ಉಡುಪಿ ಜಿಲ್ಲೆ: ದಿನೇ ದಿನೇ ಕುಸಿಯುತ್ತಿದೆ ಅಂತರ್ಜಲ ಮಟ್ಟ

Team Udayavani, Apr 3, 2019, 6:30 AM IST

antarjala-matta

ಕುಂದಾಪುರ: ಉತ್ತಮ ಮಳೆ ಬೀಳುವ ಜಿಲ್ಲೆಗಳಲ್ಲಿ ಒಂದಾದ, ಪಶ್ಚಿಮ ಘಟ್ಟದ ತಪ್ಪಲಿನಲ್ಲೇ ಇರುವ, ಹತ್ತಾರು ನದಿಗಳು ಹರಿಯುತ್ತಿರುವ ಉಡುಪಿಯಲ್ಲಿ ದಿನೇ ದಿನೇ ಅಂತರ್ಜಲ ಮಟ್ಟ ಕುಸಿಯುತ್ತಿದೆ.

ಕಳೆದ 2015 ರಲ್ಲಿ ಉಡುಪಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಮಾರ್ಚ್‌ ವೇಳೆಗೆ 7.19 ಮೀಟರ್‌ನಷ್ಟಿದ್ದರೆ, ಈ ವರ್ಷದ ಮಾರ್ಚ್‌ನಲ್ಲಿ ಅಂತರ್ಜಲ ಮಟ್ಟ 9.06 ದಷ್ಟು ಆಳಕ್ಕಿಳಿದಿದೆ. ಕಾರ್ಕಳ ಹಾಗೂ ಕುಂದಾಪುರ ತಾಲೂಕಿನಲ್ಲಿ ಸ್ವಲ್ಪ ಮಟ್ಟಿಗೆ ಪರಾÌಗಿಲ್ಲ ಅನ್ನಿಸಿದರೂ, ಉಡುಪಿ ತಾಲೂಕಿನಲ್ಲಂತೂ ಇದು ಇನ್ನಷ್ಟು ಆತಂಕ ಮೂಡಿಸುವಂತಿದೆ. ಇಲ್ಲಿ 2015 ರಲ್ಲಿ 6.19 ಇದ್ದರೆ, 2019 ರಲ್ಲಿ ಅಂತರ್ಜಲ 10.35 ಮೀ. ನಷ್ಟು ಆಳದಲ್ಲಿದೆ.

ಇನ್ನು ಉಡುಪಿ ತಾಲೂಕಿನಲ್ಲಿ 2019ರ ಜನವರಿಯಲ್ಲಿ 9.06 ಮೀ., ಫೆಬ್ರವರಿಯಲ್ಲಿ 10ಮೀ. ಇದ್ದ ಅಂತರ್ಜಲ ಮಟ್ಟ ಮಾರ್ಚ್‌ನಲ್ಲಿ 10.35 ಮೀ.ಗೆ ಕುಸಿದಿದೆ. ಕುಂದಾಪುರ ತಾಲೂಕಿನಲ್ಲಿ ಜನವರಿಯಲ್ಲಿ 6.83 ಮೀ., ಫೆಬ್ರವರಿಯಲ್ಲಿ 7.18 ಮೀ. ಹಾಗೂ ಮಾರ್ಚ್‌ನಲ್ಲಿ 7.48 ಮೀ. ಇದೆ. ಕಾರ್ಕಳದಲ್ಲಿ ಜನವರಿಯಲ್ಲಿ 7.22 ಮೀ., ಫೆಬ್ರವರಿಯಲ್ಲಿ 7.55 ಮೀ. ಇದ್ದ ಅಂತರ್ಜಲ ಮಟ್ಟ ಮಾರ್ಚ್‌ನಲ್ಲಿ ಒಮ್ಮಿಂದೊಮ್ಮೆಲೆ 8.21 ಕ್ಕೆ ಕುಸಿದಿರುವುದು ಅಂಕಿ – ಅಂಶಗಳ ಮೂಲಕ ಕಾಣುತ್ತದೆ.

400 ಅಡಿಯಲ್ಲಿ ನೀರು..!
ಈಗಾಗಲೇ ಜಿಲ್ಲೆಯಾದ್ಯಂತ ಬೋರ್‌ವೆಲ್‌ ಕೊರೆಯಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ದಿನಕ್ಕೆ ಸರಾಸರಿ 8-10 ಬೋರ್‌ವೆಲ್‌ಗ‌ಳನ್ನು ಕೊರೆಯಲಾಗುತ್ತಿದೆ. 4-5 ವರ್ಷಗಳ ಹಿಂದೆ 200 ರಿಂದ 250 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು, ಈಗ ಕನಿಷ್ಠ 350 ರಿಂದ 400 ಅಡಿ ಆಳದವರೆಗಾದರೂ ಕೊರೆಯಿಸಿದರೆ ಮಾತ್ರ ನೀರಿನ ಸೆಲೆ ಸಿಗುತ್ತದೆ ಎನ್ನುತ್ತಾರೆ ಭೂವಿಜ್ಞಾನಿಗಳು.

ಅಂತರ್ಜಲ ಮಟ್ಟ (ಮೀಟರ್‌ಗಳಲ್ಲಿ)
ಕಳೆದ 5 ವರ್ಷಗಳಲ್ಲಿ ಒಟ್ಟು ಉಡುಪಿ ಜಿಲ್ಲೆ ಹಾಗೂ ತಾಲೂಕುವಾರು ಮಾರ್ಚ್‌ ವೇಳೆಗೆ ಅಂತರ್ಜಲ ಮಟ್ಟ ಎಷ್ಟಿತ್ತು ಎನ್ನುವುದು ಜಿಲ್ಲಾ ಅಂತರ್ಜಲ ಇಲಾಖೆಯ ಅಂಕಿ – ಅಂಶಗಳ ಪ್ರಕಾರ ಇಲ್ಲಿದೆ.

ಕಾರಣವೇನು?
ಕಳೆದ ವರ್ಷವೂ ನೀರಿನ ಸಮಸ್ಯೆ ಎಲ್ಲ ಕಡೆಗಳಲ್ಲಿ ಇದ್ದರೂ ಕೂಡ, ಇಷ್ಟೊಂದು ಗಂಭೀರವಾಗಿರಲಿಲ್ಲ. ಇದಕ್ಕೆ ಕಾರಣ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದರೂ ಸಹ ಮಳೆ ನೀರು ಭೂಮಿಯೊಳಗೆ ಇಳಿದಿಲ್ಲ. ಅಂದರೆ ಕಾಡು, ಕೃಷಿ ಭೂಮಿಗಳು ಕಾಂಕ್ರೀಟ್‌ ಜಾಗವಾಗಿ ಪರಿವರ್ತನೆಯಾಗಿದೆ. ಅದಲ್ಲದೆ ಹಿಂದೆಲ್ಲ ಸುಗ್ಗಿ ಬೇಸಾಯ ಮಾಡುತ್ತಿದ್ದು, ಆಗ ಗದ್ದೆಯ ನೀರಿಗಾಗಿ ನದಿಗಳಲ್ಲಿ ಕಟ್ಟಗಳನ್ನು ನಿರ್ಮಿಸಿ, ನೀರನ್ನು ಸಂಗ್ರಹಿಸುತ್ತಿದ್ದರು. ಇದರಿಂದ ಅಲ್ಲಿರುವ ಸುತ್ತಮುತ್ತಲಿನ ಜಾಗದ ಅಂತರ್ಜಲ ಮಟ್ಟ ಕುಸಿಯುತ್ತಿರಲಿಲ್ಲ. ಇನ್ನು ಕಳೆದ ಬಾರಿ ಮಾರ್ಚ್‌ನಲ್ಲಿ ಒಂದೆರಡು ಮಳೆ ಬಂದಿತ್ತು. ಇದರಿಂದ ಸ್ವಲ್ಪ ಮಟ್ಟಿಗೆ ಕೃಷಿಕರಿಗೆ, ಸಹಿತ ಎಲ್ಲರಿಗೂ ಅನುಕೂಲವಾಗಿತ್ತು. ಆದರೆ ಈ ಬಾರಿ ಮಾರ್ಚ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಮಳೆ ಆಗಿಲ್ಲದಿರುವುದರಿಂದ ಅಂತರ್ಜಲ ಮಟ್ಟದ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ.

ಬದ್ಧತೆ ಇರಲಿ
ನೀರು ಬಳಕೆ ಮಾಡುವವರಿಗೂ ಮುಂದಿನ ದಿನಗಳಿಗೂ ಬೇಕು ಎನ್ನುವ ಬದ್ಧತೆ ಇರಲಿ ಹಾಗೂ ಅದಕ್ಕಾಗಿ ಅಂತರ್ಜಲ ಮಟ್ಟ ಏರಿಸಲು ಮುಂದಾಗಲಿ. ಬೋರ್‌ವೆಲ್‌ಗ‌ಳನ್ನು ಕೊರೆಯಿಸಿದ್ದರೆ, ಅದರನ್ನು ಮಳೆಗಾಲ ಸಮಯದಲ್ಲಿ ರೀಚಾರ್ಜ್‌ ಮಾಡಲಿ. ಎಲ್ಲ ಕಡೆಗಳಲ್ಲಿ ಮಳೆ ಕೊಯ್ಲು ಮಾಡಲು ಮುಂದಾಗಲಿ. ನಿಮ್ಮ – ನಿಮ್ಮ ಜಾಗದಲ್ಲಿರುವ ಮದಗ, ಕೆರೆಗಳನ್ನು ಮಳೆಗಾಲಕ್ಕೂ ಮುನ್ನ ಹೂಳೆತ್ತಿ, ಮುಂಗಾರಿನಲ್ಲಿ ನೀರು ತುಂಬುವಂತೆ ನೋಡಿಕೊಳ್ಳಿ. ಬೋರ್‌ವೆಲ್‌ಗ‌ಳಲ್ಲಿ ಸಮೃದ್ಧ ನೀರಿದ್ದರೂ, ಕೃಷಿಗೆ ನಿರಂತರ 24 ಗಂಟೆ ಹಾಕುವುದು ಸರಿಯಲ್ಲ. ದಿನಕ್ಕೆ ಬೆಳಗ್ಗೆ 4 ಸಂಜೆ ಬಳಿಕ 4 ಗಂಟೆ ನೀರು ಹಾಕುವಂತಹ ಯೋಜನೆ ಹಾಕಿಕೊಳ್ಳಿ.
– ಡಾ| ಎಂ. ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ಇಲಾಖೆ

 ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.