ಗಡಿಭಾಗದ ಗ್ರಾಮಕ್ಕೆ ಸೇರಿದೆ. ಪುಷ್ಪಗಿರಿ ತಪ್ಪಲಿನ ಕಾಡುಗಳಿರುವ ಭೂಪ್ರದೇಶ ಇದಾಗಿದೆ.
ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್‌ ತೆರೆದೀರಿ ಜೋಕೆ!

2-vitla

Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Ranking: ಐಸಿಸಿ ನೂತನ ರ್‍ಯಾಂಕಿಂಗ್‌ ಪ್ರಕಟ: ಶಾಹೀನ್‌ ಅಫ್ರಿದಿ ಮತ್ತೆ ನಂ.1

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Hockey: ವನಿತಾ ಏಷ್ಯಾ ಚಾಂಪಿಯನ್ಸ್‌ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

T20: ತಿಲಕ್‌ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.