ಮಹಿಳೆಯರ ರಕ್ಷಣೆಗಾಗಿ “ರಾಣಿ ಅಬ್ಬಕ್ಕ ಪಡೆ’

ಉಡುಪಿ ಎಸ್‌ಪಿ ನಿಶಾ ಜೇಮ್ಸ್‌ ಪರಿಕಲ್ಪನೆ

Team Udayavani, Apr 3, 2019, 6:30 AM IST

rani-abbakka

ಉಡುಪಿ: ಸಾರ್ವಜನಿಕ ಸ್ಥಳಗಳು ಸೇರಿದಂತೆ ನಗರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವವರ ಮೇಲೆ ಕಣ್ಣಿಟ್ಟು ಮಹಿಳೆಯರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಉಡುಪಿಯಲ್ಲಿ ಆರಂಭಿಸಲಾದ “ರಾಣಿ ಅಬ್ಬಕ್ಕ ಪಡೆ’ಗೆ ಎಸ್‌ಪಿ ನಿಶಾ ಜೇಮ್ಸ್‌ ಅವರು ಮಂಗಳವಾರ ಪೊಲೀಸ್‌ ಧ್ವಜ ದಿನಾಚರಣೆ ಸಂದರ್ಭ ಚಾಲನೆ ನೀಡಿದರು.

ಈ ಹಿಂದೆ ನಿಶಾ ಅವರು ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಆರಂಭಿಸಿದ್ದ “ಓಬವ್ವ ಪಡೆ’, ಸಾಗರದಲ್ಲಿ ಆರಂಭಿಸಿದ್ದ “ರಾಣಿ ಚೆನ್ನಮ್ಮ ಪಡೆ’ಯ ಮಾದರಿಯಲ್ಲಿಯೇ ಉಡುಪಿಯಲ್ಲಿ “ಅಬ್ಬಕ್ಕ ಪಡೆ’ ರಚಿಸಿದ್ದಾರೆ. ಈ ಪಡೆಯಲ್ಲಿ ಮಹಿಳಾ ಎಸ್‌ಐ ಅಥವಾ ಎಎಸ್‌ಐ, ಇಬ್ಬರು ಮಹಿಳಾ
ಪೊಲೀಸ್‌ ಕಾನ್‌ಸ್ಟೆಬಲ್‌ಗ‌ಳು ಹಾಗೂ ಓರ್ವ ಚಾಲಕ ಇರುತ್ತಾರೆ. ಸದ್ಯ ಉಡುಪಿ ಮಹಿಳಾ ಪೊಲೀಸ್‌ ಠಾಣೆಯ ಎಸ್‌ಐ ರೇಖಾ ಅವರು ಈ ಪಡೆಯ ನೇತೃತ್ವ ವಹಿಸಿದ್ದಾರೆ.

ಬೇಡಿಕೆ ಬಂದರೆ ವಿಸ್ತರಣೆ
ಮಹಿಳೆಯ ಸುರಕ್ಷೆಗಾಗಿ ಗಸ್ತುವಾಹನ ಸಹಿತ ಪ್ರತ್ಯೇಕ ಪಡೆ ಬೇಕೆಂಬ ಬೇಡಿಕೆ ಇತ್ತು. ಅಬ್ಬಕ್ಕ ಪಡೆ ಮುಖ್ಯವಾಗಿ ಮಹಿಳೆಯರ ಸುರಕ್ಷತೆಗಾಗಿ ಗಸ್ತು ನಡೆಸಿ ಸ್ಥಳದಲ್ಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿದೆ. ಆರಂಭದಲ್ಲಿ ಹಗಲು ವೇಳೆ ನಗರದಲ್ಲಿ ಕಾರ್ಯಾಚರಿಸಲಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಮತ್ತು ಸೌಲಭ್ಯ (ವಾಹನ, ಸಿಬಂದಿ) ಲಭ್ಯತೆ ಆಧಾರದಲ್ಲಿ ಇತರ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ. ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆಯಾಗುತ್ತಿದ್ದರೆ ಸದ್ಯ ಕಂಟ್ರೋಲ್‌ ರೂಂ ಅಥವಾ ಮಹಿಳಾ ಠಾಣೆಗೆ ದೂರು ನೀಡಬಹುದು. ಮುಂದೆ ಅಬ್ಬಕ್ಕ ಪಡೆಗೆ ಪ್ರತ್ಯೇಕ ಸಂಪರ್ಕ ಸಂಖ್ಯೆ ನೀಡುತ್ತೇವೆ.
-ನಿಶಾ ಜೇಮ್ಸ್‌ , ಎಸ್‌ಪಿ ಉಡುಪಿ

ಎಲ್ಲಿ ಕಾರ್ಯಾಚರಣೆ?
ಬಸ್‌ ನಿಲ್ದಾಣ, ಪಾರ್ಕ್‌ ಪರಿಸರ, ಕಾಲೇಜು, ಶಾಲೆ ಪರಿಸರ ಮೊದಲಾದೆಡೆ ಹೆಚ್ಚಿನ ನಿಗಾ ವಹಿಸಲಿದೆ. ಸದ್ಯ ಉಡುಪಿ ಮತ್ತು ಮಣಿಪಾಲ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿದೆ. ಅಬ್ಬಕ್ಕ ಪಡೆಗೆ ಒದಗಿಸಲಾಗಿರುವ ವಾಹನ ಕೂಡ ಪಿಂಕ್‌ ಬಣ್ಣವನ್ನು ಹೊಂದಿದೆ.

ಟಾಪ್ ನ್ಯೂಸ್

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

Gold Prices India:ಚಿನ್ನ ಮತ್ತೆ ದುಬಾರಿ: ದರ 870ರೂ. ಏರಿಕೆ: ಈಗ 10 ಗ್ರಾಂಗೆ 78,820 ರೂ.

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.