ಕರಕುಶಲಕರ್ಮಿಗಳಿಗೆ ಗೌರವ = ಪರಂಪರೆಗೆ ಗೌರವ
ಸಿಸಿಐ ಪ್ರಶಸ್ತಿ ವಿತರಿಸಿ ಡಾ| ಸಂಧ್ಯಾ ಪೈ
Team Udayavani, Apr 3, 2019, 12:15 PM IST
ಉಡುಪಿ: ಕರಕುಶಲಕರ್ಮಿ ಗಳನ್ನು ಸಮ್ಮಾನಿಸುವುದೆಂದರೆ ನಮ್ಮ
ಪರಂಪರೆ, ಸಂಸ್ಕೃತಿಯನ್ನು ಸಮ್ಮಾನಿಸಿ ದಂತೆ ಎಂದು “ತರಂಗ’ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್. ಪೈ ಬಣ್ಣಿಸಿದರು.
ಮಂಗಳವಾರ ಮಣಿಪಾಲದಲ್ಲಿ ನಡೆದ ಚೆನ್ನೈಯ ಭಾರತೀಯ ಕರಕುಶಲ ಮಂಡಳಿ (ಸಿಸಿಐ) ವಾರ್ಷಿಕ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತ ನಾಡಿದ ಅವರು, ಕರಕುಶಲ ವೃತ್ತಿಪರರನ್ನು ಗುರುತಿಸದೆ ಹೋದರೆ ಮತ್ತು ಮುಂದಿನ ಪೀಳಿಗೆಗೆ ಇದನ್ನು ಹಸ್ತಾಂತರಿಸದಿದ್ದರೆ ಭವಿಷ್ಯದಲ್ಲಿ ಇದಿಲ್ಲವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.
ಅಧ್ಯಕ್ಷತೆಯನ್ನು ಸಿಸಿಐ ಅಧ್ಯಕ್ಷೆ ಗೀತಾರಾಮ್ ವಹಿಸಿದ್ದರು. ವಿವಿಧ ಸಾಧಕ ಕರಕುಶಲಕರ್ಮಿಗಳಾದ ಮಧ್ಯಪ್ರದೇಶದ ಹಾಜಿ ಇಬ್ರಾಹಿಂ ಕತ್ರಿ, ಬೆಂಗಳೂರಿನ ಎನ್. ಗಣೇಶ್, ಅಹ್ಮದಾಬಾದ್‌ನ ಕಾರ್ತಿಕ್ ಚೌಹಾಣ್, ರಾಜಸ್ಥಾನ ಜೈಪುರದ ಮೋಹಿತ್ ಜಾಂಗೇಡ್, ತಮಿಳುನಾಡು ಕಾರೈಕುಡಿಯ ಎಸ್.ಪಿ. ಮುಖಯ್ಯ, ಪಶ್ಚಿಮ ಬಂಗಾಲ ನಾಡಿಯಾದ ಬರೇನ್‌ಕುಮಾರ್ ಬಸಿಕ್, ಒಡಿಶಾ ಪುರಿಯ ಪ್ರಶಾಂತ್ ಮಹಾರಾಣ ಅವರನ್ನು ತಲಾ 10,000 ರೂ., ಶಾಲು, ಹಾರವನ್ನು ಒಳಗೊಂಡ ವಾರ್ಷಿಕ ಪ್ರಶಸ್ತಿಗಳೊಂದಿಗೆ ಪುರಸ್ಕರಿಸ ಲಾಯಿತು. ಸಿಸಿಐ ಮಾಜಿ ಅಧ್ಯಕ್ಷೆ ಉಷಾ ಕೃಷ್ಣ ಸ್ವಾಗತಿಸಿ ಸುಧಾ ರವಿ ವಂದಿಸಿದರು.
ನೈಸರ್ಗಿಕ ಬುದ್ಧಿವಂತರು
ನಾವು ರ್‍ಯಾಂಕ್ ಗಳಿಸಿದವರನ್ನು ಗೌರವಿಸುತ್ತೇವೆ. ಬುದ್ಧಿಮತ್ತೆ ಹೊಂದಿದವರು ಸ್ಮರಣ ಶಕ್ತಿಯಿಂದ ಸಾಮರ್ಥ್ಯವನ್ನು ತೋರಿಸುತ್ತಾರೆ. ಕರಕುಶಲಕರ್ಮಿಗಳಾದರೋ ನೈಸರ್ಗಿಕ ಬುದ್ಧಿವಂತರು ಎಂದು ಕರೆಯಬಹುದು. ಅವರು ಸಹಜವಾದ ನೈಸರ್ಗಿಕ ಭಾವನೆಗಳನ್ನು ಸ್ಮರಣೀಯವಾಗುವಂತೆ ಮತ್ತು ಕಣ್ಣಿಗೆ ಕಾಣುವಂತೆ ಸೃಷ್ಟಿಸುತ್ತಾರೆ. ಈಗ ಮಕ್ಕಳಿಗೆ ನಡೆಯುತ್ತಿರುವ ವಿವಿಧ ಶಿಬಿರಗಳಲ್ಲಿ ಇಂತಹ ಕಲೆಗಳನ್ನೂ ಪರಿಚಯಿಸಬೇಕು. ನಾವೀಗ ಹಣ, ಐಷಾರಾಮಿತನ, ಅಂತಸ್ತು, ಅಧಿಕಾರಗಳ ಹಿಂದೆ ಹೋಗುತ್ತಿರುವುದರಿಂದ ಕರಕುಶಲಕಲೆಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸದೆ ಹೋದರೆ ಈ ಕಲೆ ಉಳಿಯುವುದಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.