ಉದ್ದವೋ ಉದ್ದ ಈ ರೈಲು ಸೇತುವೆ
ಚಂಡ ಮಾರುತಕ್ಕೆ ಜಗ್ಗದು ಭೂಕಂಪಕ್ಕೆ ಬಗ್ಗದು
Team Udayavani, Apr 4, 2019, 6:00 AM IST
ಶತಮಾನಗಳ ಹಿಂದೆ ಮಹಾಗೋಡೆ ಕಟ್ಟಿದವರು ಈಗ 168 ಕಿ.ಮೀ ಉದ್ದದ ಮಹಾ ಸೇತುವೆ ಕಟ್ಟಿದ್ದಾರೆ.
ಏನಾದರೊಂದು ವಿಸ್ಮಯಗಳು, ಅದ್ಭುತಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ ಚೀನಾ ದೇಶದ ತಂತ್ರಜ್ಞರು. ಅವರ ಮಹತ್ಸಾಧನೆಗೆ ಸಾಕ್ಷಿಯಾಗಿದೆ ಈ ರೈಲು ಸೇತುವೆ. ರಾಜಧಾನಿ ಬೀಜಿಂಗ್ ಮತ್ತು ಶಾಂಗೈ ಪಟ್ಟಣಗಳ ನಡುವೆ ಸಂಪರ್ಕ ಕಲ್ಪಿಸುವ ಈ ಬೃಹತ್ ಸೇತುವೆಯ ಉದ್ದ ಎಷ್ಟೆಂದು ಹೇಳಿದರೆ ಬೆರಗಾಗುತ್ತೀರಿ. 102. 4 ಮೈಲು(164.8 ಕಿ. ಮೀ.) ಅದರ ಉದ್ದವಾಗಿದ್ದರೆ, ನೆಲದಿಂದ ಸರಾಸರಿ 260 ಅಡಿಗಳಷ್ಟು ಎತ್ತರದಲ್ಲಿ ಈ ಸೇತುವೆಯಿದೆ.
ಈ ಶತಮಾನದ ಆರಂಭದಿಂದಲೂ ಚೀನಾ ತನ್ನ ಕೈಗಾರಿಕಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಲೇ ಬಂದಿದೆ. ಜಿಯಾಂಗ್ಸು ಪ್ರಾಂತದಲ್ಲಿ ಯಾಂಗ್ತೈ ನದಿಗೆ ಸೇತು ಸಂಪರ್ಕವಾದರೆ ಶಾಂಗೈ, ನಾನ್ಸಿಂಗ್, ಬೀಜಿಂಗ್ ನಗರಗಳು ಒಂದಾಗುವುದು ಸುಲಭ. ಬಹು ಕಡಿಮೆ ವೆಚ್ಚದಲ್ಲಿ ಸರಕುಗಳನ್ನು ಸಾಗಿಸಬಹುದೆಂಬ ಲೆಕ್ಕಾಚಾರ ಹಾಕಿ 2006ರಲ್ಲಿ ನೂತನ ಧನ್ಯಾಂಗ್ ಕುನ್ಶಾನ್ ಸೇತುವೆಯ ನೀಲಿ ನಕ್ಷೆ ತಯಾರಿಸಿತು. ನಾಲ್ಕು ವರ್ಷಗಳ ಕಾಲ ಹತ್ತು ಸಾವಿರ ಕಾರ್ಮಿಕರು ನಿರಂತರ ದುಡಿದರು. 2010ರಲ್ಲಿ ಸೇತುವೆಯ ಕಾಮಗಾರಿ ಮುಕ್ತಾಯವಾಯಿತು.
ಚಂಡಮಾರುತ ತಡೆಯಬಲ್ಲುದು
ಎರಡು ಸಾವಿರ ಕಂಭಗಳ ಮೇಲೆ ಸೇತುವೆ ನಿಂತಿದೆ. 45 ಸಾವಿರ ಟನ್ ಉಕ್ಕಿನ ಕಂಬಿಗಳು ಇದರ ನಿರ್ಮಾಣಕ್ಕೆ ಬಳಕೆಯಾಗಿವೆ. ನೈಸರ್ಗಿಕ ವಿಪತ್ತುಗಳಿಗೆ ಸುಲಭವಾಗಿ ಜಗ್ಗುವುದಿಲ್ಲ. ಚಂಡಮಾರುತಕ್ಕೆ ಬಗ್ಗುವುದಿಲ್ಲ. ಎಂಟು ಭೂಕಂಪಗಳನ್ನು ಎದುರಿಸಿ ಸ್ಥಿರವಾಗಿ ಉಳಿಯಬಲ್ಲ ಚೈತನ್ಯವೂ ಇದೆ. ಮೂರು ಲಕ್ಷ ಟನ್ ತೂಕದ ನೌಕಾಘಾತಕ್ಕೂ ಮುರಿಯುವುದಿಲ್ಲ ಎಂಬ ಭರವಸೆ ತಂತ್ರಜ್ಞರಿಗೂ ಇದೆ. ಇದರಲ್ಲಿ ಸೇತುವೆಯ ಮಧ್ಯೆ ರೈಲುಗಳನ್ನು ನಿಲ್ಲಿಸಲು ಬೇಕಿದ್ದರೆ ಪ್ರತ್ಯೇಕ ಕಂಬಿಗಳ ವ್ಯವಸ್ಥೆಯೂ ಇದೆ.
ಹಳೆಯ ರೆಕಾರ್ಡ್ ಮುರಿದು
ಈ ಹಿಂದೆ ಚೀನಾದಲ್ಲಿಯೇ ಇರುವ ನಲ್ಯಾಂಗ್ಟಾಂಗ್ ಕ್ವಿಂಗ್ಸ್ಟಿಯಾನ್ ಸೇತುವೆ ಅತಿ ಉದ್ದದ ರೈಲು ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಈಗ ಆ ದಾಖಲೆ ಧನ್ಯಾಂಗ್ ಪಾಲಾಗಿದೆ. ಅಲ್ಲದೆ ಜಗತ್ತಿನ ಪ್ರವಾಸಿಗರನ್ನೆಲ್ಲ ಸೆಳೆಯುತ್ತಿದೆ.
ಪ್ರಕೃತಿಗೆ ಗೌರವ
ಯಾವುದೇ ನಿರ್ಮಾಣ ಕಾರ್ಯದಿಂದ ಕಾಡು, ನದಿ ಮುಂತಾದ ನೈಸರ್ಗಿಕ ಸಂಪತ್ತಿಗೆ ಆಪತ್ತು ಎದುರಾಗುತ್ತದೆ. ಆದರೆ ಇಷ್ಟೊಂದು ಬೃಹತ್ತಾದ ಯೋಜನೆಯಲ್ಲಿ ಪ್ರಕೃತಿಗೆ ಯಾವುದೇ ಆಪತ್ತು ಎದುರಾಗದಂತೆ ಕೆಲಸ ಮಾಡಿರುವುದು ತಂತ್ರಜ್ಞರ ಹೆಗ್ಗಳಿಕೆ. ಈ ಸೇತುವೆ ಕೆಳಗೆ ಕೇವಲ ನದಿ ಇದೆ, ಭತ್ತದ ಹೊಲಗಳು, ವಿಶಾಲವಾದ ಮೈದಾನಗಳು, ಮನೆಗಳು, ತೋಟಗಳು, ಕಾಡುಗಳು ಸಕಲವೂ ಇದೆ. ಒಂದನ್ನೂ ಹಾಳು ಮಾಡದೆ ತಗ್ಗು ಪ್ರದೇಶವನ್ನು ದಾಟಲು ಇಷ್ಟುದ್ದದ ಸೇತುವೆ ನಿರ್ಮಿಸಿದುದರಿಂದ ಸಾಕಷ್ಟು ಆಸ್ತಿ ಪಾಸ್ತಿಗಳು, ಕೊಳಗಳು, ಕಾಲುವೆಗಳು ಮುಕ್ಕಾಗದೆ ಉಳಿದವು.
– ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್ ಮೇಜರ್
Niveus Mangalore Marathon 2024: ನ.10: ನೀವಿಯಸ್ ಮಂಗಳೂರು ಮ್ಯಾರಥಾನ್
Ghaati: ಸ್ವೀಟಿ ಅಲ್ಲ ಘಾಟಿ; ಫಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ
Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್‌ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.