ಪಕ್ಷೇತರರ ಸ್ಪರ್ಧೆ: ಮುರಿಯದ 9ರ ದಾಖಲೆ
Team Udayavani, Apr 3, 2019, 11:23 AM IST
ಮಂಗಳೂರು: ಚುನಾವಣೆ ಅಂದ ಮೇಲೆ ಪಕ್ಷೇತರರ ಸ್ಪರ್ಧೆ ಇರಲೇಬೇಕು. ರಾಷ್ಟ್ರೀಯ – ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ಜತೆಗೆ ಒಂದಷ್ಟು ಪಕ್ಷೇತರರು ಸ್ಪರ್ಧಿಸುವುದು ಮಾಮೂಲಿ. ಮಂಗಳೂರು ಲೋಕಸಭಾ ಕ್ಷೇತ್ರ, ಪುನರ್‌ವಿಂಗಡನೆಯಾದ ಬಳಿಕ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 1957ರಿಂದ 2014ರ ವರೆಗೆ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ ನಾಲ್ಕು ಚುನಾವಣೆಗಳನ್ನು ಹೊರತುಪಡಿಸಿದರೆ ನಿರಂತರವಾಗಿ ಪಕ್ಷೇತರರು ಸ್ಪರ್ಧಿಸುತ್ತಲೇ ಬಂದಿದ್ದಾರೆ. 1996ರಲ್ಲಿ ಅತೀ ಹೆಚ್ಚು ಅಂದರೆ 9 ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದರು ಮತ್ತು ಈ 9ರ ದಾಖಲೆಯನ್ನು ಇಂದಿನವರೆಗೂ ಮುರಿಯಲು ಸಾಧ್ಯವಾಗಿಲ್ಲ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ 1957ರಲ್ಲಿ ಒಂದು, 1967ರಲ್ಲಿ ಮೂರು, 1971ರಲ್ಲಿ ಒಂದು, 1980ರಲ್ಲಿ ಐದು, 1984ರಲ್ಲಿ ಒಂದು, 1989ರಲ್ಲಿ ಐದು, 1991ರಲ್ಲಿ ನಾಲ್ಕು, 1996ರಲ್ಲಿ ಒಂಬತ್ತು, 1998ರಲ್ಲಿ ಒಂದು, 2009ರಲ್ಲಿ ಏಳು, 2014ರಲ್ಲಿ ಏಳು ಮಂದಿ ಪಕ್ಷೇತರರು ಸ್ಪರ್ಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕೂಡ ಏಳು ಮಂದಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1962, 1977, 1999 ಮತ್ತು 2004ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿರಲಿಲ್ಲ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಅತೀ ಹೆಚ್ಚು ಮತಗಳನ್ನು ಗಳಿಸಿದ ದಾಖಲೆ ಕೆ.ಆರ್. ಕಾರಂತ್ ಅವರ ಹೆಸರಿನಲ್ಲಿದೆ. 1967ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಮಧ್ಯೆ ನಿಕಟ ಸ್ಪರ್ಧೆ ಏರ್ಪಟ್ಟು ಕಾರಂತ್ ಅವರು ದ್ವಿತೀಯ ಸ್ಥಾನಿಯಾಗಿದ್ದರು. ಆಗ ಗೆಲುವು ಸಾಧಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿ ಸಿ.ಎಂ. ಪೂಣಚ್ಚ ಅವರು 1,25,162 ಮತಗಳನ್ನು ಗಳಿಸಿದ್ದರು. 1957ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಎಸ್.ಎ. ಶರ್ಮಾ ಎಂಬವರು 21,213 ಮತಗಳನ್ನು ಗಳಿಸಿದ್ದರು.
ಈ ಬಾರಿಯೂ ಏಳು ಮಂದಿ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 2009 ಮತ್ತು 2014ರ ಚುನಾವಣೆ ಯಲ್ಲಿ ತಲಾ 7 ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2019ರ ಚುನಾವಣೆ ಯಲ್ಲೂ 7 ಮಂದಿ ಪಕ್ಷೇತರರು ಸ್ಪರ್ಧಾ ಕಣದಲ್ಲಿರುವುದು ವಿಶೇಷ. 2014ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ದೀಪಕ್ ರಾಜೇಶ್ ಕುವೆಲ್ಲೊ ಮತ್ತು ಮ್ಯಾಕ್ಸಿಂ ಪಿಂಟೋ ಅವರು ಈ ಬಾರಿಯೂ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಪಕ್ಷೇತರರಿಗೆ ಗ್ಯಾಸ್ ಸಿಲಿಂಡರ್, ಆಟೋರಿಕ್ಷಾ, ಹೂಕೋಸು, ಚಾವಿ, ಡೀಸೆಲ್ ಪಂಪ್, ಪ್ರಷರ್ ಕುಕ್ಕರ್, ಮಡಿಕೆ, ಕಹಳೆ ಉದುತ್ತಿರುವ ಮನುಷ್ಯ ಹಾಗೂ ಬ್ಯಾಟ್ ಚಿಹ್ನೆಗಳನ್ನು ವಿತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.