ದೋಣಿಗೆ ಹಡಗು ಢಿಕ್ಕಿ : ಮೀನುಗಾರರು ಪಾರು
Team Udayavani, Apr 3, 2019, 6:30 AM IST
ಮಂಗಳೂರು/ಮಲ್ಪೆ: ಮೀನುಗಾರಿಕೆ ದೋಣಿಗೆ ಸಮುದ್ರದಲ್ಲಿ ಹಡಗು ಢಿಕ್ಕಿಯಾದ ಘಟನೆ ಮಾ. 29ರಂದು ಸಂಭವಿಸಿದ್ದು, ದೋಣಿಯಲ್ಲಿದ್ದ 9 ಮಂದಿ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ದೋಣಿ ತೀವ್ರ ಹಾನಿಗೀಡಾಗಿದೆ.
ನವಮಂಗಳೂರು ಬಂದರಿನಿಂದ 20 ಮೈಲು ದೂರ ಸಮುದ್ರದಲ್ಲಿ ಮಾ. 29ರಂದು ಮಧ್ಯರಾತ್ರಿ ಸಿಂಗಾಪುರಕ್ಕೆ ಸೇರಿದ ಎಂ.ವಿ. ಚೀನಯ ನರೀ ಎಂಬ ಹಡಗು ಮೀನುಗಾರಿಕೆ ನಿರತ “ಜಲಪದ್ಮಾವತಿ’ ದೋಣಿಗೆ ಢಿಕ್ಕಿ ಹೊಡೆದಿದೆ. ಹಡಗು ಸಿಂಗಾಪುರದಿಂದ ಕೊಲಂಬೋಕ್ಕೆ ಹೊರಟಿತ್ತು. ಘಟನೆ ಬಗ್ಗೆ ಕರಾವಳಿ ಕಾವಲು ಪಡೆಯ ಮಂಗಳೂರು ಪೊಲೀಸರು ತನಿಖೆ ನಡೆಸಿದ್ದಾರೆ.
ಮೀನುಗಾರರಿಗೆ ಎಚ್ಚರಿಕೆ
ಈ ರೀತಿ ಸಮುದ್ರದಲ್ಲಿ ಅನಾಹುತಗಳು ಸಂಭವಿಸದಂತೆ ಎಲ್ಲ ಮೀನು ಗಾರಿಕೆ ದೋಣಿಗಳು ಆಟೋಮೆಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್ ಅಳವಡಿಸಬೇಕು, ಎರಡೂ ಬದಿಗಳಲ್ಲಿ ನೇವಿಗೇಶನ್ ದೀಪ ಅಳವಡಿಸಬೇಕು. ಹಡಗುಗಳು ಓಡಾಡುವ ದಾರಿಯಲ್ಲಿ ಬೋಟುಗಳು ಅಡ್ಡ ಸಾಗದಂತೆ ಎಚ್ಚರ
ವಹಿಸಬೇಕು, ಎಲ್ಲ ಬೋಟುಗಳಲ್ಲಿ ಎಐಎಸ್ ಟ್ರಾನ್ಸ್ಪಾಂಡರ್ ಅಳವಡಿಸಿಕೊ ಳ್ಳಬೇಕು. ತುರ್ತು ಸಂದರ್ಭದಲ್ಲಿ ಸಿಎಸ್ಪಿ ಕಂಟ್ರೋಲ್ ರೂಂ 1093ಕ್ಕೆ ಕರೆ ಮಾಡಬಹುದಾಗಿದೆ ಎಂದು ಸಿಎಸ್ಪಿಯ ಎಸ್ಪಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.