ಏರಿಂಡಿಯಾ ಬಗ್ಗೆ ಅಸಮಾಧಾನ
Team Udayavani, Apr 3, 2019, 6:30 AM IST
ಚುನಾವಣಾ ಆಯೋಗದ ಷೋಕಾಸ್ ನೋಟಿಸ್‌ಗೆ ಸ್ಪಂದಿಸದ ಏರ್‌ಇಂಡಿಯಾ ವಿರುದ್ಧ ಆಯೋಗವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿಯವರ ಫೋಟೋವುಳ್ಳ ಬೋರ್ಡಿಂಗ್ ಪಾಸ್ ಅನ್ನು ಏರಿಂಡಿಯಾ ಬಳಕೆ ಮಾಡಿದ್ದನ್ನು ಪ್ರಶ್ನಿಸಿ ಆಯೋಗವು ನೋಟಿಸ್ ಜಾರಿ ಮಾಡಿತ್ತು. ಅಲ್ಲದೆ ಈ ಬಗ್ಗೆ ಉತ್ತರಿಸಲು ಗಡುವನ್ನೂ ನೀಡಿತ್ತು. ಆದರೆ, ಗಡುವು ಮುಗಿದು 2 ದಿನಗಳಾದರೂ ಏರಿಂಡಿಯಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಸ್ಥೆಗೆ ಖಡಕ್ಕಾಗಿ ಪತ್ರ ಬರೆದಿರುವ ಆಯೋಗ, “ನಮ್ಮ ಕಾನೂನುಬದ್ಧ ಸೂಚನೆಯನ್ನು ಪಾಲಿಸದೇ ಇರುವ ನಿಮ್ಮ ವರ್ತನೆಯಿಂದ ಅಸಮಾಧಾನವಾಗಿದೆ. ಒಂದು ವಾರದೊಳಗೆ ಸಂಬಂಧಪಟ್ಟ ಅಧಿಕಾರಿ ನಮ್ಮ ಮುಂದೆ ಹಾಜರಾಗಬೇಕು. ಇಲ್ಲದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.