ಕೋಟ: 500 ಎಕ್ರೆಗೂ ಅಧಿಕ ಕೃಷಿ ಬೆಳೆಗೆ ಆತಂಕವಾಗಿರುವ ಅಂತರಗಂಗೆ


Team Udayavani, Apr 3, 2019, 6:30 AM IST

kota-500-ekare

ಕೋಟ: ಕೋಟ ಹೋಬಳಿ ವ್ಯಾಪ್ತಿಯ ವಿವಿಧ ಭಾಗದ ಸುಮಾರು 500ಎಕರೆಗೂ ಹೆಚ್ಚು ಪ್ರದೇಶದ ಕೃಷಿ ಭೂಮಿಗೆ ಮಳೆಗಾಲದಲ್ಲಿ ನೀರಿನ ಮೇಲೆ ತೇಲುವ ಅಂತರಗಂಗೆ ಎಂಬ ಜಲಕಳೆಯ ಸಮಸ್ಯೆ ಎದುರಾಗುತ್ತದೆ ಹಾಗೂ ಇದರಿಂದ ಇಲ್ಲಿ ಬೆಳೆದ ಭತ್ತದ ಬೆಳೆ ಹಾನಿಗೊಳಗಾಗುತ್ತದೆ. ಪ್ರತಿವರ್ಷ ಎದುರಾಗುವ ಈ ಸಮಸ್ಯೆಗೆ ಪರಿಹಾರ ಸಿಗದೆ ಕೃಷಿಕರು ಕಂಗಾಲಾಗುತ್ತಿದ್ದಾರೆ ಮತ್ತು ಬೇಸಾಯ ಮಾಡುವುದೇ ಕಷ್ಟ ಸಾಧ್ಯವಾಗಿದೆ. ಕೆಲವರು ಇದೇ ಕಾರಣಕ್ಕೆ ಗದ್ದೆ ಹಡವು ಹಾಕಿದ್ದಾರೆ. ಆದರೆ ಮಳೆಗಾಲಕ್ಕೆ ಮೊದಲು ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ವಿಧಾನಗಳಿಂದ ಇದನ್ನು ಹತೋಟಿಗೆ ತರಲು ಸಾಧ್ಯವಿದ್ದು ಈ ಕುರಿತು ಈ ಬಾರಿ ಯೋಜನೆ ರೂಪಿಸಬೇಕಿದೆ.

ಮಳೆಗಾಲದಲ್ಲಿ ವಿಪರೀತ ಹಾನಿ
ಮಳೆಗಾಲಕ್ಕೂ ಮೊದಲು ಆವಿ ಮಣ್ಣಿನ ಹೊಂಡ, ಕೆರೆ, ಹೊಳೆ, ತೋಡುಗಳಲ್ಲಿ ಈ ಕಲೆ ಇರುತ್ತದೆ. ಮಳೆ ಬಿದ್ದಾಕ್ಷಣ ಗಾತ್ರದಲ್ಲಿ ಹಿಗ್ಗಿಕೊಂಡು ನೆರೆ ನೀರಿನೊಂದಿಗೆ ಸೇರಿ ಕೃಷಿ ಭೂಮಿಗೆ ಲಗ್ಗೆ ಇಟ್ಟು ಭತ್ತದ ಸಸಿಯನ್ನು ನಾಶಗೊಳಿಸುತ್ತದೆ ಹಾಗೂ ಜಲಸಸ್ಯ, ಜಲಚರಗಳಿಗೂ ಕಂಟಕವಾಗುತ್ತದೆ.

ಕ್ರಮಕೈಗೊಳ್ಳಬೇಕಿದೆ ಕೃಷಿ ಇಲಾಖೆ
ಮಳೆಗಾಲಕ್ಕೆ ಮೊದಲು ನೀರಿನ ಮೂಲದಲ್ಲೇ ಇದನ್ನು ನಾಶಪಡಿಸಿ ನೀರಿನಿಂದ-ನೀರಿಗೆ ಹರಡದಂತೆ ಎಚ್ಚರಿಕೆ ವಹಿಸುವ ಮೂಲಕ, ಕಳೆನಾಶಕಗಳಾದ ಡೆ„ಕ್ವಾಟ್‌, ಪ್ಯಾರಾಕ್ವಾಟ್‌, ಗ್ಲೆ$ç´ೋಸೆಟ್‌ ಮುಂತಾದ ರಾಸಾಯನಿಕಗಳನ್ನು ಬಳಕೆ ಮತ್ತು ಸಿರಟೊಬ್ಯಾಗಸ್‌ ಸಾಲ್ವೆನಿಯಾ ಎಂಬ ದುಂಬಿಯಿಂದ ಇದನ್ನು ನಾಶಪಡಿಸ ಬಹುದು ಎನ್ನುವುದು ಕೃಷಿ ವಿಜ್ಞಾನಿಗಳ ಅಭಿಪ್ರಾಯವಾಗಿದೆ.

ನೀರಿನಿಂದ ಮೇಲೆತ್ತಿ ಗುಂಡಿ ತೆಗೆದು ಮುಚ್ಚುವುದು, ನೀರು ಮಲೀನವಾಗದಂತೆ ತಡೆಯುವುದು, ಹೊಳೆ, ತೋಡುಗಳ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವುದರ ಮೂಲಕವೂ ಹತೋಟಿಗೆ ತರಬಹುದು. ಆದರೆ ಇದನ್ನು ರೈತರಿಗೆ ಮಾಡಲು ಸಾಧ್ಯವಿಲ್ಲ. ಸ್ಥಳೀಯಾಡಳಿತ, ಕೃಷಿ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಿ ಹತೋಟಿಗೆ ಕ್ರಮಕೈಗೊಳ್ಳಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

ಇಲಾಖೆ ಸಹಕಾರ
ಜೈವಿಕ, ವೈಜ್ಞಾನಿಕ ಹಾಗೂ ಕಾಂಪೋಸ್ಟ್‌ ವಿಧಾನಗಳ ಮೂಲಕ ಅಂತರಗಂಗೆಯನ್ನು ನಾಶಪಡಿಸಬಹುದು. ಈ ಕುರಿತು ಸಂಶೋಧನೆಗಳು ಚಾಲ್ತಿಯಲ್ಲಿದೆ. ರೈತರಿಗೆ ಅಗತ್ಯ ಮಾಹಿತಿ ಹಾಗೂ ಇನ್ನಿತರ ಸಹಕಾರವನ್ನು ನೀಡಲು ಇಲಾಖೆ ಸಿದ್ಧವಿದೆ.
-ಡಾ| ಎಸ್‌.ವಿ. ಪಾಟೀಲ್‌, ಸಹ ಸಂಶೋಧನಾ ನಿರ್ದೇಶಕರು, ಕೃಷಿ ಹಾಗೂ ತೋಟಗಾರಿಕೆ ಕೇಂದ್ರ ಬ್ರಹ್ಮಾವರ

ಕೃಷಿ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮನವಿ
ಕೋಟ ಹೋಬಳಿಯ ಮಣೂರು, ಗಿಳಿಯಾರು ಜತೆಗೆ ತೆಕ್ಕಟ್ಟೆ, ಮಲ್ಯಾಡಿ, ಕೆದೂರು, ಉಳೂ¤ರು, ಹಲೂ¤ರು, ಗುಳ್ಳಾಡಿ ಗ್ರಾಮಗಳ ಸಾವಿರಾರು ಎಕ್ರೆ ಕೃಷಿಭೂಮಿಗೆ ಅಂತರಗಂಗೆಯ ಸಮಸ್ಯೆ ಇದೆ. ಪ್ರತಿ ವರ್ಷ ಮಳೆಗಾಲದಲ್ಲಿ ರೈತರು ಇದರ ಹತೋಟಿಗೆ ಕಷ್ಟಪಡುತ್ತಾರೆ. ಕೃಷಿ ಇಲಾಖೆಯವರು ಇದರ ಹತೋಟಿಗೆ ಹಲವು ವಿಧಾನಗಳನ್ನು ಸೂಚಿಸುತ್ತಾರೆ. ಆದರೆ ರೈತರಿಗೆ ಇದನ್ನು ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಾರಿ ಕೃಷಿ ಇಲಾಖೆ, ಸ್ಥಳೀಯಾಡಳಿತದೊಂದಿಗೆ ಸೇರಿ ಮಳೆಗಾಲಕ್ಕೆ ಮೊದಲು ಸಾಂಪ್ರದಾಯಿಕ, ವೈಜ್ಞಾನಿಕ ವಿಧಾನದ ಮೂಲಕ ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನಿಸಬೇಕಿದೆ. ರೈತ ಧ್ವನಿ ಸಂಘಟನೆಯ ವತಿಯಿಂದ ಈ ಕುರಿತು ರೈತರ ನಿಯೋಗ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಲಿದ್ದೇವೆ.
– ಜಯರಾಮ್‌ ಶೆಟ್ಟಿ ಮಣೂರು, ಅಧ್ಯಕ್ಷರು ರೈತಧ್ವನಿ ಸಂಘಟನೆ ಕೋಟ

– ರಾಜೇಶ ಗಾಣಿಗ ಅಚಾÉಡಿ

ಟಾಪ್ ನ್ಯೂಸ್

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-koo

Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.